Bigg Bossಗೆ ಹೊರಟ ದತ್ತನನ್ನೇ ಸಾಯಿಸಿಬಿಟ್ಟಳಾ ಶರಾವತಿ? ಪ್ಲಾಸ್ಟಿಕ್​ ಸರ್ಜರಿ ಜೊತೆ Drishti Bottuಗೆ ಬರ್ತಾನಾ?

Bigg Bossಗೆ ಹೊರಟ ದತ್ತನನ್ನೇ ಸಾಯಿಸಿಬಿಟ್ಟಳಾ ಶರಾವತಿ? ಪ್ಲಾಸ್ಟಿಕ್​ ಸರ್ಜರಿ ಜೊತೆ Drishti Bottuಗೆ ಬರ್ತಾನಾ?

Bigg Bossಗೆ ಹೊರಟ ದತ್ತನನ್ನೇ ಸಾಯಿಸಿಬಿಟ್ಟಳಾ ಶರಾವತಿ? ಪ್ಲಾಸ್ಟಿಕ್​ ಸರ್ಜರಿ ಜೊತೆ Drishti Bottuಗೆ ಬರ್ತಾನಾ?

ದೃಷ್ಟಿಬೊಟ್ಟು ಸೀರಿಯಲ್​ನಲ್ಲಿ ಸದ್ಯ ನಾಯಕ ದತ್ತಾ ನಾಪತ್ತೆಯಾಗಿದ್ದು, ದೃಷ್ಟಿ ಆತನಿಗಾಗಿ ಹುಡುಕುತ್ತಿದ್ದಾಳೆ. ಅವನನ್ನು ಮುಗಿಸಿರುವುದಾಗಿ ಶರಾವತಿ ಹೇಳಿದ್ದಾಳೆ. ಹಾಗಿದ್ರೆ ಬಿಗ್​ಬಾಸ್​​ಗೆ ಹೊರಟ ದತ್ತಾನನ್ನೇ ಫಿನಿಷ್​ ಮಾಡಿದ್ರಾ? ಏನಿದು ಟ್ವಿಸ್ಟ್​?

Bigg Boss Seaon 12 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್​ 28ರಿಂದ ಈ ಷೋ ಆರಂಭವಾಗಲಿದ್ದು, ಈ ಷೋನಲ್ಲಿ ಕಾಣಿಸಿಕೊಳ್ಳುವ ಕೆಲವು ಸ್ಪರ್ಧಿಗಳ ಲಿಸ್ಟ್​ ಇದಾಗಲೇ ಔಟ್​ ಆಗಿದೆ. ಅದರಲ್ಲಿ ಒಂದು ಹೆಸರು ದೃಷ್ಟಿಬೊಟ್ಟು (Drishti Bottu) ಸೀರಿಯಲ್​ನಲ್ಲಿ ದತ್ತಾಭಾಯಿ ರೋಲ್​ ಮಾಡ್ತಿರೋ ನಟ ವಿಜಯ ಸೂರ್ಯ.

ಇದಾಗಲೇ ವಿಜಯ ಸೂರ್ಯ (Vijay Suriya) ಅವರು ದೃಷ್ಟಿ ಬೊಟ್ಟು ಸೀರಿಯಲ್​ನಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಸೀರಿಯಲ್​ನಲ್ಲಿ ಇದಾಗಲೇ ಮಸಿ ಬಳೆದುಕೊಂಡಿದ್ದ ದೃಷ್ಟಿ ತನ್ನ ನಿಜ ರೂಪವನ್ನು ತೋರಿಸಿದ್ದಾಳೆ. ಇವರಿಬ್ಬರ ನಡುವೆ ಬಣ್ಣದ ವಿಷಯವನ್ನೇ ಇಟ್ಟುಕೊಂಡು ಬೆಂಕಿ ಹಚ್ಚುವ ಪ್ಲ್ಯಾನ್​ ಮಾಡಿದ್ದ ದತ್ತನ ಅತ್ತಿಗೆಗೆ ಸೋಲಾಗಿದೆ.

ದತ್ತ ಮತ್ತು ದೃಷ್ಟಿ ನಡುವೆ ಲವ್ ಶುರುವಾಗುವ ಹೊತ್ತಿನಲ್ಲಿಯೇ ಬಿಗ್​ಬಾಸ್​ (Bigg Boss Kannada 12) ಶುರುವಾಗಲಿರುವ ಕಾರಣ, ವಿಜಯ ಸೂರ್ಯ ಅವರು ಸೀರಿಯಲ್​ ಬಿಡುತ್ತಿದ್ದಾರೆ ಎಂದು ಕೆಲವರು, ಇನ್ನು ಕೆಲವರು ದೃಷ್ಟಿಬೊಟ್ಟು ಸೀರಿಯಲ್ಲೇ ಮುಕ್ತಾಯವಾಗಲಿದೆ ಎಂದೆಲ್ಲಾ ಸುದ್ದಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ.

ಇಂದು ಬಿಡುಗಡೆಯಾಗಿರುವ ಪ್ರೊಮೋದಲ್ಲಿ ದತ್ತಭಾಯ್​ ಕಾಣೆಯಾಗಿದ್ದಾನೆ. ಅವನು ಸಿಗದೇ ದೃಷ್ಟಿ ಚಡಪಡಿಸುತ್ತಿದ್ದಾಳೆ. ಅದೇ ಇನ್ನೊಂದೆಡೆ ಶರಾವತಿ ದತ್ತನನ್ನು ಮುಗಿಸಿರುವುದಾಗಿ ಮಾತನಾಡುತ್ತಿದ್ದಾಳೆ. ಇಬ್ಬರನ್ನೂ ಬೇರೆ ಮಾಡಲು ಸಾಧ್ಯವಾಗದ ಕಾರಣ, ದತ್ತನನ್ನೇ ಮುಗಿಸಿರುವುದಾಗಿ ಹೇಳಿದ್ದಾಳೆ.

ಇದರ ಅರ್ಥ ದೃಷ್ಟಿಬೊಟ್ಟು ಸೀರಿಯಲ್​ ಸದ್ಯ ಮುಗಿಯುವುದಿಲ್ಲ. ದತ್ತನ ರೋಲ್​ ಚೇಂಜ್​ ಆಗುವ ಸಾಧ್ಯತೆ ನಿಚ್ಚಳವಾಗಿದೆ. ವಿಜಯ ಸೂರ್ಯ ಅವರು ಬದಲಾಗುವ ಎಲ್ಲಾ ಸೂಚನೆಗಳೂ ಕಾಣುತ್ತಿವೆ. ದತ್ತನ ರೋಲೇ ಚೇಂಜ್​ ಮಾಡ್ತಾರಾ ಅಥವಾ ದತ್ತನಿಗೇ ಪ್ಲಾಸ್ಟಿಕ್​ ಸರ್ಜರಿ ಮಾಡಿದಂತೆ ಮಾಡಿ ಕಥೆಗೆ ಬೇರೆ ರೂಪ ಕೊಡುತ್ತಾರಾ ಎಂದು ಕಾಯಬೇಕಿದೆ.

ಈ ಹಿಂದೆ ಜೊತೆ ಜೊತೆಯಲಿ ಸೀರಿಯಲ್​ನಲ್ಲಿ ನಾಯಕನ ರೋಲ್​ ಮಾಡುತ್ತಿದ್ದ ಅನಿರುದ್ಧ್​ ಅವರು ಬಿಟ್ಟುಹೋದಾಗ ಪ್ಲಾಸ್ಟಿಕ್​ ಸರ್ಜರಿ ಮಾಡಿದಂತೆ ಮಾಡುವ ಮೂಲಕ ಹೊಸ ನಾಯಕನನ್ನು ಪರಿಚಯಿಸಲಾಗಿತ್ತು. ಇಲ್ಲಿಯೂ ಅದೇ ರೀತಿ ಆದರೂ ಅಚ್ಚರಿಯಿಲ್ಲ. ಆದರೆ ಇದನ್ನು ವೀಕ್ಷಕರು ಹೇಗೆ ಅರಗಿಸಿಕೊಳ್ಳುತ್ತಾರೆ ಎನ್ನವುದೇ ಈಗಿರುವ ಪ್ರಶ್ನೆ.

ಪ್ಲಾಸ್ಟಿಕ್ ಸರ್ಜರಿ ಮಾಡಲಿ, ಅಥವಾ ದತ್ತಾ ರೋಲ್​ ಅನ್ನು ಚೇಂಜ್​ ಮಾಡಲಿ ಒಟ್ಟಿನಲ್ಲಿ ವೀಕ್ಷಕರಿಗೆ ಒಂದಷ್ಟು ದಿನ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಕೆಲವು ವರದಿಗಳ ಪ್ರಕಾರ ಈ ಸೀರಿಯಲ್​ಗೆ ಅಷ್ಟೊಂದು ಟಿಆರ್​ಪಿ ಇಲ್ಲದ ಕಾರಣ ಅದರ ಟೈಮಿಂಗ್​ ಬದಲು ಮಾಡಲಾಗಿತ್ತು ಎನ್ನಲಾಗಿದೆ. ಈಗ ಹೊಸ ಟ್ವಿಸ್ಟ್​ ಕೊಟ್ಟು ಜನರನ್ನು ಆಕರ್ಷಿಸಬಹುದಾ, ಅಥವಾ ಸೀರಿಯಲ್​ ಮುಗಿಸ್ತಾರಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
View this post on Instagram
A post shared by Colors Kannada Official (@colorskannadaofficial)

Source link

Leave a Reply

Your email address will not be published. Required fields are marked *