ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ತೋರಿದ ಭಾರತ

ಇರಾನ್​ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ತೋರಿದ ಭಾರತ


ಇರಾನ್‌ಗೆ ಮೆಡಿಕಲ್ ಕಿಟ್ ಕಳುಹಿಸಿ ಮಾನವೀಯತೆ ತೋರಿದ ಭಾರತ

ನವದೆಹಲಿ, ಮಾರ್ಚ್ 18: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಇನ್ನೂ ನಿಂತಿಲ್ಲ. ಅತ್ತ ಇರಾನ್ ಕೂಡ ದಾಳಿ ನಡೆಸುವುದನ್ನು ನಿಲ್ಲಿಸಿಲ್ಲ. ಈ ಯುದ್ಧದಲ್ಲಿ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳಿಗೆ ಹಾನಿ ಬಿಟ್ಟರೆ ಅಮೆರಿಕ ದೇಶದ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದರೆ, ಇಸ್ರೇಲ್ ಮತ್ತು ಇರಾನ್ ಅಕ್ಷರಶಃ ಸ್ಮಶಾನ ಸಾಮಾನ್ಯ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವ ಇರಾನ್ ವಿರುದ್ಧ ಬೇರೆ ದೇಶಗಳ ಯುದ್ಧನೌಕೆಗಳನ್ನು ಕಳುಹಿಸಿ ಎಚ್ಚರಿಕೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ (ಡೊನಾಲ್ಡ್ ಟ್ರಂಪ್) ಘೋಷಿಸಿದ್ದಾರೆ. ಇರಾನ್ (ಇರಾನ್ ಯುದ್ಧ) ಮೇಲೆ ಮತ್ತೆ ದಾಳಿ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಇದೆಲ್ಲದರ ನಡುವೆ ಭಾರತ ಇರಾನ್ ದೇಶಕ್ಕೆ ವೈದ್ಯಕೀಯ ನೆರವು ನೀಡಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆ ಪ್ರಧಾನಿ ಮೋದಿ ಉತ್ತಮ ಬಾಂಧವ್ಯ ಹೊಂದದ ಶಾಂತಿ ಮಾತುಕತೆಯ ಮೂಲಕ ಯುದ್ಧಕ್ಕೆ ಅಂತ್ಯ ಹಾಡಲು ಮೋದಿ ಇಸ್ರೇಲ್ಗೆ ಮನವಿ ಮಾಡಿದರು. ಈ ಯುದ್ಧ ಆರಂಭವಾದಾಗಿನಿಂದ ಹಲವು ಬಾರಿ ಇಸ್ರೇಲ್ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದರು. ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯ ಹತ್ಯೆಯ ಬಗ್ಗೆ ಮೌನ ತಳೆದಿದ್ದ ಭಾರತ ಕೊನೆಗೆ ಖಮೇನಿಯ ಸಂತಾಪ ಸಭೆಯಲ್ಲಿ ಭಾಗವಹಿಸಿತ್ತು. ಇದಾದ ನಂತರ ಇರಾನ್ ಜೊತೆ ಮಾತುಕತೆ ನಡೆಸಿ ಭಾರತದ ತೈಲ ಟ್ಯಾಂಕರ್‌ಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟ ಮಾಡಲು ಅನುಮತಿ ನೀಡಲಾಗಿದೆ. ಅದಕ್ಕೆ ಒಪ್ಪಿದ್ದ ಇರಾನ್ ಭಾರತದ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಿತ್ತು. ಇದೀಗ ಭಾರತ ಇರಾನ್‌ಗೆ ವೈದ್ಯಕೀಯ ನೆರವು ನೀಡಿದ್ದು, ಭಾರತೀಯರಿಗೆ ಹಾಗೂ ಭಾರತ ಸರ್ಕಾರಕ್ಕೆ ಇರಾನ್ ವಿಶೇಷವಾಗಿ ಧನ್ಯವಾದವನ್ನು ಹೊಂದಿದೆ.

ಇದನ್ನೂ ಓದಿ: ಟ್ರಂಪ್‌ಗೆ ಭಾರೀ ಹೊಡೆತ; ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಅಮೆರಿಕದ ಅಧಿಕಾರಿ ರಾಜೀನಾಮೆ

ರಾಜತಾಂತ್ರಿಕತೆಯ ಮೂಲಕ ಸಂಘರ್ಷವನ್ನು ಬಗೆಹರಿಸಿಕೊಳ್ಳುವಂತೆ ಭಾರತ ಶಾಂತಿಯ ಮಂತ್ರ ಪಠಿಸುತ್ತಲೇ ಇದೆ. ಇನ್ನೊಂದೆಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಇತರ ದೇಶಗಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದಕ್ಕೆ ಇರಾನ್‌ಗೆ ಎಲ್ಲ ದೇಶಗಳೂ ಸೇರಿ ಪಾಠ ಕಲಿಸಲು ಟ್ರಂಪ್ ಹೇಳಿಕೆ ನೀಡಿದ್ದರು. ಈ ಕುರಿತು ಭಾರತ ಸೇರಿದಂತೆ ಥೈಲ್ಯಾಂಡ್, ಚೀನಾ ಮುಂತಾದ ದೇಶಗಳನ್ನು ಅಮೆರಿಕ ಸಂಪರ್ಕ ಮಾಡಿದ್ದು, ಹಾರ್ಮುಜ್ ಜಲಸಂಧಿಗೆ ಯುದ್ಧನೌಕೆಯನ್ನು ಕಳುಹಿಸಲು ಕೋರಿದೆ. ಆದರೆ, ಅಮೆರಿಕದ ಈ ಮನವಿಗೆ ಭಾರತ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: ಅಮೆರಿಕ, ಇಸ್ರೇಲ್ ನಮ್ಮೆದುರು ಮಂದಿಯೂರಬೇಕು; ಇರಾನ್ ಸುಪ್ರೀಂ ನಾಯಕ ಪಟ್ಟು

ಯುದ್ಧದಿಂದ ಕಂಗೆಟ್ಟಿರುವ ಇರಾನ್ ದೇಶಕ್ಕೆ ಭಾರತದಿಂದ ವೈದ್ಯಕೀಯ ಕಿಟ್‌ಗಳು ರವಾನೆಯಾಗಿದೆ. ಇವು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ ತಲುಪಿದೆ. ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಒಳಗೊಂಡಿರುವ ಈ ಕಿಟ್ ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿಗೆ ತಲುಪಿದೆ. ಇದು ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ ತೆಗೆದುಕೊಂಡ ಮಾನವೀಯತೆಯ ನಿರ್ಧಾರವಾಗಿದೆ.

ಭಾರತದಲ್ಲಿನ ಇಸ್ಲಾಮಿಕ್ ಗಣರಾಜ್ಯ ಇರಾನ್ ರಾಯಭಾರ ಕಚೇರಿಯು ಭಾರತದ ಈ ನೆರವನ್ನು ಒಪ್ಪಿಕೊಂಡಿದೆ. ಹಾಗೆಯೇ, ಭಾರತೀಯ ಜನರಿಗೆ ಕೃತತೆಯನ್ನು ವ್ಯಕ್ತಪಡಿಸಿದೆ. ಇರಾನ್‌ನ ರಾಯಭಾರ ಕಚೇರಿಯು ಭಾರತದಿಂದ ಕಳುಹಿಸಲಾದ ವೈದ್ಯಕೀಯ ಸಾಮಗ್ರಿಗಳ ವಿತರಣೆಯನ್ನು ತೋರಿಸುವ ವೀಡಿಯೊ ತುಣುಕನ್ನು ಸಹ ಹಂಚಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *