Headlines

ಜಗತ್ತಿಗೇ ಕಂಟಕವಾಗಲಿದೆ ಇರಾನ್ ಯುದ್ಧ: ಮಾರಕ ಕಾಯಿಲೆ ಹರಡುವ ಭೀತಿ, ಭಾರತಕ್ಕೂ ಇದೆ ಆತಂಕ!

ಜಗತ್ತಿಗೇ ಕಂಟಕವಾಗಲಿದೆ ಇರಾನ್ ಯುದ್ಧ: ಮಾರಕ ಕಾಯಿಲೆ ಹರಡುವ ಭೀತಿ, ಭಾರತಕ್ಕೂ ಇದೆ ಆತಂಕ!


ಜಗತ್ತಿಗೇ ಕಂಟಕ ಇರಾನ್ ಯುದ್ಧ: ಮಾರಕ ಕಾಯಿಲೆ ಹರಡುವ ಭೀತಿ, ಭಾರತಕ್ಕೂ ಇದೆ ಆತಂಕ!

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೈಲ ಕೇಂದ್ರಗಳ ಮೇಲೆ ದಾಳಿಗಳು ಕಾರಣವಾಗಿವೆ, ಇದು ಕೇವಲ ಆರ್ಥಿಕ ನಷ್ಟವಲ್ಲ, ಭೀಕರ ಪರಿಸರ ದುರಂತಕ್ಕೆ ನಾಂದಿ ಹಾಡಿದೆ. ತೈಲ ಬಾವಿಗಳಿಗೆ ಬೆಂಕಿ ಬಿದ್ದಾಗ ಉಂಟಾಗುವ ದಟ್ಟ ಕಪ್ಪು ಹೊಗೆ ನೂರಾರು ಕಿಲೋಮೀಟರ್ ದೂರದವರೆಗೆ ಹರಡಿ ಜನರ ಆರೋಗ್ಯಕ್ಕೆ ಮಾರಕ ವಸ್ತು. ಈ ಹೊಗೆಯಲ್ಲಿರುವ ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈಯಾಕ್ಸೈಡ್ ಮತ್ತು ನೈಟ್ರೋಜನ್ ಆಕ್ಸೈಡ್‌ಗಳು ಶ್ವಾಸಕೋಶ ಮತ್ತು ರಕ್ತದ ಮೇಲೆ ನೇರ ಪರಿಣಾಮ ಬೀರುತ್ತವೆ. ಗಾಳಿಯಲ್ಲಿ ಸೇರಿದ ಈ ವಿಷಗಳು ಮಳೆ ನೀರಿನಲ್ಲಿ ಬೆರೆತು ಆಮ್ಲ ಮಳೆಯನ್ನು ಸೃಷ್ಟಿಸಿ ಶ್ವಾಸಕೋಶಗಳಿಗೆ ಹಾನಿಯಾಗುತ್ತದೆ. ಚರ್ಮ ರೋಗಗಳು, ಕ್ಯಾನ್ಸರ್ ಮತ್ತು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಶೀಘ್ರದಲ್ಲೇ ಸಾವು ಸಂಭವಿಸಿದರೂ, ದೀರ್ಘಾವಧಿಯ ಅಂಗಾಂಗಗಳಿಗೆ ಹಾನಿಯಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

1991ರಲ್ಲಿ ಗಲ್ಫ್ ಯುದ್ಧದ ವೇಳೆ ಅಮೆರಿಕ ಇರಾಕ್ ತೈಲ ಬಾವಿಗಳಿಗೆ ಬೆಂಕಿ ಹಚ್ಚಿದ ನಂತರ ಗಲ್ಫ್ ವಾರ್ ಕಾಣಿಸಿಕೊಂಡಿತ್ತು. ಅಮೆರಿಕದ ಸಾವಿರಾರು ಸೈನಿಕರು 30 ವರ್ಷಗಳ ನಂತರವೂ ದೀರ್ಘಕಾಲದ ಆಯಾಸ, ನರಗಳ ಹಾನಿ, ಕ್ಯಾನ್ಸರ್ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದೀಗ ಇರಾನ್‌ನ ಬೃಹತ್ ತೈಲ ಸಂಗ್ರಹಾಗಾರಗಳ ಮೇಲೆ ದಾಳಿಯಾದರೆ, ಈ ದುರಂತ 1991 ರ ಗಲ್ಫ್ ಯುದ್ಧಕ್ಕಿಂತ ಹತ್ತು ಪಟ್ಟು ಹೆಚ್ಚು ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹೊಗೆ ಪರ್ಷಿಯನ್ ಗಲ್ಫ್ ದಾಟಿ ನೆರೆ ರಾಷ್ಟ್ರಗಳಿಗೆ ಹರಡಿ ಜಾಗತಿಕ ಹವಾಮಾನ ವೈಪರಿತ್ಯಕ್ಕೆ ಹರಡಿದೆ. ಭಾರತಕ್ಕೆ ತಟ್ಟುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *