17

Image Credit : Getty
ಮಸುಕಾಯ್ತಾ ಐಪಿಎಲ್ ಖದರ್?
ವಿಶ್ವದ ಅತಿ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಶುರುವಾಗಿದೆ.
27
Image Credit : ANI
ಐಪಿಎಲ್‌ನ ಬ್ರಾಂಡ್ ಮೌಲ್ಯ ಗಣನೀಯವಾಗಿ ಕುಸಿತ
ವರದಿಗಳ ಪ್ರಕಾರ, ಐಪಿಎಲ್‌ನ ಬ್ರಾಂಡ್ ಮೌಲ್ಯ ಗಣನೀಯವಾಗಿ ಕುಸಿದಿದ್ದು, ತಂಡಗಳ ಮೌಲ್ಯದಲ್ಲೂ ಭಾರೀ ಕುಸಿತ ಕಂಡಿದೆ.
37
Image Credit : Getty
ಬ್ರಾಂಡ್ ಫೈನಾನ್ಸ್ ವರದಿ
ವಿಶ್ವದ ಪ್ರಮುಖ ಬ್ರ್ಯಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆಯಾಗಿರುವ ಬ್ರಾಂಡ್ ಫೈನಾನ್ಸ್ ವರದಿ ಪ್ರಕಾರ, ಹಾಲಿ ಚಾಂಪಿಯನ್ ಆರ್‌ಸಿಬಿ ಸೇರಿದಂತೆ ಬಹುತೇಕ ಎಲ್ಲಾ ತಂಡಗಳ ಮೌಲ್ಯ ಕುಸಿದಿದೆ.
47
Image Credit : RCB\Instagram
ಆರ್‌ಸಿಬಿ ಬ್ರ್ಯಾಂಡ್ ವ್ಯಾಲ್ಯೂ 10% ಕುಸಿತ
ಆರ್‌ಸಿಬಿ ಮೌಲ್ಯ ಕಳೆದ ಬಾರಿಗಿಂದ ಶೇ.10ರಷ್ಟು ಕುಸಿತ ಕಂಡಿದೆ. ಗರಿಷ್ಠ ಪ್ರಮಾಣದಲ್ಲಿ ಮೌಲ್ಯ ಕುಸಿತ ಕಂಡ ತಂಡ ರಾಜಸ್ಥಾನ ರಾಯಲ್ಸ್. ತಂಡದ ಮೌಲ್ಯ ಶೇ.35ರಷ್ಟು ಕುಸಿದಿದೆ.
57
Image Credit : Getty
ಆರೆಂಜ್ ಆರ್ಮಿ 34% ಕುಸಿತ
ಉಳಿದಂತೆ ಸನ್‌ರೈಸರ್ಸ್ ಹೈದರಾಬಾದ್‌ನ ಮೌಲ್ಯ ಶೇ.34, ಕೆಕೆಆರ್ ಮೌಲ್ಯ ಶೇ.33, ಡೆಲ್ಲಿ ಮೌಲ್ಯ ಶೇ.26, ಚೆನ್ನೈ ಶೇ.24, ಮುಂಬೈ ಶೇ.9, ಪಂಜಾಬ್ ಶೇ.3, ಲಖನೌ ಮೌಲ್ಯ ಶೇ.2ರಷ್ಟು ಕುಸಿತ ಕಂಡಿದೆ.
67
Image Credit : ANI
ಗುಜರಾತ್ ಟೈಟಾನ್ಸ್ ತಂಡದ ಬ್ರ್ಯಾಂಡ್ ವ್ಯಾಲ್ಯೂ ಏರಿಕೆ
10 ತಂಡಗಳ ಪೈಕಿ ಗುಜರಾತ್ ಟೈಟಾನ್ಸ್ ಮೌಲ್ಯ ಮಾತ್ರ ಏರಿಕೆ ಕಂಡಿದ್ದು, ಶೇ.2ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
77
Image Credit : ANI
ಬ್ರ್ಯಾಂಡ್ ವ್ಯಾಲ್ಯೂ ಶೇ.20ರಷ್ಟು ಕುಸಿತ!
ಒಟ್ಟಾರೆ ಐಪಿಎಲ್‌ನ ಬ್ರಾಂಡ್ ಮೌಲ್ಯವೂ ಕುಸಿದಿದ್ದು, 2024ಕ್ಕೆ ಹೋಲಿಸಿದರೆ ಶೇ.20ರಷ್ಟು ಕುಸಿತವಾಗಿದೆ ಎಂದು ಬ್ರಾಂಡ್ ಫೈನಾನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿಮೊನ್ ಫ್ರಾನ್ಸಿಸ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.