ಇಂಡಿಯನ್ ಪ್ರಿಮಿಯರ್ ಲೀಗ್ ಸೀಸನ್-18 ರಲ್ಲಿ (IPL 2025) ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂದಿನ ಸೀಸನ್ ಗೂ ಮುನ್ನ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳುವುದು ಖಚಿತ. ಇದಾಗ್ಯೂ ಆರ್ಸಿಬಿ ತಂಡಕ್ಕೆ ಇಬ್ಬರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಐಪಿಎಲ್ ನಿಯಮದ ಪ್ರಕಾರ, ಬದಲಿ ಆಟಗಾರನಾಗಿ ಬಂದ ಆಟಗಾರರನ್ನು ಮುಂದಿನ ಸೀಸನ್ಗೆ ರಿಟೈನ್ ಮಾಡಿಕೊಳ್ಳಬಹುದು. ಆದರೆ ತಾತ್ಕಾಲಿಕ ಬದಲಿಯಾಗಿ ಆಯ್ಕೆಯಾದ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಅವಕಾಶವಿಲ್ಲ.
ಆರ್ಸಿಬಿ ತಂಡಕ್ಕೆ ತಾತ್ಕಾಲಿಕ ಬದಲಿಯಾಗಿ ಇಬ್ಬರು ಆಟಗಾರರು ಎಂಟ್ರಿ ಕೊಟ್ಟಿದ್ದರು. ಭಾರತ-ಪಾಕ್ ಯುದ್ಧ ಭೀತಿ ಹಿನ್ನಲೆ ಐಪಿಎಲ್ 2025 ಅನ್ನು ಕೆಲ ವಾರ ನಿಲ್ಲಿಸಲಾಗಿದೆ. ಹೀಗಾಗಿ ಅಂತಿಮ ಪಂದ್ಯಗಳಿಗೆ ಜೇಕಬ್ ಬೆಥೆಲ್ ಹಾಗೂ ಲುಂಗಿ ಗಿಡಿ ಅಲಭ್ಯ ಎನ್. ಇದೇ ವೇಳೆ ಆರ್ಸಿಬಿ ಇಬ್ಬರನ್ನು ತಾತ್ಕಾಲಿಕ ಬದಲಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರೆಂದರೆ…
ಬ್ಲೆಸಿಂಗ್ ಮುಝರಬಾನಿ: ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ ಆರ್ಸಿಬಿಯ ಕೊನೆಯ ಎರಡು ಪಂದ್ಯಗಳ ವೇಳೆ ತಂಡದಲ್ಲಿ ಭಾಗವಹಿಸಿದ್ದರು. ಲುಂಗಿ ಎನ್ ಗಿಡಿ ಅವರ ಬದಲಿಗೆ ಬ್ಲೆಸಿಂಗ್ ಮುಝರಬಾನಿಯನ್ನು ಮುಂದಿನ ಸೀಸನ್ಗಾಗಿ ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಮುಝರಬಾನಿ ಆರ್ ಸಿಬಿ ತಾತ್ಕಾಲಿಕ ಬದಲಿ ಆಟಗಾರನಾಗಿ ಎಂಟ್ರಿ ಕೊಟ್ಟಿದ್ದರು.
ಟಿಮ್ ಸೈಫರ್ಟ್: ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ಕಾರಣ ಆರ್ಸಿಬಿ ನ್ಯೂಜಿಲೆಂಡ್ನ ಕೀಪರ್ ಟಿಮ್ ಸೈಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡರು. ಆದರೆ ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆಯಾಗಿರುವ ಸೈಫರ್ಟ್ ಅವರನ್ನು ಮುಂದಿನ ಸೀಸನ್ಗಾಗಿ ಆರ್ಸಿಬಿ ರಿಟೈನ್ ಮಾಡಿಕೊಳ್ಳಲಾಗಿದೆ. ಹೀಗಾಗಿ ಈ ಇಬ್ಬರು ಆಟಗಾರರು ಆರ್ಸಿಬಿ ತಂಡದ ರಿಟೈನ್ನಲ್ಲಿ ಸ್ಥಾನ ಪಡೆಯುವುದಿಲ್ಲ.




