6,6,6,6…ಇಶಾನ್ ಕಿಶನ್ ಸ್ಫೋಟಕ ಶತಕ! ಪಾಕೆಟ್ ಡೈನಮೊ ಆಟಕ್ಕೆ ಕಿವೀಸ್ ಕಂಗಾಲು!

6,6,6,6…ಇಶಾನ್ ಕಿಶನ್ ಸ್ಫೋಟಕ ಶತಕ! ಪಾಕೆಟ್ ಡೈನಮೊ ಆಟಕ್ಕೆ ಕಿವೀಸ್ ಕಂಗಾಲು!

6,6,6,6…ಇಶಾನ್ ಕಿಶನ್ ಸ್ಫೋಟಕ ಶತಕ! ಪಾಕೆಟ್ ಡೈನಮೊ ಆಟಕ್ಕೆ ಕಿವೀಸ್ ಕಂಗಾಲು!

Ishan Kishan Hundred: ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇಶಾನ್ ಕಿಶನ್ ಬ್ಯಾಟ್‌ನಿಂದ ಅಬ್ಬರಿಸಿದ್ದು, ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದರು. ಅವರು ತಮ್ಮ ವೃತ್ತಿಜೀವನದ ಮೊದಲ T20i ಶತಕವನ್ನು ಬಾರಿಸಿದ್ದಾರೆ.

ತಿರುವನಂತಪುರಂ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಶಾನ್ ಕಿಶನ್ ಸ್ಫೋಟಕ ಶತಕ ಬಾರಿಸಿದ್ದಾರೆ. ಕೇವಲ 42 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಆರಂಭದಿಂದಲೇ ಅಪಾಯಕಾರಿಯಾಗಿ ಕಂಡ ಅವರು ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಆಕರ್ಷಕ ಶತಕ ಸಿಡಿಸಿ ಮಿಂಚಿದರು.

ತನ್ನ 102 ರನ್‌ಗಳ ಇನ್ನಿಂಗ್ಸ್‌ನಲ್ಲಿ ಇಶಾನ್ ಕಿಶನ್ 84 ರನ್‌ಗಳನ್ನು ಬೌಂಡರಿಗಳಿಂದಲೇ ಗಳಿಸಿದ್ದು ವಿಶೇಷ. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಒಟ್ಟು 10 ಸಿಕ್ಸರ್‌ ಮತ್ತು 6 ಬೌಂಡರಿಗಳನ್ನು ಬಾರಿಸಿದರು. ಕೇವಲ 18 ರನ್‌ಗಳನ್ನು ಓಡಿ ಗಳಿಸಿದರು. ಅವರ ಈ ಆಟ ನ್ಯೂಜಿಲೆಂಡ್ ತಂಡವನ್ನು ಕಂಗೆಡಿಸಿತು.

ತಂಡ ಸಂಕಷ್ಟದಲ್ಲಿದ್ದಾಗ ಇಶಾನ್ ಕಿಶನ್ ಈ ಸ್ಫೋಟಕ ಶತಕ ಬಾರಿಸಿದರು. ನಾಯಕ ಸೂರ್ಯಕುಮಾರ್ ಯಾದವ್ ಜೊತೆಗೂಡಿ ಇನ್ನಿಂಗ್ಸ್ ರನ್ ಗಳಿಕೆಗೆ ಚುರುಕು ಮುಟ್ಟಿಸಿದರು. ಇಶ್ ಸೋಧಿ ಅವರ ಒಂದು ಓವರ್‌ನಲ್ಲಿ 29 ರನ್ ಚಚ್ಚಿದರು.

ಇಶಾನ್ ಕಿಶನ್ ಅವರ ಈ ಮೊದಲ T20I ಶತಕಕ್ಕೆ ನ್ಯೂಜಿಲೆಂಡ್ ಫೀಲ್ಡರ್ ಕೂಡ ಕಾರಣ. 91 ರನ್‌ಗಳಿಸಿದ್ದಾಗ ಕೈಲ್ ಜೇಮಿಸನ್ ಎಸೆತದಲ್ಲಿ ಅವರು ನೀಡಿದ ಕ್ಯಾಚನ್ನು ಫೀಲ್ಡರ್ ಕೈಬಿಟ್ಟರು. ಕ್ಯಾಚ್ ಮಾತ್ರವಲ್ಲದೆ, ಅದು ಸಿಕ್ಸರ್‌ ಕೂಡ ಆಯಿತು. ಇದರಿಂದ ಅವರು ಶತಕದ ಸಮೀಪಕ್ಕೆ ಬಂದರು.

ಇಶಾನ್ ಕಿಶನ್ ಅವರ ಬಿರುಸಿನ ಶತಕದ ನೆರವಿನಿಂದ ಟೀಂ ಇಂಡಿಯಾ 271 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಸೂರ್ಯಕುಮಾರ್ ಯಾದವ್ 63 ರನ್ ಮತ್ತು ಅಭಿಷೇಕ್ ಶರ್ಮಾ 30 ರನ್ ಗಳಿಸಿದರು. ಇದು ಕಿವೀಸ್ ವಿರುದ್ಧ ಭಾರತದ ಅತಿ ದೊಡ್ಡ T20i ಮೊತ್ತವಾಗಿದೆ.

Source link

Leave a Reply

Your email address will not be published. Required fields are marked *