Headlines

90 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ, ಬಡವರ ಬಾಳಿಗೆ ಸಮರಾಘಾತ! | Israel Iran War Impact On Civilians Iron Dome Middle East Crisis News San Videoshow

90 ಸೆಕೆಂಡುಗಳ ಬದುಕು..ಇಸ್ರೇಲ್, ಇರಾನ್‌ ಜನರ ಅನುಕ್ಷಣದ ತಳಮಳ, ಬಡವರ ಬಾಳಿಗೆ ಸಮರಾಘಾತ! | Israel Iran War Impact On Civilians Iron Dome Middle East Crisis News San Videoshow


ಬೆಂಗಳೂರು (ಮಾ.14): ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಜ್ವಾಲೆ ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿದೆ. ಒಂದು ಕಡೆ ಇಸ್ರೇಲ್ ತನ್ನ ‘ಐರನ್ ಡೋಮ್’ ಎಂಬ ಭದ್ರಕೋಟೆಯ ನಡುವೆಯೂ ಪ್ರತಿಕ್ಷಣ ಸಾವಿನ ಭೀತಿಯಲ್ಲಿ ಬದುಕುತ್ತಿದ್ದರೆ, ಇನ್ನೊಂದೆಡೆ ಇರಾನ್ ಸರ್ಕಾರ ಮಿಸೈಲ್‌ಗಳಿಗಾಗಿ ಕೋಟಿ ಕೋಟಿ ಸುರಿಯುತ್ತಿದೆ.

ಅಲ್ಲಿನ ಸಾಮಾನ್ಯ ಜನರು ಹಸಿವು ಮತ್ತು ಆರ್ಥಿಕ ಸಂಕಷ್ಟದಿಂದ ಪಾರ್ಕಿಂಗ್ ಲಾಟ್‌ಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ಪ್ರತೀಕಾರದ ಹೆಸರಿನಲ್ಲಿ ನಡೆಯುತ್ತಿರುವ ಈ ನರಮೇಧಕ್ಕೆ ಲೆಬನಾನ್‌ನಂತಹ ರಾಷ್ಟ್ರಗಳು ಚೇತರಿಸಿಕೊಳ್ಳುವ ಮುನ್ನವೇ ಮಣ್ಣಾಗುತ್ತಿವೆ.

ಹಾರ್ಮುಜ್‌ನಲ್ಲಿ ಭಾರತದ ಪವರ್: ಯಾವುದೇ ಬೆಂಗಾವಲು ಇಲ್ಲದೆ ಜಲಸಂಧಿ ದಾಟಿದ ‘ಶಿವಾಲಿಕ್,ನಂದಾದೇವಿ’!

ಹಾರ್ಮುಜ್ ಜಲಸಂಧಿಯ ಮೇಲೆ ಉಂಟಾಗಿರುವ ದಿಗ್ಬಂಧನ ಬಡವರ ಬಾಳಿಗೆ ಸಮರಾಘಾತ ನೀಡಿದೆ. ಇಸ್ರೇಲಿನ ಕ್ರೋಧಾಗ್ನಿ ಮತ್ತು ಇರಾನ್‌ನ ಮಿಸೈಲ್ ಹಪಾಹಪಿಯ ನಡುವೆ ಸಿಲುಕಿರುವುದು ಅಮಾಯಕ ಜನರ ಆಕ್ರಂದನ ಮಾತ್ರ. ಈ ಸೇಡಿನ ಚಕ್ರವ್ಯೂಹ ಕೇವಲ ಗಡಿಗಳಿಗೆ ಸೀಮಿತವಾಗದೆ, ಜಾಗತಿಕ ಆರ್ಥಿಕತೆ ಮತ್ತು ಶಾಂತಿಯನ್ನೇ ನುಂಗಿ ಹಾಕುವ ಗಂಡಾಂತರ ಎದುರಾಗಿದೆ. ಕೋಟಿ ಕೋಟಿ ವೆಚ್ಚದ ಭದ್ರಕೋಟೆಗಳಿದ್ದರೂ ಸಾಮಾನ್ಯನ ಪಾಲಿಗೆ ಸಾವಿನ ಸೂತಕ ಮಾತ್ರ ನಿರಂತರವಾಗಿದೆ.



Source link

Leave a Reply

Your email address will not be published. Required fields are marked *