
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ 2026 ರ ಎರಡನೇ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಉತ್ಪನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಹಾಗೂ ರಘುವಂಶಿ ಅವರ ಅರ್ಧಶತಕದ ನೆರವಿನಿಂದ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ರಿಕಲ್ಟನ್ ಅವರ ಅರ್ಧಶತಕದ ನೆರವಿನಿಂದ ಈ ಬೃಹತ್ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿತು. ಮೂಲಕ ಮುಂಬೈ ಐಪಿಎಲ್ ಐತಿಹಾಸದಲ್ಲಿ ಅತ್ಯಧಿಕ ಮೊತ್ತ ಬೆನ್ನಟ್ಟಿದ ದಾಖಲೆ ಬರೆಯುವುದರ ಜೊತೆಗೆ ತನ್ನ ಸೋಲಿನ ಸರಣಿಗೂ ಅಂತ್ಯ ಹಾಡಿದೆ.
ವಾಸ್ತವವಾಗಿ ಮುಂಬೈ ಇಂಡಿಯನ್ಸ್ ತಂಡ 2012 ರ ಐಪಿಎಲ್ ನಂತರ ಇಲ್ಲಿಯವರೆಗೆ ಪ್ರತಿ ಆವೃತ್ತಿಯ ತನ್ನ ಮೊದಲ ಪ್ರದರ್ಶನ ಸತತ ಸೋಲುಗಳನ್ನು ಕಂಡಿತ್ತು. ಅಂದರೆ ಸತತ 13 ಆವೃತ್ತಿಗಳ ಮೊದಲ ಮುಂಬೈಗೆ ಗೆಲುವು ದಕ್ಕಲಿಲ್ಲ. ಆದರೆ ಈ ಸತತ ಸೋಲಿನ ಸರಣಿಯನ್ನು 2026 ರ ಆವೃತ್ತಿಯಲ್ಲಿ ಮುರಿಯುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಗಿದೆ. ಹಾಗೆಯೇ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಗುರಿ ಬೆನ್ನಟ್ಟಿದ ದಾಖಲೆಯನ್ನು ಬರೆದಿದೆ. 2021 ರಲ್ಲಿ ಮುಂಬೈ, ಸಿಎಸ್ಕೆ ನೀಡಿದ್ದ 219 ರನ್ಗಳ ಗುರಿ ಬೆನ್ನಟ್ಟಿ ಗೆದ್ದಿತ್ತು. ಇದೀಗ 221 ರನ್ ಬೆನ್ನಟ್ಟಿ ಮುಂಬೈ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.