ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯಲ್ಲಿ ನಟಿ ನೀನಾ ಗುಪ್ತ ಭಾಗಿ ಆಗಿದ್ದರು. ಆ ವೇಳೆ ಪಾಪರಾಜಿಗಳು ಅವರ ಫೋಟೋ ತೆಗೆದಿದ್ದರು. ಆಗ ನೀನಾ ಗುಪ್ತಗೆ ಹೊಟ್ಟೆ ಬಂದಿದ್ದು ನೋಡಿ, ಪ್ರಗ್ನೆಂಟ್ ಎಂಬ ಪ್ರಶ್ನೆ ಎದುರಾಗಿತ್ತು. 66 ವರ್ಷದ ನಟಿ ಈಗ ತಾಯಿಯಾಗ್ತಿದ್ದಾರಾ? ಸತ್ಯ ಏನು?

amlan kusum ghose ಎನ್ನುವವರ ಜೊತೆ ನೀನಾ ಗುಪ್ತ ಮೊದಲು ಮದುವೆಯಾದರು, ಇವರ ಸಂಬಂಧ ವರ್ಷವೂ ಉಳಿಯಲಿಲ್ಲ. ಇಬ್ಬರೂ ಡಿವೋರ್ಸ್ ಪಡೆದರು. ಆ ಬಳಿಕ Shaarangdev Pandit ಎನ್ನುವವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಆ ಬಳಿಕ ವಿವಿಯಾನ್ ರಿಚರ್ಡ್ಸ್ ಜೊತೆ ಸಂಬಂಧ ಹೊಂದಿದ್ದರು, ಆಗಲೇ ವಿವಿಯಾನ್‌ಗೆ ಮದುವೆ ಆಗಿತ್ತು. 2008ರಲ್ಲಿ ವಿವೆಕ್ ಮೆಹ್ರಾ ಎನ್ನುವವರ ಜೊತೆ ನೀನಾ ಮದುವೆಯಾದರು.

1989 ರಲ್ಲಿ ನೀನಾ ಗುಪ್ತ ಅವರು ಗರ್ಭಿಣಿಯಾದರು, ವಿವಿಯಾನ್‌ಗೆ ಮದುವೆಯಾಗಿದ್ದರಿಂದ, ಅವರು ಏಕಾಂಗಿಯಾಗಿ ಮಗಳನ್ನು ಬೆಳೆಸಿದರು. ವೆಸ್ಟ್ ಇಂಡೀಸ್ ಕ್ರಿಕೆಟ್ ಸ್ಟಾರ್ ವಿವಿಯಾನ್ ರಿಚರ್ಡ್ಸ್ ಜೊತೆಗೆ ಅವರು ಲವ್‌ನಲ್ಲಿದ್ದರು.

Badhai ho ಸಿನಿಮಾದಲ್ಲಿ ನೀನಾ ಗುಪ್ತ ನಟಿಸಿದ್ದರು. ಮದುವೆ ವಯಸ್ಸಿನ ಮಗ ಇರುವಾಗಲೇ ತಾಯಿ ಪ್ರಗ್ನೆಂಟ್ ಆಗುತ್ತಾಳೆ, ಆಮೇಲೆ ಏನಾಗುವುದು ಎಂಬ ಕಥೆ ಈ ಸಿನಿಮಾದಲ್ಲಿದೆ. ತಾಯಿ ಪಾತ್ರದಲ್ಲಿ ನೀನಾ ಗುಪ್ತ ನಟಿಸಿದ್ದರು. ಸಿನಿಮಾದ ಥರ ನೀನಾ ಅವರು ರಿಯಲ್ ಆಗಿ ತಾಯಿಯಾದರಾ ಎಂಬ ಪ್ರಶ್ನೆ ಎದ್ದಿತ್ತು.

ನೀನಾ ಗುಪ್ತ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಎಲ್ಲರಿಗೂ ರಿಯಲ್ ಲೈಫ್ ಬದಾಯಿ ಹೋ ಬೇಕು ಎನಿಸುತ್ತೆ. ಇಲ್ಲಿ ಬದಾಯಿ ಹೋ ಆಗುತ್ತಿಲ್ಲ. ಬಟ್ಟೆ ದಪ್ಪ ಇದ್ದಿದ್ದಕ್ಕೆ ಸೀರೆ ಉಟ್ಟಾಗ ಹಾಗೆ ಕಾಣಿಸಿದೆ. ಈ ವಯಸ್ಸಿನಲ್ಲಿ ನನ್ನ ಪ್ರಗ್ನೆನ್ಸಿ ವಿಚಾರವಾಗಿ ಗಾಸಿಪ್ ಮಾಡುತ್ತಿರುವವರ ಬಗ್ಗೆ ನನಗೆ ನಗು ಬರುತ್ತಿದೆ. ನಾವು ಸಮಾಜವಾಗಿ ಬದಲಾಗುತ್ತಿದ್ದೇವೆ ಎಂದು ಅನಿಸುತ್ತಿದೆ" ಎಂದು ಹೇಳಿದ್ದಾರೆ.

Source link
66 ನೇ ವಯಸ್ಸಿನಲ್ಲಿ ಗರ್ಭಿಣಿಯಾದ್ರಾ ನಟಿ ನೀನಾ ಗುಪ್ತ? ರಶ್ಮಿಕಾ ಮಂದಣ್ಣ ಆರತಕ್ಷತೆಯಲ್ಲಿ ಬಯಲು! ಸತ್ಯ ಏನು?