ದುಬೈ, ಫೆಬ್ರವರಿ 28: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಅತಿದೊಡ್ಡ ಕಾರ್ಯಾಚರಣೆಯನ್ನೇ ಆರಂಭಿಸಿದೆ. ಅಮೆರಿಕದ-ಇಸ್ರೇಲ್ ಸೇನೆ ಹಾರಿಸಿದ ಕ್ಷಿಪಣಿ, ಇರಾನ್ ರಾಜಧಾನಿ ಟೆಹರಾನ್‌ಗೆ ಅಪ್ಪಳಿಸುತ್ತಲೇ ಮಧ್ಯಪ್ರಾಚ್ಯ ತಲ್ಲಣಗೊಂಡಿತು. ಸದ್ಯ ಈ ಯುದ್ಧದ ಕನ್ನಡಿಗರಿಗೂ ತಟ್ಟಿದೆ. ಯುದ್ಧ ಹಿನ್ನಲೆ ದುಬೈ ಏರ್‌ಪೋರ್ಟ್‌ನಲ್ಲಿ ವಿಮಾನ ಪ್ರಯಾಣ ಸ್ಥಗಿತಗೊಂಡಿದೆ. ಹೀಗಾಗಿ ಕುಟುಂಬ ಸಮೇತರಾಗಿ ಜೆಡಿಎಸ್ ಪರಿಷತ್ ಸದಸ್ಯ ಭೋಜೇಗೌಡ ದುಬೈ ಏರ್‌ಪೋರ್ಟ್‌ನಲ್ಲಿ ಸಿಲುಕಿದ್ದಾರೆ. ದುಬೈನಿಂದ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ವಿಮಾನ ಪ್ರಯಾಣ ಸ್ಥಗಿತಗೊಳ್ಳುತ್ತದೆ. ಈ ಬಗ್ಗೆ ಭೋಜೇಗೌಡ ಅವರು ವಿಡಿಯೋ ಹಂಚಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.