
ಜನವರಿ, ಮಾರ್ಚ್ 30: ಇರಾನ್ ಮೇಲೆ ದಾಳಿ ಮಾಡಿ ಕ್ಷಿಪ್ರವಾಗಿ ಸಮರ ಅಂತ್ಯಗೊಳಿಸುವ ಲೆಕ್ಕಾಚಾರ ಹಾಕಿದ್ದ ಅಮೆರಿಕಕ್ಕೆ ಈ ಯುದ್ಧ ನಿರೀಕ್ಷೆಮೀರಿ ದೀರ್ಘವಾಗುತ್ತಿದೆ. ಇರಾನ್ ಪ್ರತಿರೋಧಕ್ಕೆ ಅಮೆರಿಕ ಮತ್ತು ಇಸ್ರೇಲ್ ಹೈರಾಣಾಗಿವೆ. ಇದೀಗ ಅಮೆರಿಕವು ಭೂದಾಳಿ ಮೂಲಕ ಇರಾನ್ ಅನ್ನು ಕಟ್ಟಿಹಾಕಲು ಯೋಜಿಸುತ್ತಿರುವ ಸುದ್ದಿ ಇದೆ. ಇದಕ್ಕೆ ಇಂಬುಕೊಡುವಂತೆ ಸಾವಿರಾರು ಅಮೆರಿಕನ್ ಸೈನಿಕರು ವಿವಿಧ ಕಡೆ ಬೀಡುಬಿಟ್ಟು ಸಜ್ಜಾಗಿದ್ದಾರೆ. ಇರಾನ್ ಖರ್ಗ್ ದ್ವೀಪ ಸೇರಿದಂತೆ ಕೆಲ ನಿರ್ದಿಷ್ಟ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದು ಅಮೆರಿಕದ ತಂತ್ರಜ್ಞಾನದಂತಹ ಸುದ್ದಿಗಳಿವೆ.
ಇರಾನ್‌ನ ಆರ್ಥಿಕ ಜೀವನಾಳ ಈ ಖರ್ಗ್ ದ್ವೀಪ
ಇತರ ಪಶ್ಚಿಮ ಏಷ್ಯಾನ್ ರಾಷ್ಟ್ರಗಳಂತೆ ಇರಾನ್ಗೂ ತೈಲ ಮಾರಾಟವೇ ಪ್ರಮುಖ ಆದಾಯ ಮೂಲ. ಇರಾನ್ ಬಳಿ ಅಪಾರ ಪ್ರಮಾಣದ ತೈಲ ಸಂಪತ್ತು ಇದೆ. ಒಂದು ಅಂದಾಜು ಪ್ರಕಾರ 208.6 ಬಿಲಿಯನ್ ಬ್ಯಾರಲ್ ತೈಲ ನಿಕ್ಷೇಪವು ಇರಾನ್‌ನಲ್ಲಿ ಸದ್ಯದವರೆಗೆ ಇದೆ. ಇದು ಒಟ್ಟು ತೈಲ ಸಂಪತ್ತಿನ ಶೇ. 12ರಷ್ಟು ಎಂದರೆ ಅದೆಷ್ಟು ಬೃಹತ್ ಇರಬಹುದು.
ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್, ಎಲ್ಪಿಜಿ, ನ್ಯಾಚುರಲ್ ಗ್ಯಾಸ್ ಪೂರೈಕೆ ಹೇಗಿದೆ? ಸರ್ಕಾರದಿಂದ ಮಾಹಿತಿ
ಸದ್ಯ ಅಮೆರಿಕ ಹಾಕಿರುವ ನಿಷೇಧದ ನಡುವೆಯೂ ಇರಾನ್ ದೇಶವು ದಿನಕ್ಕೆ ಸುಮಾರು 40 ಲಕ್ಷ ಬ್ಯಾರಲ್ ಕಚ್ಛಾ ತೈಲವನ್ನು ಹೊರತರುತ್ತದೆ. ಆಂತರಿಕ ಬಳಕೆ ಬಿಟ್ಟು ಅದು ರಫ್ತು ಮಾಡುವ ತೈಲ ದಿನಕ್ಕೆ 11 ರಿಂದ 15 ಲಕ್ಷ ಬ್ಯಾರಲ್‌ನಷ್ಟು ಎನ್ನಲಾಗುತ್ತಿದೆ.
ಖರ್ಗ್ ದ್ವೀಪದಲ್ಲೇ ಈ ತೈಲ ಸಂಪತ್ತು ಇಲ್ಲ…
ಇರಾನ್ ಖರ್ಗ್ ದ್ವೀಪವು ಒಂದು ಪ್ರಮುಖ ಬಂದರಿನಂತೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಬೃಹತ್ತಾದ ಶಿಪ್ ಟರ್ಮಿನಲ್ ಇದೆ. ಇರಾನ್ ಶೇ. 90ಕ್ಕೂ ಹೆಚ್ಚು ತೈಲ ರಫ್ತು ಇದೆ ಟರ್ಮಿನಲ್ ಮೂಲಕ ನಡೆಯುತ್ತಿದೆ. ಅಂದರೆ ಖರ್ಗ್ ದ್ವೀಪವು ಇರಾನ್‌ನ ಆರ್ಥಿಕ ಜೀವನಾಡಿಯೇ ಆಗಿಹೋಗಿದೆ.
ಇದನ್ನೂ ಓದಿ: ಹಾರ್ಮುಜ್ ನಂತರ ಮತ್ತೊಂದು ಜಲಸಂಧಿ ಕಂಟಕ; ಜಗತ್ತಿಗೆ ಕಾದಿದೆ ಡಬಲ್ ಶಾಕ್
ಇರಾನ್ ಅಪಾರ ತೈಲ ಸಂಪತ್ತಿನ ಮೇಲೆ ಅಮೆರಿಕ ಮತ್ತು ಟ್ರಂಪ್ನ ಕಣ್ಣು ನೆಟ್ಟಿದೆ. ಇದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕಕ್ಕೆ ಈಗ ಖರ್ಗ್ ದ್ವೀಪ ಬೇಕು. ಇದು ಅದರ ತೆಕ್ಕೆಗೆ ಹೋದರೆ ಇರಾನ್‌ನ ಜುಟ್ಟು ಜನಿವಾರ ಅಮೆರಿಕಕ್ಕೆ ಸಿಕ್ಕಂತಾಗುತ್ತದೆ. ಇದೇನಾದರೂ ಸಾಧ್ಯವಾದಾಗ ವಿಶ್ವದ ಎಲ್ಲಾ ತೈಲ ಸಂಪತ್ತು ಅಮೆರಿಕದ ಪ್ರತ್ಯಕ್ಷ ಮತ್ತು ಪರೋಕ್ಷ ನಿಯಂತ್ರಣಕ್ಕೆ ಬಂದಂತಾಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ