ಟೆಹರಾನ್, ಜನವರಿ 2: ಇರಾನ್ ದೇಶದ ವಿರುದ್ಧ ಜನಾಕ್ರೋಶ (ಇರಾನ್ ಜನರ ಪ್ರತಿಭಟನೆ) ಹೆಚ್ಚುತ್ತಿದೆ. ಭಾನುವಾರ ಆರಂಭವಾದ ಪ್ರತಿಭಟನೆಗಳಲ್ಲಿ ಬಲಿಯಾದವರ ಸಂಖ್ಯೆ ಏಳು ದಾಟಿದೆ. ಆರ್ಥಿಕ ಸಂಕಷ್ಟ ಮತ್ತು ಹಣದುಬ್ಬರದಿಂದ ಜರ್ಝರಿತವಾಗಿರುವ ದೇಶದ ಈ ಹೀನಾಯ ಸ್ಥಿತಿಗೆ ಸರ್ಕಾರವನ್ನು ಹೊಣೆಯಾಗಿಸಿ, ಇರಾನ್‌ನಲ್ಲಿ ಜನರು ನಡೆಸುತ್ತಿರುವ ಪ್ರತಿಭಟನೆ ದಿನೇ ದಿನೇ ತೀವ್ರಗೊಳ್ಳುತ್ತಿದೆ.
ಹತ್ತ ಹೆಚ್ಚು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇರಾನ್‌ನ ವರ್ತಕರು, ಅಂಗಡಿಯೂ ಕೂಡ ಜೊತೆಯಾಗಿದ್ಧಾರೆ. ನಗರಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಬಂದ್ ಮಾಡಿವೆ.
ಮುಲ್ಲಾಗಳು ದೇಶ ಬಿಟ್ಟು ಹೋಗುವವರೆಗೂ ಉದ್ದಾರ ಆಗಲ್ಲ…
ಇರಾನ್ ನ ಹಲವು ನಗರಗಳಲ್ಲಿ ಜನರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವೆಡೆ ಇಸ್ಲಾಮಿಕ್ ರಿಪಬ್ಲಿಕ್ ನ ಧ್ವಜಗಳನ್ನು ಸುಡಲಾಗುತ್ತಿದೆ. ‘ಮುಲ್ಲಾ ಮರೆಯಾಗುವವರೆಗೂ ಈ ನೆಲ ಮುಕ್ತವಾಗುವುದಿಲ್ಲ’ ಎಂಬಂತಹ ಘೋಷವಾಕ್ಯಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ದೇಶದ್ರೋಹಿ ಆರೋಪಿ ಉಮರ್ ಖಾಲಿದ್ ಗೆ ನ್ಯೂಯಾರ್ಕ್ ಮೇಯರ್ ಕಾಳಜಿ ಪತ್ರ; 8 ಅಮೆರಿಕನ್ ಜನಪ್ರತಿನಿಧಿಗಳ ಬೆಂಬಲ
‘ಮುಲ್ಲಾಗಳು ಇರಾನ್ ನಿಂದ ತೊಲಗಬೇಕು’; ‘ನಿರಂಕುಶ ಪ್ರಭುತ್ವಕ್ಕೆ ಸಾವಾಗಲಿ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ಪತ್ರಕರ್ತೆ ಮಸಿಹ್ ಅಲಿನೇಜಾದ್ ಅವರು ಟ್ವೀಟ್ ಮಾಡಿದ್ದಾರೆ. ಈಕೆಯ ಪ್ರಕಾರ, ಜನರು ತಮ್ಮ ದೇಶ ಇಸ್ಲಾಮಿಕ್ ರಿಪಬ್ಲಿಕ್ ಆಗಿ ಉಳಿಯಬಾರದು ಎಂದು ಬಯಸುತ್ತಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿ ಇರಾನ್
ಪರಮಾಣು ಶಸ್ತ್ರ ವಿಚಾರವಾಗಿ ಅಮೆರಿಕ ದೇಶವು ಇರಾನ್ ಮೇಲೆ ಕಟ್ಟುನಿಟ್ಟಾದ ಆರ್ಥಿಕ ನಿಷೇಧ ಹಾಕಿದೆ. ಇರಾನ್ ದೇಶದ ಆರ್ಥಿಕತೆ ಬಹಳ ಹೀನಾಯ ಪರಿಸ್ಥಿತಿಯಲ್ಲಿದೆ. ಇಲ್ಲಿ ಬೆಲೆ ಏರಿಕೆ ಅಥವಾ ಹಣದುಬ್ಬರ ಶೇ. 52ರಷ್ಟಿದೆ. ಜನರ ಬೆಲೆ ಏರಿಕೆಯಿಂದ ತತ್ತರಿಸುತ್ತಿದೆ.
ಇದನ್ನೂ ಓದಿ: ಸ್ವಿಜರ್ಲೆಂಡ್ ಬಾರ್ ನಲ್ಲಿ ಬೆಂಕಿ ಅವಘಡ; ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಇರಾನ್‌ನ ರಿಯಾಲ್ ಕರೆನ್ಸಿ ತೀರಾ ಮೌಲ್ಯ ಕಳೆದುಕೊಂಡಿದೆ. ಒಂದು ಡಾಲರ್‌ಗೆ 14 ಲಕ್ಷ ರಿಯಾಲ್ ಬೆಲೆ ಇದೆ. ಒಂದು ರೂಪಾಯಿಗೆ ಸುಮಾರು 14,000 ರಿಯಾಲ್ ಆಗಬಹುದು. ಈ ಕಾರಣಕ್ಕೂ ಇರಾನ್‌ನಲ್ಲಿ ಹಣದುಬ್ಬರ ಬಹಳ ಉಚ್ಚ ಮಟ್ಟದಲ್ಲಿದೆ. ಇರಾನ್‌ನಲ್ಲಿ ಅಡಳಿತ ವಿರೋಧಿ ಅಲೆ ಏಳಲು ಇವು ಪ್ರಮುಖ ಕಾರಣ. ಜೊತೆಗೆ, ಇರಾನ್‌ನಲ್ಲಿ ಇಸ್ಲಾಂ ಮೂಲಭೂತವಾದದ ವಿರುದ್ಧವೂ ಜನರು ಬಂಡಾಯ ಏಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ