ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಈ ಬದಲಾವಣೆಯೊಂದಿಗೆ ಎಡಗೈ ದಾಂಡಿಗ ಇಶಾನ್ ಕಿಶನ್ ಭಾರತ ಏಕದಿನ ತಂಡಕ್ಕೂ ಇರಲಿದ್ದಾರೆ ಎಂದು ವರದಿಯಾಗಿದೆ. ಆದರೆ ಇಶಾನ್ ಕಿಶನ್ ಅವರ ಆಯ್ಕೆಯಿಂದ ಹೊರಬೀಳುತ್ತಿರುವುದು ರಿಷಭ್ ಪಂತ್ ಎಂಬುದು ಅಚ್ಚರಿ.
ನ್ಯೂಝಿಲೆಂಡ್ದ ಏಕದಿನ ಸರಣಿಯ ವಿರುದ್ಧ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಕೈ ಬಿಡಲು ಬಿಸಿ ಸಮಿತಿಯು ಚಿಂತಿಸಿದೆ ಎಂದು ವರದಿ ಮಾಡಿದೆ. ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ.
ಇಶಾನ್ ಕಿಶನ್ ಭರ್ಜರಿ ಫಾರ್ಮ್ ನಲ್ಲಿದ್ದು, ಈ ಫಾರ್ಮ್ ಕಾರಣದಿಂದಲೇ ಅವರು ಟಿ20 ಗೆ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ವಿಜಯ ಹಜಾರೆ ಸ್ಪರ್ಧೆಯಲ್ಲೂ ಕೇವಲ 33 ಪ್ರಯತ್ನಗಳಲ್ಲಿ ಶತಕ ಸಿಡಿಸಿದ್ದಾರೆ. ಅದು ಕೂಡ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು ಎಂಬುದು ಇಲ್ಲಿ ಉಲ್ಲೇಖಾರ್ಹ.
ಈ ಸ್ಫೋಟಕ ಇನಿಂಗ್ಸ್ ಬೆನ್ನಲ್ಲೇ ಇಶಾನ್ ಕಿಶನ್‌ಗೆ ಭಾರತ ಏಕದಿನ ತಂಡಕ್ಕೂ ಸ್ಥಾನ ನೀಡುವ ಬಗ್ಗೆ ಯೋಚಿಸಲಾಗಿದೆ. ಇತ್ತ ಇಶಾನ್ ಅವರನ್ನು ಆಯ್ಕೆ ಮಾಡಬೇಕಿದ್ದರೆ ಪಂತ್ ಅವರನ್ನು ಕೈ ಬಿಡಲೇಬೇಕು. ಏಕೆಂದರೆ ಇಬ್ಬರೂ ಸಹ ಕೀಪರ್ ಬ್ಯಾಟರ್ಗಳು.
ಅತ್ತ ಇಶಾನ್ ಕಿಶನ್ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಚಾಕಚಕ್ಯತೆಯನ್ನು ಹೊಂದಿದೆ. ಹೀಗಾಗಿ ಅವರ ಆಯ್ಕೆಯಿಂದ ಕೀಪರ್, ಫಿನಿಶರ್ ಹಾಗೂ ಓಪನರ್ ಸ್ಥಾನಗಳನ್ನು ತುಂಬಬಹುದು. ಹೀಗಾಗಿ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ಹೆಚ್ಚಿನ ಆಸಕ್ತಿ ಹೊಂದಿದೆ.
ಅಷ್ಟೇ ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ ಕೆಎಲ್ ರಾಹುಲ್ ಅವರಿಗೆ ಕೀಪರ್ ಬ್ಯಾಟರ್ ಆಗಿ ಆಯ್ಕೆ ಮಾಡಿದರೂ ಇಶಾನ್ ಕಿಶನ್ ಅವರಿಗೆ ಫಿನಿಶರ್ ರೂಪದಲ್ಲಿ ಕಣಕ್ಕಿಳಿಸುವ ಅವಕಾಶ ದೊರೆಯಲಿದೆ. ಹೀಗಾಗಿ ಕಿವೀಸ್ ವಿರುದ್ಧದ ಸರಣಿಯಲ್ಲಿ ಇಶಾನ್ ಕಿಶನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಭಾರತದ ಸಂಭಾವ್ಯ ತಂಡ: ಶುಭಮನ್ ಗಿಲ್ (ನಾಯಕ), ಶ್ರೇಯಸ್ ಅಯ್ಯರ್ (ಉಪನಾಯಕ) ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಮತ್ತು ಕೀಪರ್), ಇಶಾನ್ ಕಿಶನ್ (ಮತ್ತು ಕೀಪರ್), ರುತುರಾಜ್ ಗಾಯಕ್ವಾಡ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಜೋಶ್ ಟಂಗ್ ಕರಾರುವಾಕ್ ದಾಳಿಯಿಂದ ಆಸ್ಟ್ರೇಲಿಯಾಗೆ 60 ಕೋಟಿ ರೂ. ನಷ್ಟ..!
ಭಾರತ vs ನ್ಯೂಝಿಲೆಂಡ್ ಏಕದಿನ ಸರಣಿ
- ಮೊದಲ ಏಕದಿನ ಪಂದ್ಯ – ಜನವರಿ 11 – ವಡೋದರಾ – ಮಧ್ಯಾಹ್ನ 1:30
- ಎರಡನೇ ಏಕದಿನ ಪಂದ್ಯ – ಜನವರಿ 14 – ರಾಜ್‌ಕೋಟ್ – ಮಧ್ಯಾಹ್ನ 1:30
- ಮೂರನೇ ಏಕದಿನ ಪಂದ್ಯ – ಜನವರಿ 18 – ಇಂದೋರ್ – ಮಧ್ಯಾಹ್ನ 1:30