Headlines

ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ

ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ


ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ

ಜುಲೈ, ಮಾರ್ಚ್ 19: ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಮತ್ತು ಬೆದರಿಕೆಗಳಿಗೆ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಇರಾನ್ ಇದೀಗ ಹಾರ್ಮುಜ್ ಜಲಸಂಧಿಯನ್ನು (Hormuz Strait) ಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದೆ. ಶೇ. 20ಕ್ಕೂ ಹೆಚ್ಚು ತೈಲ ಮತ್ತು ಗ್ಯಾಸ್ ಅನ್ನು ಹಡಗುಗಳ ಮೂಲಕ ಇದೇ ಹಾರ್ಮುಜ್ ಸ್ಟ್ರೇಟ್ ನಿಂದ ಸಾಗಿಸಲು ಆಯ್ಕೆಮಾಡಲಾಗಿದೆ. ಈಗ ಇದನ್ನೇ ಇರಾನ್ ತನ್ನ ಆದಾಯದ ಮೂಲವಾಗಿ ಮಾಡಿಕೊಳ್ಳಲು ಯೋಚಿಸಿದೆ. ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಿಂದ ಅರೇಬಿಯನ್ ಸಮುದ್ರ ಮುಟ್ಟಲು ಹಡಗುಗಳಿಗೆ ಸಾಗಣೆ ಅನುಮತಿ ಶುಲ್ಕ (ಟ್ರಾನ್ಸಿಟ್ ಫೀ) ವಿಧಿಸುವ ಒಂದು ಪ್ರಸ್ತಾಪವನ್ನು ಇರಾನ್ ಪರಿಗಣಿಸುತ್ತಿದೆ.

ಹಾರ್ಮುಜ್ ಜಲಸಂಧಿಯು ಬಹಳ ಕಿರಿದಾದ ಜಲಮಾರ್ಗವಾಗಿದೆ. ಪರ್ಷಿಯನ್ ಗಲ್ಫ್ ಮತ್ತು ಅರಬ್ಬಿ ಸಮುದ್ರವನ್ನು ಸಂಪರ್ಕಿಸುವ ಜಲಮಾರ್ಗ ಅದು. ಸೌದಿ, ಕತಾರ್ ಇತ್ಯಾದಿ ಗಲ್ಫ್ ರಾಷ್ಟ್ರಗಳಿಂದ ತೈಲ, ಗ್ಯಾಸ್ ಮತ್ತು ಇತರ ಸರಕುಗಳನ್ನು ಹಡಗುಗಳ ಮೂಲಕ ಜಲಮಾರ್ಗದಿಂದ ಸಾಗಿಸಲು ಆಯ್ಕೆ ಮಾಡಲಾಗುತ್ತದೆ. ಇಲ್ಲಿಂದ ಪೂರೈಕೆಯಾಗುವ ತೈಲ ಮತ್ತು ಅನಿಲದ ಮೇಲೆ ಹೆಚ್ಚಿನ ಏಷ್ಯನ್ ದೇಶಗಳು ಅವಲಂಬಿತವಾಗಿವೆ. ಗಲ್ಫ್ ರಾಷ್ಟ್ರಗಳು ಇದು ಪ್ರಮುಖ ಆದಾಯ ಮೂಲವಾಗಿದೆ. ಹೀಗಾಗಿ, ಇರಾನ್ ದೇಶ ಹಾರ್ಮುಜ್ ಜಲಸಂಧಿಯನ್ನು ಇಟ್ಟುಕೊಂಡು ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಮರ್ಮಾಘಾತ ಕೊಡಲು ಅಣಿಗೊಂಡಂತಿದೆ.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಒಂದು ಮಾಹಿತಿ ಪ್ರಕಾರ ಹಾರ್ಮುಜ್ ಜಲಮಾರ್ಗದಲ್ಲಿ ಒಂದು ದಿನಕ್ಕೆ 100 ರಿಂದ 135 ಹಡಗುಗಳು ಹಾದು ಹೋಗುತ್ತವೆ. ಇದರಲ್ಲಿ 15-20 ತೈಲ ಟ್ಯಾಂಕರ್‌ಗಳಿವೆ. ವಿಶ್ವದ ಶೇ. 20ರಷ್ಟು ತೈಲ ಸಾಗಣೆ ಇದೆ ಮಾರ್ಗದಲ್ಲಿ ಆಗುವುದು. ಹೀಗಾಗಿ, ಇರಾನ್‌ಗೆ ತನ್ನ ಪ್ರಭಾವ ಮತ್ತು ಶಕ್ತಿ ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ತೈಲ ಅಷ್ಟೇ ಅಲ್ಲದೆ ಆಹಾರ ಪೂರಕ ವಸ್ತುವನ್ನು ಹೊತ್ತು ಸಾಗುವ ಎಲ್ಲಾ ದೇಶಗಳ ಹಡಗುಗಳು ಇರಾನ್‌ಗೆ ಟೋಲ್ ಮತ್ತು ತೆರಿಗೆ ವಿಧಿಸುವಂತೆ ಕಾನೂನು ತರುವಂತಹ ಬಿಲ್ಲುಗಳನ್ನು ರಚಿಸಲಾಗುತ್ತಿದೆ. ಯುದ್ಧ ಮುಗಿದ ಬಳಿಕ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಬಂಧನೆಗಳ ವ್ಯವಸ್ಥೆ ತರದಿದ್ದರೆ. ತನ್ನ ಮೇಲೆ ನಿಷೇಧ ಹೇರಿದ ದೇಶಗಳಿಗೆ ಜಲನಿರ್ಬಂಧಗಳನ್ನು ಹಾಕಲು ಇರಾನ್‌ಗೆ ಅವಕಾಶ ಕೊಡುವಂತಹ ಕಾನೂನು ಇದಾಗಿದೆ ಎಂದು ಇರಾನ್ ಸರ್ವೋಚ್ಚ ನಾಯಕರಿಗೆ ಸಲಹೆಗಾರರಾದವರು ಹೇಳಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್ಪಿಜಿ ಟ್ಯಾಂಕರ್ ಗ್ಯಾಸ್‌ನಲ್ಲಿ ಎಷ್ಟು ದಿನಕ್ಕಾಗುತ್ತಿದೆ ಗೊತ್ತಾ?

ಹಾರ್ಮುಜ್ ಜಲಸಂಧಿಯ ಅಗಲ ಕೇವಲ 33 ಕಿಮೀ ಮಾತ್ರವೇ ಇರುವುದು. ಹೀಗಾಗಿ, ಹಡಗುಗಳ ಸಾಗಣೆ ಇಲ್ಲಿ ಅಷ್ಟು ಸುಗಮವಿಲ್ಲ. ಈ ಜಲಸಂಧಿಯನ್ನು ಇರಾನ್ ಮತ್ತು ಓಮನ್ ನಿಯಂತ್ರಿಸುತ್ತವೆ. ಇರಾನ್ ಅನುಮತಿ ಇಲ್ಲದೇ ಯಾವ ಹಡಗುಗಳು ಇಲ್ಲಿ ಸಾಗುವುದು ಕಷ್ಟ. ಸದ್ಯದ ಯುದ್ಧ ಬಿಕ್ಕಟ್ಟಿನಲ್ಲಿ ಇಲ್ಲಿ ಹೊರಹೋಗಲಾಗದೆ ಸ್ಥಗಿತಗೊಂಡಿರುವ ಹಡಗುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *