Headlines

ಕುಸಿದು ಬಿದ್ದ ಇರಾನ್ ಕರೆನ್ಸಿ; ಒಂದು ಕೋಟಿ ರಿಯಾಲ್ ಮುಖಬೆಲೆಯ ಕರೆನ್ಸಿ ನೋಟು ಬಿಡುಗಡೆ; ಇದರ ಮೌಲ್ಯ ಕೆಲವೇ ಡಾಲರ್ ಮಾತ್ರ

ಕುಸಿದು ಬಿದ್ದ ಇರಾನ್ ಕರೆನ್ಸಿ; ಒಂದು ಕೋಟಿ ರಿಯಾಲ್ ಮುಖಬೆಲೆಯ ಕರೆನ್ಸಿ ನೋಟು ಬಿಡುಗಡೆ; ಇದರ ಮೌಲ್ಯ ಕೆಲವೇ ಡಾಲರ್ ಮಾತ್ರ


ಕುಸಿದು ಬಿದ್ದ ಇರಾನ್ ಕರೆನ್ಸಿ; ಒಂದು ಕೋಟಿ ರಿಯಾಲ್ ಮುಖಬೆಲೆಯ ಕರೆನ್ಸಿ ನೋಟು ಬಿಡುಗಡೆ; ಇದರ ಮೌಲ್ಯ ಕೇವಲ ಡಾಲರ್

ಜನವರಿ 22: ಯುದ್ಧದಿಂದ ಜರ್ಝರಿತವಾಗಿರುವ ಇರಾನ್ ಇದೀಗ ಆರ್ಥಿಕವಾಗಿ ದುಸ್ತರ ಪರಿಸ್ಥಿತಿಗೆ ಸಿಲುಕಿದೆ. ಅಮೆರಿಕದ ಆರ್ಥಿಕ ದಿಗ್ಬಂಧನದ ಫಲವಾಗಿ ಇರಾನ್ ರಿಯಾಲ್ ಕರೆನ್ಸಿಯ ಮೌಲ್ಯ (ಐರಾನಿ ರಿಯಾಲ್ ಟಿಪ್ಪಣಿಗಳು) ಅಂತಾರಾಷ್ಟ್ರೀಯ ಗಣನೀಯವಾಗಿ ಕುಸಿದಿದೆ. ಈ ಮಧ್ಯೆ ಇರಾನ್ ದೇಶವು 10 ಮಿಲಿಯನ್ ರಿಯಾಲ್ ಬ್ಯಾಂಕ್ ನೋಟನ್ನು ಬಿಡುಗಡೆ ಮಾಡಿದೆ. 10 ಮಿಲಿಯನ್ ಎಂದರೆ ಒಂದು ಕೋಟಿ ರಿಯಾಲ್ ಮುಖಬೆಲೆಯ ನೋಟು ಇದು.

ಈ ಒಂದು ಕೋಟಿ ರಿಯಾಲ್ ನೋಟಿನ ಮೌಲ್ಯ ಕೇವಲ 7 ಡಾಲರ್ ಮಾತ್ರ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು 650 ರೂಪಾಯಿ ಮಾತ್ರ. ಅಷ್ಟು ಮಟ್ಟಿಗೆ ಇರಾನ್ ಕರೆನ್ಸಿಯ ಮೌಲ್ಯ ನಾಶವಾಗಿದೆ. ಅಂತಾರಾಷ್ಟ್ರೀಯ ಒಂದು ಚೀನೀ ಯುವಾನ್ ಕರೆನ್ಸಿಗೆ ಬರೋಬ್ಬರಿ 2 ಲಕ್ಷ ಇರಾನೀಲ್ ಸಿಗುತ್ತದೆ. ಒಂದು ಭಾರತೀಯ ರುಪಾಯಿಯ ಮೌಲ್ಯ ಸುಮಾರು 14,000 ರಿಯಾಲ್‌ಗೆ ಸಮ ಎನಿಸುತ್ತದೆ.

ಇದನ್ನೂ ಓದಿ: ಹೋಟೆಲ್, ಮುಂಗಟ್ಟುಗಳಿಗೆ ನಿರಾಳ ಸುದ್ದಿ; ರಾಜ್ಯಗಳಿಗೆ ಕಮರ್ಷಿಯಲ್ ಎಲ್ ಪಿಜಿ ಪೂರೈಕೆ ಶೇ. 50ಕ್ಕೆ ಏರಿಕೆ

ಇರಾನ್ ನಲ್ಲಿ ಹಣದುಬ್ಬರ ವಿಪರೀತ ಮಟ್ಟದಲ್ಲಿದೆ. ಶೇ. 50 ಅಲ್ಲ ಹೆಚ್ಚಿನ ಹಣದುಬ್ಬರ ದರ ಇದೆ. ಅಂದರೆ, ವರ್ಷಕ್ಕೆ 50 ಪ್ರತಿಶತದಷ್ಟು ಬೆಲೆ ಏರುತ್ತಿದೆ. ಹಣದ ಮೌಲ್ಯ ಕುಸಿಯುತ್ತಲೇ ಇದೆ. ಸಾಧಾರಣ ವಸ್ತುಗಳನ್ನು ಖರೀದಿಸಲು ಜನರ ಬಂಡಲ್ ಗಟ್ಟಲೆ ಹಣ ಕೊಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ಅಲ್ಲಿನ ಸರ್ಕಾರ ಒಂದು ಮಿಲಿಯನ್ ರಿಯಾಲ್ ಮುಖಬೆಲೆಯ ನೋಟುಗಳನ್ನು ಮುದ್ರಿಸಿದೆ.

ಜನರಿಂದ ಕ್ಯಾಶ್ ಶೇಖರಣೆ

ಯುದ್ಧದಿಂದ ಇರಾನ್ ಬ್ಯಾಂಕಿಂಗ್ ಸಿಸ್ಟಂ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗೆ ಧಕ್ಕೆಯಾಗುವ ಭಯವೂ ಇರಾನ್ ಆಡಳಿತ ಮತ್ತು ಜನಸಾಮಾನ್ಯರಿಗೆ ಕಾಡುತ್ತಿದೆ. ಹೀಗಾಗಿ, ಬಹಳಷ್ಟು ಜನರು ಹಣವನ್ನು ಇಟ್ಟುಕೊಳ್ಳಲು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಬ್ಯಾಂಕು ಮತ್ತು ಎಟಿಎಂಗಳ ಮುಂದೆ ಜನರ ನೂಕುನುಗ್ಗಲು ಹೆಚ್ಚಾಯಿತು.

ಇದನ್ನೂ ಓದಿ: ಟಿಕೆಟ್ ದರ ಮಿತಿ ಕ್ರಮ ಹಿಂತೆಗೆತ, ಜೆಟ್ ಫುಯಲ್ ಬೆಲೆ ಹೆಚ್ಚಳ ಪರಿಣಾಮ ಏ. 1ರಿಂದ ವಿಮಾನ ಟಿಕೆಟ್ ದರ ಏರಿಕೆ?

ಅಂತಾರಾಷ್ಟ್ರೀಯ ನಿಷೇಧ ಕ್ರಮವು ಇರಾನ್ ಆರ್ಥಿಕತೆಯನ್ನು ಜರ್ಝರಿತಗೊಳಿಸಿದೆ. ಅಮೆರಿಕನ್ ಡಾಲರ್ ಬಳಕೆ ಅಸಾಧ್ಯವಾದ ಕಾರಣ ಇರಾನ್‌ಗೆ ಅಂತಾರಾಷ್ಟ್ರೀಯ ವ್ಯವಹಾರ ಕಷ್ಟವಾಗಿದೆ. ಚೀನಾ ಜೊತೆ ಬಾರ್ಟರ್ ಸಿಸ್ಟಂ ರೀತಿ ಅದು ವ್ಯವಹರಿಸುತ್ತಿದೆ. ಚೀನಾಗೆ ತೈಲ ಪೂರೈಕೆಗೆ ಬದಲಾಗಿ, ಇರಾನ್‌ನಲ್ಲಿ ಚೀನಾ ಬೇರೆ ಸೇವೆಗಳನ್ನು ನೀಡುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *