
ಹುಬ್ಬಳ್ಳಿ, ಮಾರ್ಚ್ 29: ಇರಾನ್ ಇಸ್ರೇಲ್, ಅಮೇರಿಕಾ ನಡುವೆ ನಡೆಯುತ್ತಿದ್ದ ಕಾರಣ (ಯುದ್ಧ) ನಮ್ಮ ದೇಶದ ಮೇಲೆ ಅನೇಕ ರೀತಿಯ ಪರಿಣಾಮಗಳಾಗುತ್ತಿವೆ. ಸಿಲಿಂಡರ್ ಅಭಾವ ಉಂಟಾಗಿದ್ದು, ಆಮದು, ರಫ್ತು ವ್ಯವಹಾರ ಕಡಿಮೆಯಾಗಿರೋದರಿಂದ ಅನೇಕ ವಸ್ತುಗಳ ಬೆಲೆ ಕೂಡ ಹೆಚ್ಚಾಗುತ್ತಿದೆ. ಇದರ ಜೊತೆಗೆ ಇದೀಗ ರಸಗೊಬ್ಬರಕ್ಕೂ ಅಭಾವ (ಗೊಬ್ಬರದ ಕೊರತೆ) ಉಂಟಾಗುವ ಆತಂಕ ಎದುರಾಗಿದೆ. ಈ ಬಾರಿ ಮುಂಗಾರು ಬಿತ್ತನೆಗೆ ರಸಗೊಬ್ಬರ ಸಿಗುತ್ತೋ, ಇಲ್ವೋ ಅನ್ನೋ ಆತಂಕ ರೈತರನ್ನು ಕಾಡುತ್ತಿದೆ.
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕಾ ನಡೆಸುತ್ತಿರುವ ಯುದ್ದ, ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಜಾಗತಿಕ ಮಟ್ಟದ ಎಲ್ಲಾ ದೇಶಗಳ ಮೇಲೆ ಅನೇಕ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ, ಭಾರತ ಕೂಡ ಹೊರತಾಗಿಲ್ಲ. ದೇಶದ ಎಲ್ಪಿಜಿ ಸಿಲಿಂಡರ್ ಅಭಾವ ಕಾಡುತ್ತಿದೆ. ಅನೇಕ ವಸ್ತುಗಳ ಬೆಲೆ ಕೂಡ ಹೆಚ್ಚಾಗಿವೆ. ಇನ್ನು ಈ ಯುದ್ಧ ರೈತರ ಮೇಲೆ ಕೂಡ ಅನೇಕ ದುಷ್ಪರಿಣಾಮ ಬೀರಿದೆ.
ಇದನ್ನೂ ಓದಿ: ಚಿಯ ಬೆಳೆಗಾರರಿಗೆ ತಟ್ಟಿದ ಯುದ್ಧದ ಬಿಸಿ: ಸರ್ರನೆ ಕುಸಿದ ದರ; ಬೀದರ್ ರೈತರು ಕಂಗಾಲು
ರಫ್ತು ಮಾಡಲಾಗದ ಟೊಮ್ಯಾಟೋ, ಈರುಳ್ಳಿ ಸೇರಿದಂತೆ ಅನೇಕ ತರಕಾರಿಗಳು, ಆಹಾರ ಪದಾರ್ಥಗಳಿಗೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಇದರ ಜೊತೆಗೆ ಇದೀಗ ಗೊಬ್ಬರ ಅಭಾವದ ಆತಂಕ ರೈತರನ್ನು ಕಾಡುತ್ತಿದೆ. ರೈತರು ಹೆಚ್ಚಾಗಿ ಬಳಸುವ ಯೂರಿಯಾ, ಡಿಎಪಿ ಗೊಬ್ಬರ. ಆದರೆ ಈ ಗೊಬ್ಬರಗಳನ್ನು ಸಿದ್ಧ ಮಾಡಲು ಬೇಕಾಗುವ ಅನೇಕ ಕಚ್ಚಾವಸ್ತುಗಳು ಬರುವುದು ಗಲ್ಫ್ ಸೇರಿದಂತೆ ಅನೇಕ ವಿದೇಶಗಳಿಂದ. ಯುದ್ದದಿಂದಾಗಿ ಕಚ್ಚಾವಸ್ತುಗಳಿಗೆ ತೊಂದರೆ, ರಸಗೊಬ್ಬರ ತಯಾರಿಕೆಗೆ ಇದೀಗ ಸಮಸ್ಯೆಯಾಗುತ್ತಿದೆ. ಇದು ರೈತರ ಆತಂಕವನ್ನು ಹೆಚ್ಚಿಸುತ್ತಿದೆ.
ರಸಗೊಬ್ಬರ ಅಂಗಡಿ ಸೇವಿಸುವುದೇನು?
ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸುರಿದಿದೆ. ರೈತರು ಕೆಲವೇ ದಿನಗಳಲ್ಲಿ ಭೂಮಿ ಹದಮಾಡುವ ಕೆಲಸವನ್ನು ಪ್ರಾರಂಭಿಸುತ್ತಾರೆ, ಮೊದಲ ವಾರದಲ್ಲಿಯೇ ಬಿತ್ತನೆ ಪ್ರಾರಂಭಿಸಲಿದ್ದಾರೆ. ಈ ಸಮಯದಲ್ಲಿ ರೈತರಿಗೆ ಹೆಚ್ಚಿನ ಗೊಬ್ಬರದ ಅವಶ್ಯಕತೆ ಇದೆ. ಆದರೆ ಇದೇ ಮುಂದುವರಿದರೆ ಮೇ, ಜೂನ್ ತಿಂಗಳಿನಲ್ಲಿ ದೇಶದಲ್ಲಿ ರಸಗೊಬ್ಬರ ಅಭಾವ ಕಾಡಲಿದೆ ಎಂಬುವುದು ರಸಗೊಬ್ಬರ ಅಂಗಡಿಯನ್ನು ಹೊಂದಿರುವ ಲಿಂಬಯ್ಯಸ್ವಾಮಿ ಮಾತು.
ಪರ್ಯಾಯ ಗೊಬ್ಬರಗಳ ಬಳಕೆಗೆ ಉತ್ತೇಜನ
ಧಾರವಾಡ ಜಿಲ್ಲೆಗೆ ವಾರ್ಷಿಕ 57 ಸಾವಿರ ಟನ್ ರಸಗೊಬ್ಬರ ಅವಶ್ಯಕತೆ ಇದೆ. ರಸಗೊಬ್ಬರ ಇದೆ ಅಂತ ಅಂಗಡಿ ಸದ್ಯಕ್ಕೆ ಹೇಳಬೇಕೆಂದರೆ, ಬಹುತೇಕ ಕಡೆಯೂರಿಯಾ, ಡಿಎಪಿ ಗೊಬ್ಬರ ಸಿಗುತ್ತಿಲ್ಲ. ಆರಂಭವಾದ ಮೇಲೆ ರಸಗೊಬ್ಬರ ಸಿಗದಿದ್ದರೆ ರೈತರ ಆಕ್ರೋಶ ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿ ಜೊತೆ ಸಭೆ ಕೂಡ ಮಾಡಿದ್ದರಂತೆ. ಕೇಂದ್ರ ರಸಗೊಬ್ಬರ ಇಲಾಖೆ ಕೂಡ ಈ ಬಗ್ಗೆ ಸಭೆ ಮಾಡಿದೆ. ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿದೆ, ರೈತರು, ಯೂರಿಯಾ, ಡಿಎಪಿ ಬದಲಿಗೆ ಪರ್ಯಾಯ ಗೊಬ್ಬರಗಳ ಬಳಕೆಗೆ ಉತ್ತೇಜಿಸುವ ಸೂಚನೆಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: ಇಂಧನ ಕೊರತೆ ವದಂತಿ: ಕೊಪ್ಪಳದಲ್ಲಿ ಪೆಟ್ರೋಲ್ ತುಂಬಿಸಲು ಬ್ಯಾರಲ್ ತಂದ ಜನ!
ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ, ಕೇಂದ್ರ ಸರ್ಕಾರವು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದೆ, ಆಗುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕಾಗಿದೆ. ಈ ಸಮಯದಲ್ಲಿ ಗೊಬ್ಬರದ ಅಭಾವವಾದರೆ ರೈತರಿಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಲಿದೆ, ಈ ಬಳಕೆಯಿಂದಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.