
ಐಪಿಎಲ್ (ಐಪಿಎಲ್) ಈ ಸೀಸನ್ ಅಲ್ಲಿ ಆರ್ಸಿಬಿ ಮೊದಲ ಎರಡು ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡೂ ತಂಡಗಳು ಸಮಬಲದಲ್ಲಿವೆ ಎಂದರೂ ತಪ್ಪಾಗಲಾರದು. ಇಂದು (ಏಪ್ರಿಲ್ 10) ಎರಡೂ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಮೇಲಿನ ಗೆಲವು ಯಾರ ಪಾಲಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ. ಹೀಗಿರುವಾಗಲೇ ಜೋಶ್ ಹೆಜಲ್ ವುಡ್ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಆರ್ಸಿಬಿಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಉತ್ತಮ ರೀತಿಯಲ್ಲಿದೆ. ಹೆಜಲ್ವುಡ್ ಅಲಭ್ಯತೆಯಲ್ಲಿ ಜೇಕಬ್ ಡಫ್ಫಿ ಅವರು ಉತ್ತಮ ಬೌಲಿಂಗ್ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಈ ಮೂಲಕ ಹೆಜಲ್ವುಡ್ ಇಲ್ಲ ಎಂಬ ಕೊರುಗನ್ನು ನೀಗಿಸಲಾಗುತ್ತಿದೆ. ಈ ಮಧ್ಯೆ ಹೆಜಲ್ವುಡ್ ಕೂಡ ಫೀಲ್ಡ್ಗೆ ಇಳಿಯಲಿ ಎಂಬುದು ಅಭಿಮಾನಿಗಳ ಕೋರಿಕೆ. ಅದು ತೋರಿಸುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.
ಹೆಜಲ್ವುಡ್ ಅವರು ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಸಂಪೂರ್ಣ ಫಿಟ್ ಆಗುವ ಪ್ರಯತ್ನದಲ್ಲಿದ್ದಾರೆ. ಒಂದೊಮ್ಮೆ ಫಿಟ್ನೆಸ್ ಇಲ್ಲದೆ ಕಣಕ್ಕೆ ಇಳಿದರೆ ಅದು ದೀರ್ಘ ಕಾಲದ ಗಾಯಕ್ಕೆ ಒಳಗಾಗುವಂತೆ ಮಾಡುವ ಭಯ ಕಾಡಿದೆ. ಹೀಗಾಗಿ, ಸಂಪೂರ್ಣ ಫಿಟ್ ಆದಂತೂ ಅವರನ್ನು ಇಳಿಸುವ ಆಲೋಚನೆ ತಂಡಕ್ಕೆ ಇಲ್ಲ. ಈ ಮೊದಲು ಚೆನ್ನೈ ವಿರುದ್ಧದ ಆಟಗಾರ ನೆಟ್ಸ್ ನಲ್ಲಿ ಹೆಜಲ್ವುಡ್ ಕಾಣಿಸಿಕೊಂಡಿದ್ದರು. ಹೀಗಾಗಿ, ಅವರು ಫಿಟ್ನೆಸ್ಗೆ ಇರಬಹುದೆಂದು ಸೂಚಿಸಲಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಮಾಜಿ ನಾಯಕನಿಗೆ ಗೆಲುವನ್ನು ಅರ್ಪಿಸಿದ LSG ಫಿನಿಶರ್ ಮುಕುಲ್ ಚೌಧರಿ
ಇಂದಿನ ಪಂದ್ಯ ಗುವಾಹಟಿಯಲ್ಲಿ. ಆರ್ಸಿಬಿ ವಿರುದ್ಧ ಆರ್ ಆರ್ ಪಂದ್ಯಕ್ಕೆ ಮಳೆ ಬರುವ ಸೂಚನೆ ಎಂದು ಹೇಳಲಾಗುತ್ತಿಲ್ಲ. ಸಂಜೆ ವೇಳೆಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಆರ್ ಆರ್ ತಂಡದ ಓಪನಿಂಗ್ ಪೇರ್ ಎನಿಸಿಕೊಂಡಿರುವ ವೈಭವ್ ಸೈರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಕಟ್ಟಿ ಹಾಕುವ ಚಾಲೆಂಜ್ ಆರ್ಸಿಬಿಗೆ ಇದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.