
ಬೆಂಗಳೂರು, (ಮಾರ್ಚ್ 29): ಚಿನ್ನಸ್ವಾಮಿ ಸ್ಪೇಡಿಯಂ (ಚಿನ್ನಸ್ವಾಮಿ ಕ್ರೀಡಾಂಗಣ)ಬಳಿಕ ಕಾಲ್ತುಳಿ ಸಂಭವಿಸಿ 11 ಆರ್ಸಿಬಿ ಅಭಿಮಾನಿಗಳು ದುರಂತ ಸಾವು ಕಂಡಿದ್ದರು. ಈ ಕರಾಳ ಘಟನೆ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳ ಸುಸೂತ್ರವಾಗಿ ನಡೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಹೌದು… ನಿನ್ನೆ (ಮಾರ್ಚ್ 28) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್ ಸಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಮೊದಲ ಪಂದ್ಯ ಅಹಿತಕ, ಗೊಂದಲ ಆಗದಂತೆ ಸುಸೂತ್ರವಾಗಿ ನಡೆದಿದೆ. ವೀಕ್ಷಿಸು ಸ್ಟೇಡಿಯಂ ಪ್ರವೇಶ ಹಾಗೂ ನಿರ್ಗಮನದ ವೇಳೆ ನೂಕು ನುಗ್ಗಲು, ಗೊಂದಲ ಆಗದ ರೀತಿಯಲ್ಲಿ ನಿರ್ವಹಣೆ ಮಾಡಿದೆ. ಸ್ಟೇಡಿಯಂ ಬಳಿ ಟೀ ಶರ್ಟ್ ಕೂಡ ಮಾರಲು ಅವಕಾಶ ಕೊಟ್ಟಿರಲಿಲ್ಲ. ಈ ಟ್ರಾಫಿಕ್ ಸಮಸ್ಯೆ ತಡೆಯಲು ಪಂದ್ಯ ವೀಕ್ಷಣೆಗೆ ಬರುವವರಿಗೆ ರಸ್ತೆ ಬದಲಿಗೆ ಮೈದಾನದೊಳಗೆ ಸರದಿ ಸಾಲು ವ್ಯವಸ್ಥೆ ಮಾಡಲಾಗಿದೆ. ಕೆಎಸ್ಸಿಎ ಜತೆ ಸಮನ್ವಯದೊಂದಿಗೆ ಪೊಲೀಸ್ ಇಲಾಖೆ ಕಳೆದ ತಿಂಗಳಿನಿಂದ ನಡೆದಿದ್ದ ಭದ್ರತೆಯನ್ನು ಸಿದ್ಧಪಡಿಸಿದ್ದು, ಪೊಲೀಸರ ಅಚ್ಚುಕಟ್ಟು ನಿರ್ವಹಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.