Iran Israel War: ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್​ನಲ್ಲಿ ಸಿಲುಕಿಕೊಂಡವರೆಷ್ಟು ಗೊತ್ತಾ?

Iran Israel War: ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್​ನಲ್ಲಿ ಸಿಲುಕಿಕೊಂಡವರೆಷ್ಟು ಗೊತ್ತಾ?


ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್‌ನಲ್ಲಿ ಸಿಲುಕಿದವರೆಷ್ಟು ಗೊತ್ತಾ?

ಬೆಂಗಳೂರು, ಮಾರ್ಚ್ 01: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಇರಾನ್ ಇಸ್ರೇಲ್ ಯುದ್ಧ ಮಧ್ಯಪ್ರಾಚ್ಯದ ಹಲವು ದೇಶಗಳಿಗೆ ವ್ಯಾಪಿಸಿದ್ದು, ಭದ್ರತಾ ಆತಂಕ ಹೆಚ್ಚಿಸಿದೆ. ವಿಮಾನ ಸಂಚಾರದಲ್ಲಿ ವ್ಯತ್ಯಯದ ಪರಿಣಾಮವಾಗಿ ದುಬೈ, ಬಹ್ರೇನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರತೀಯರು, ವಿಶೇಷವಾಗಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಬಹ್ರೇನ್ ಮತ್ತು ದುಬೈ ನಗರಗಳ ಭದ್ರತಾ ಕ್ರಮಗಳು ಕಠಿಣವಾಗಿದ್ದು, ವಿಮಾನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಬೆಳವಣಿಗೆಯಿಂದಾಗಿ ವಿದೇಶ ಪ್ರವಾಸದಲ್ಲಿದ್ದ ಮತ್ತು ಉದ್ಯೋಗ ನಿಮಿತ್ತ ತೆರಳಿದ್ದ ಅನೇಕ ಕನ್ನಡಿಗರು ಅಲ್ಲಿ ಸಿಲುಕಿದ್ದಾರೆ.

ಬಹ್ರೇನ್‌ನಲ್ಲಿ ಸಿಲುಕಿದವರೆಷ್ಟು?

ಬಹ್ರೇನ್ ರಾಜಧಾನಿ ಮನಾಮಾ ನಗರದಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂಗಡಿಹಳ್ಳಿ ಗ್ರಾಮದ ಪಂಜು, ಜಮುನ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ಸೇರಿದಂತೆ ಒಟ್ಟು ಆರು ಮಂದಿ ಕನ್ನಡಿಗರು ಸಿಲುಕಿದ್ದಾರೆ. ತಾವು ವಾಸಿಸುತ್ತಿರುವ ಕಟ್ಟಡದ ಪಕ್ಕದಲ್ಲೇ ಬಾಂಬ್ ಸ್ಫೋಟವಾಗುತ್ತಿರುವುದನ್ನು ಅವರು ತಿಳಿಸಿದ್ದು, ಅವರ ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದಾರೆ. ತಮ್ಮವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ದುಬೈನಲ್ಲಿ ಸಿಲುಕಿ ಕನ್ನಡಿಗರ ಪರದಾಟ!

ದುಬೈನಲ್ಲಿ ಕೂಡ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಪ್ರವಾಸದ ವೇಳೆ ಅಲ್ಲೇ ಸಿಲುಕಿದ್ದಾರೆ. ಅವರು ಉಳಿದಿದ್ದ ಹೋಟೆಲ್ ಸಮೀಪ ಮಿಸೈಲ್ ದಾಳಿ ನಡೆದಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು. ಈ ಕುರಿತು ಶಾಸಕ ಬಿ. ನಾಗೇಂದ್ರ ಅವರು ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರೊಂದಿಗೆ ಮಾತನಾಡಿ ದುಬೈನಲ್ಲಿ ಸಿಲುಕಿರುವ ಜನರ ಕುರಿತು ಮಾಹಿತಿ ನೀಡಿದ್ದಾರೆ. ಮಾರ್ಚ್ 2 ರವರೆಗೆ ವಿಮಾನ ಹಾರಾಟ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ ಇರಾನ್-ಇಸ್ರೇಲ್ ಯುದ್ಧ, ಮಂಗಳೂರು-ಗಲ್ಫ್ ವಿಮಾನ ಸೇವೆಗಳಲ್ಲಿ ವ್ಯತ್ಯಯ, ರದ್ದಾದ ವಿಮಾನದ ವಿವರ ಇಲ್ಲಿದೆ

ಬಳ್ಳಾರಿಯಿಂದ ಫೆಬ್ರವರಿ 24 ರಂದು ದುಬೈ ಪ್ರವಾಸಕ್ಕೆ ತೆರಳಿದ್ದ 35 ಮಂದಿಗೆ ವಾಪಸ್ಸಾಗಬೇಕಿದ್ದ ವೇಳೆ ಯುದ್ಧ ಭೀತಿ ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ ಒಟ್ಟು 50 ಮಂದಿ ಸಂಕಷ್ಟಕ್ಕೆ ಸಿಲುಕಿ ವಿಮಾನ ರದ್ದಾದ ಪರಿಣಾಮ ಅನುಭವಿಸುತ್ತಿದ್ದಾರೆ. ಹಣಕಾಸಿನ ತೊಂದರೆಯಾಗುತ್ತಿರುವ ಕುಟುಂಬಸ್ಥರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಗಿರೀಶ್ ಕೆರೂರು, ಫ್ರಾನ್ಸ್ ಮೂಲದ IDEMIA ಕಂಪನಿಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿದ್ದು, ದುಬೈ ಮಾರ್ಗವಾಗಿ ಪ್ಯಾರಿಸ್ ತೆರಳಬೇಕಾಗಿತ್ತು. ಆದರೆ ವಿಮಾನ ರದ್ದಾದ ಕಾರಣ ಅವರು ಅಬುಧಾಬಿಯ ಯಾಸ್ ಪ್ಲಾಜಾ ಹೋಟೆಲ್‌ನಲ್ಲಿ ತಂಗಿದ್ದಾರೆ. ಸದ್ಯ ಸುರಕ್ಷಿತರಾಗಿದ್ದರೂ, ಯಾವಾಗ ವಿಮಾನ ಸಂಚಾರ ಪುನರಾರಂಭವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲವೆಂದು.

ಒಟ್ಟಾರೆ ಲಭ್ಯ ಮಾಹಿತಿಯ ಪ್ರಕಾರ ಬಹ್ರೇನ್‌ನಲ್ಲಿ 6 ಮಂದಿ, ದುಬೈನಲ್ಲಿ ಬಳ್ಳಾರಿ ಮೂಲದ 35 ಮಂದಿ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ 50 ಮಂದಿ ಸೇರಿ ಕನಿಷ್ಠ 90ಕ್ಕೂ ಹೆಚ್ಚು ಕನ್ನಡಿಗರು ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಭಾರತೀಯ ವಿದೇಶಾಂಗ ಇಲಾಖೆ ಸಹಾಯವಾಣಿ ಆರಂಭಿಸಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಸಿಲುಕಿರುವ ಕನ್ನಡಿಗರು ಶೀಘ್ರವಾಗಿ ಸ್ವದೇಶಕ್ಕೆ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬುದು ಕುಟುಂಬಸ್ಥರ ಒತ್ತಾಯವಾಗಿದೆ.

ಇದನ್ನೂ ಓದಿ ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಯೇ ಆದ್ಯತೆ; ಸಿಎಂ ಸಿದ್ದರಾಮಯ್ಯ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ 15 ವಿಮಾನಗಳು ರದ್ದು

ಯುದ್ಧದ ಹಿನ್ನೆಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 15 ವಿಮಾನಗಳು ರದ್ದಾಗಿವೆ. ವಿದೇಶಗಳಿಂದ ಆಗಮಿಸಬೇಕಿದ್ದ 09 ಹಾಗೂ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ 06 ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ದುಬೈ, ಅಬುಧಾಬಿ, ಜಿದ್ದಾ, ದೋಹಾ, ಡಮಾಮ್ ಹಾಗೂ ರಿಯಾದ್ ಸಂಪರ್ಕಿತ ಪ್ಲೈಟ್‌ಗಳು ರದ್ದಾಗಿವೆ. ಎಮಿರೇಟ್ಸ್, ಕತಾರ್ ಏರ್ವೇಸ್, ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ ಮತ್ತು ಎತಿಹಾದ್ ಏರ್ವೇಸ್ ವಿಮಾನಗಳು ಸೇವೆಯನ್ನು ನಿಲ್ಲಿಸಿವೆ. ಆಗಮಿಸಬೇಕಿದ್ದ ವಿಮಾನಗಳಲ್ಲಿ 1,533 ಪ್ರಯಾಣಿಕರು ಹಾಗೂ ನಿರ್ಗಮಿಸಬೇಕಿದ್ದ ವಿಮಾನಗಳಲ್ಲಿ 806 ಮಂದಿ ಟಿಕೆಟ್ ಬುಕ್ ಮಾಡಿದ್ದು, ರದ್ದತಿ ಬಗ್ಗೆ ಮುಂಚಿತವಾಗಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *