ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?

ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?


ಇರಾನ್ ಮೇಲೆ ಇಸ್ರೇಲ್ ಏರ್ ಸ್ಟ್ರೈಕ್

ಜನವರಿ, ಮಾರ್ಚ್ 1: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಗಳು ಈಗ ಪಶ್ಚಿಮ ಏಷ್ಯಾದಲ್ಲಿ (ಪಶ್ಚಿಮ ಏಷ್ಯಾ ಬಿಕ್ಕಟ್ಟು) ದೊಡ್ಡ ಸಂಘರ್ಷ ವಾತಾವರಣ ಏರ್ಪಟ್ಟಿದೆ. ಈ ಯುದ್ದ ಅನಿರೀಕ್ಷಿತವಲ್ಲವಾದರೂ, ಮಾರುಕಟ್ಟೆಗಳಿಗೆ ಈ ಸಂದರ್ಭವು ಅನಿರೀಕ್ಷಿತವಲ್ಲವಾದರೂ, ಸಾಕಷ್ಟು ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ. ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಸ್ಟ್ರೇಟ್ಗೆ (ಹೋರ್ಮುಜ್ ಜಲಸಂಧಿ) ತಡೆಯಾಗುವ ಸಾಧ್ಯತೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಇದೂ ಸೇರಿದಂತೆ ವಿವಿಧ ಕಾರಣಗಳಿಂದ ಜಾಗತಿಕ ಅನಿಶ್ಚಿತ ಸ್ಥಿತಿ ಹೆಚ್ಚಬಹುದು. ಇದು ಮಾರುಕಟ್ಟೆಗಳ ಮೇಲೆ ಪ್ರತಿಕೂಲ ಪರಿಣಾಮ.

ಚಿನ್ನ, ಬೆಳ್ಳಿ ಬೆಲೆ ಏರಿಕೆ ಸಾಧ್ಯತೆ

ಜಾಗತಿಕ ಅನಿಶ್ಚಿತ ಪರಿಸ್ಥಿತಿ ಉದ್ಭವವಾದರೆ ಚಿನ್ನ, ಬೆಳ್ಳಿಯಂತಹ ನೈಜ ಹಾಗೂ ಅಮೂಲ್ಯ ಲೋಹಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೂಡಿಕೆಗಳು ಅವುಗಳತ್ತ ಹರಿದು ಹೋಗುತ್ತವೆ. ಇರಾನ್ ಅಮೆರಿಕದ ಸಂಘರ್ಷ ಸಂದರ್ಭವೂ ಕೂಡ ಹೂಡಿಕೆದಾರರನ್ನು ಚಿನ್ನ, ಬೆಳ್ಳಿಗಳತ್ತ ನೂಕಬಹುದು. ಸೋಮವಾರದಿಂದ ಈ ಎರಡೂ ಲೋಹಗಳ ಬೆಲೆಯಲ್ಲಿ ಗಣನೀಯ ಏರಿಕೆ ನಿರೀಕ್ಷಿಸಬಹುದು. ಅಪರಂಜಿ ಚಿನ್ನದ ಬೆಲೆ 17,000 ರೂ ದಾಟಬಹುದು ಎನ್ನುತ್ತಾರೆ.

ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ಏರಿಕೆ ತಿಂಗಳು; ಬೆಂಗಳೂರು ಮೊದಲಾದೆಡೆ ಹೊಸ ಎಲ್ಪಿಜಿ ದರಗಳಿವು

ನಿಫ್ಟಿ, ಸೆನ್ಸೆಕ್ಸ್ ಕುಸಿತ?

ಭಾರತದ ಷೇರು ಮಾರುಕಟ್ಟೆಯು ಈ ವಾರ ಗಡಗಡ ನಡುಗಬಹುದು. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಆಗಲಿದೆ ಎಂಬ ಸಕಾರಾತ್ಮಕ ಬೆಳವಣಿಗೆಯ ಖುಷಿಯಲ್ಲಿ ಹೂಡಿಕೆದಾರರು ಈಗ ಇರಾನ್ ಅಮೆರಿಕದ ಸಂಘರ್ಷದ ಭೀತಿಯನ್ನು ಮೂಡಿಸಬಹುದು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳ ಕುಸಿತ ಕಂಡುಬರುತ್ತದೆ. ಸೆನ್ಸೆಕ್ಸ್ 25,000 ಅಂಕಗಳ ಕೆಳಗೆ ಇಳಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ.

ಪೆಟ್ರೋಲ್, ಡೀಸಲ್ ಬೆಲೆ ಏರಿಕೆ?

ಪಶ್ಚಿಮ ಏಷ್ಯಾದಲ್ಲಿರುವ ಹಾರ್ಮುಜ್ ಸಮುದ್ರ ಮಾರ್ಗದಲ್ಲಿ ಶೇ. 20ರಷ್ಟು ತೈಲ ಸಾಗಣೆ ನಡೆಯುತ್ತಿದೆ. ಈ ಮಾರ್ಗಕ್ಕೆ ತಡೆಯಾದರೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಪರಿಣಾಮವಾಗಿ ತೈಲ ಬೆಲೆ ಏರಿಕೆ, ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬಹುದು.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್ : ಕಚ್ಚಾ ತೈಲ ದರ ಏರಿಕೆ ಸಾಧ್ಯತೆ?

ಇರಾನ್ ಮೇಲೆ ಅಮೆರಿಕದ ಯುದ್ಧ ಯಾಕೆ?

ಆಗ್ನೇಯ ಗಲ್ಫ್ ರಾಷ್ಟ್ರಗಳನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಅಮೆರಿಕಕ್ಕೆ ಇರಾನ್ ನಿಂದ ಹಲವು ಕಾಲ ಪ್ರತಿರೋಧವಿದೆ. ಇರಾನ್ ಪರಮಾಣು ಶಸ್ತ್ರ ತಯಾರಿಸುತ್ತಿರುವುದಕ್ಕೆ ಅಮೆರಿಕ ಆಗಿದ್ದರೂ ತಗಾದೆ ಎತ್ತಿದೆ. ಹೀಗಾಗಿಯೇ ಇರಾನ್ ಮೇಲೆ ಹಲವಾರು ವರ್ಷಗಳಿಂದ ಆರ್ಥಿಕ ಮತ್ತು ರಾಜಕೀಯ ದಿಗ್ಬಂಧನ ಹಾಕಿದೆ. ಇರಾನ್ ನಲ್ಲಿ ತನ್ನ ಅಣತಿಯಂತೆ ನಡೆಯುವ ಸರ್ಕಾರ ಸ್ಥಾಪಿಸುವುದು ಅಮೆರಿಕದ ಗುರಿ. ಈಗ ಇರಾನ್ ಮುಖ್ಯಸ್ಥ ಅಯತೊಲ್ಲಾ ಖಮೇನಿ ಅವರನ್ನು ಹತ್ಯೆಗೈದಿರುವ ಅಮೆರಿಕವು ಹೊಸ ನಾಯಕನನ್ನು ಎದುರುನೋಡುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *