ಗಾಜಾಪಟ್ಟಿ, ನವೆಂಬರ್ 21: ಇಸ್ರೇಲ್ ರಕ್ಷಣಾ ಪಡೆಗಳು ಗಾಜಾಪಟ್ಟಿಯಲ್ಲಿ ಹಮಾಸ್ ಸುರಂಗ ಅಡಗುದಾಣವನ್ನು ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ಭಯೋತ್ಪಾದಕ ಗುಂಪು ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರ ದೇಹವನ್ನು ಹಿಡಿದಿತ್ತು. 2024 ರ ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಗಾಜಾದಲ್ಲಿ ಹೊಂಚುದಾಳಿಯ ಸಮಯದಲ್ಲಿ ಲೆಫ್ಟಿನೆಂಟ್ ಗೋಲ್ಡಿನ್ ಕೊಲ್ಲಲ್ಪಟ್ಟಿದ್ದರು. ಈ ತಿಂಗಳ ಆರಂಭದಲ್ಲಿ, ಇಸ್ರೇಲ್ ಅವರ ಅವಶೇಷಗಳನ್ನು ಸ್ವೀಕರಿಸಿತ್ತು.
ಗೋಲ್ಡಿನ್ ಅವರ ದೇಹವನ್ನು ಇರಿಸಲಾಗಿದ್ದ ಸುರಂಗದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ಸುರಂಗ 7 ಕಿ.ಮೀ ಉದ್ದವಿದೆ, 25 ಅಡಿ ಆಳವಿದೆ, 80 ಕೋಣೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸುರಂಗವನ್ನು ಹಮಾಸ್ ಕಮಾಂಡರ್ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು, ದಾಳಿಗಳನ್ನು ಯೋಜಿಸಲು ಬಳಸುತ್ತದೆ.
ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ