10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್, ಹೊರ್ಮುಜ್ ಜಲಸಂಧಿಗೆ ಇರಾನ್ ನಿರ್ಬಂಧ

10 ತೈಲ ಹಡಗುಗಳನ್ನು ಉಡಾಯಿಸಿದ ಇರಾನ್, ಹೊರ್ಮುಜ್ ಜಲಸಂಧಿಗೆ ಇರಾನ್ ನಿರ್ಬಂಧ


ಹಾರ್ಮುಜ್ ಜಲಸಂಧಿಗೆ ನಿರ್ಬಂಧ ಹೇರಿಕೆ ಇರಾನ್ ಘೋಷಿಸಿದ್ದು, ಈ ನಿರ್ಬಂಧವನ್ನು ಉಲ್ಲಂಘಿಸಿ ತೈಲ ಸಾಗಿಸುತ್ತಿದ್ದ 10 ಹಡಗುಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಮಾಹಿತಿ ನೀಡಿದೆ. ಈ ಜಲಸಂಧಿಯು ವಿಶ್ವದ ಒಟ್ಟು ತೈಲ ಪೂರೈಕೆಯ ಶೇಕಡ 20ರಷ್ಟು ಭಾಗವನ್ನು ಸಾಗಿಸುವ ಪ್ರಮುಖ ಜಲಮಾರ್ಗವಾಗಿದೆ. ಈ ಘಟನೆಯಿಂದ ಭಾರತದ ಮೇಲೆ ನೇರ ಪರಿಣಾಮ ಬೀರಿದೆ. ಸುಮಾರು 37 ಭಾರತೀಯ ಹಡಗುಗಳು, 10,000 ಕೋಟಿ ರೂ. ಮೌಲ್ಯ ಸಿಕ್ಕಿದ ಸರಕುಗಳು ಮತ್ತು 1,109 ನಾವಿಕರೊಂದಿಗೆ ಹೊರ್ಮುಜ್ ಜಲಸಂಧಿ ಅಥವಾ ಒಮಾನ್ ಕೊಲ್ಲಿಯಲ್ಲಿ ಹಾಕಿವೆ. ಭಾರತವು ಈ ಜಲಸಂಧಿಯ ಮೂಲಕ ಪ್ರತಿದಿನ ಸುಮಾರು 26 ಲಕ್ಷ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಸದ್ಯದ ಪರಿಸ್ಥಿತಿ ಮುಂದುವರಿದರೆ, ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಭಾರತ ಸರ್ಕಾರ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚಿಂತಿಸುತ್ತಿದ್ದರೂ, ತೈಲ ಕೊರತೆ ಮತ್ತು ಬೆಲೆ ಏರಿಕೆಯ ಲಕ್ಷಣಗಳು ಗೋಚರಿಸುತ್ತಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *