ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!


ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

ಬೆಂಗಳೂರು, ಮಾರ್ಚ್ 13: ಇಸ್ರೇಲ್, ಅಮೆರಿಕ ಮತ್ತು ಇರಾನ್ ಯುದ್ಧದ ಕಿಚ್ಚು ಭಾರತದ ಅಡುಗೆ ಮನೆಯ ಬಾಗಿಲು ತಟ್ಟಿದೆ. ಯುದ್ಧದ ಎಫೆಕ್ಟ್ಗೆ ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ನ ಅಭಾವ ಸೃಷ್ಟಿಯಾಗಿದೆ. ಈ ಮಧ್ಯೆ ಹೋಟೆಲ್ ನಂತರ ಇದೀಗ ಅಡುಗೆ ಎಣ್ಣೆ (ಅಡುಗೆ ಎಣ್ಣೆ) ಅಂಗಡಿಯ ಸರದಿ. ಗ್ಯಾಸ್‌ನಂತೆ ಅಡುಗೆ ಆಯಿಲ್ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ. ಆ ಮೂಲಕ ಸಿಟಿ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಕಮರ್ಷಿಯಲ್ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಪ್ರಾರಂಭವಾಗಿದೆ, ಹೋಟೆಲ್ ಆಸ್ಪತ್ರೆಯ ಸ್ಥಿತಿ ಕೇಳತೀರದಾಗಿದೆ. ಬೆಂಗಳೂರಿನಲ್ಲಿ ಕೆಲವು ಹೋಟೆಲ್‌ಗಳು ಬಂದ್ ಕೂಡ ಆಗಿವೆ. ಹೀಗಿರುವಾಗ ಅಡುಗೆ ಎಣ್ಣೆ ಅಂಗಡಿಯ ಸರದಿ ಶುರುವಾಗಿದೆ. ಕಮರ್ಷಿಯಲ್ ಗ್ಯಾಸ್‌ನಂತೆ ಅಡುಗೆ ಆಯಿಲ್ ಅಂಗಡಿಗಳು ಬಂದ್ ಆಗುವ ಸಾಧ್ಯತೆ ಇದೆ.

ಅಡುಗೆ ಎಣ್ಣೆ ಅಂಗಡಿಯ ಸೇವನೆ ಹೇಳಿದ್ದಿಷ್ಟು

ಇನ್ನು ಈ ಅಡುಗೆ ಎಣ್ಣೆ ಅಂಗಡಿಯ ಮಾಲೀಕ ಕಾಣಿಸಿಕೊಂಡಿದ್ದು, ಕಳೆದ 1 ವಾರದಿಂದ ಅಡುಗೆ ಎಣ್ಣೆ ಸರಬರಾಜು ಆಗುತ್ತಿಲ್ಲ. 100 ರಿಂದ 200 ಬಾಕ್ಸ್ ಬುಕ್ ಮಾಡಿದರೆ ಕೇವಲ 20 ರಿಂದ 50 ಬಾಕ್ಸ್ ಮಾತ್ರ ಏಜೆಂಟರು ಕಳಿಸುತ್ತಿದ್ದಾರೆ. ಏಕೆ ಅಂತಾ ಕೇಳಿದರೆ ಸಪ್ಲೈ ಆಗುತ್ತಿಲ್ಲ. ಹೆಚ್ಚು ಬಾಕ್ಸ್ ನೀಡುವುದಕ್ಕೆ ಆಗಲ್ಲ ಎನ್ನುತ್ತಿದ್ದಾರೆ. ಇದರ ನಡುವೆ 15 ರಿಂದ 20 ರೂ ದರ ಕೂಡ ಜಾಸ್ತಿ ಆಗಿದೆ. ಇದರಿಂದ ನಮಗೆ ತುಂಬಾ ಸಮಸ್ಯೆಯಾಗಿದೆ.

ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲೂ ಸಿಲಿಂಡರ್ ಅಭಾವ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೂ ಕಮರ್ಷಿಯಲ್ ಸಿಲಿಂಡರ್ ಅಭಾವದ ಎಫೆಕ್ಟ್ ತಟ್ಟಿದೆ. ಆಸ್ಪತ್ರೆ ಹೊರಗಿರುವ ಫುಡ್ ಪ್ಯಾಲೆಸ್ ನಲ್ಲಿ ಅನ್ನ ಸಾಂಬಾರ್, ರೈಸ್ ಬಾತ್ ಸೇರಿ ಕೆಲವು ಆಹಾರ ಲಭ್ಯವಾಗುತ್ತಿದೆ. ಚೈನೀಸ್, ತಂದೂರ್ ಆಹಾರಗಳ ತಯಾರಿಕೆಯನ್ನು ನಿಲ್ಲಿಸಿದ್ದಾರೆ.

ಕೆ.ಆರ್ ಮಾರ್ಕೆಟ್ ನಲ್ಲಿ ತರಕಾರಿ ವ್ಯಾಪಾರಕ್ಕೆ ತಟ್ಟಿದ ಬಿಸಿ

ಕಮರ್ಷಿಯಲ್ ಸಿಲಿಂಡರ್ ಇಲ್ಲದೇ ದರ್ಶಿನಿ, ಬೀದಿ ಬದಿ ಹೋಟೆಲ್‌ಗಳು ಕ್ಲೋಸ್ ಆಗಿವೆ. ಇದರಿಂದ ಕೆ.ಆರ್.ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಹೋಟೆಲ್‌ಗಳು ಬಂದ್ ಆಗಿರೋದ್ರಿಂದ ತರಕಾರಿ ತೆಗೆದುಕೊಳ್ಳೋರೇ ಇಲ್ಲ.

ವರದಿ: ಅರುಣ್ ಕುಮಾರ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *