Headlines

ಇರಾನ್ ರಾಜಧಾನಿ ಟೆಹರಾನ್​ ಮೇಲೆ ಇಸ್ರೇಲ್​​ನಿಂದ ಕ್ಷಿಪ್ಪಣಿ ದಾಳಿ:

ಇರಾನ್ ರಾಜಧಾನಿ ಟೆಹರಾನ್​ ಮೇಲೆ ಇಸ್ರೇಲ್​​ನಿಂದ ಕ್ಷಿಪ್ಪಣಿ ದಾಳಿ:


ಇರಾನ್ ರಾಜಧಾನಿ ಟೆಹರಾನ್ ನಗರದ ಮೇಲೆ ದಾಳಿಚಿತ್ರದ ಕ್ರೆಡಿಟ್ ಮೂಲ: ಗೂಗಲ್

ಟೆಹರಾನ್, ಫೆಬ್ರವರಿ 28: ಇರಾನ್ ಮತ್ತು ಇಸ್ರೇಲ್ನಡುವೆ ಯುದ್ಧದ ಕಾರ್ಮೋಡ ಹೆಚ್ಚಿದ್ದು, ಇರಾನ್ ರಾಜಧಾನಿ ಟೆಹರಾನ್ ನಗರದ ಮೇಲೆ ಇಸ್ರೇಲ್ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹಾಗೂ ಅಧ್ಯಕ್ಷ ಮಸೂದ್ ಪೆಜೇಶ್ಕಿಯಾನ್ ಭವನವನ್ನು ಗುರಿಯಾಗಿಸಿ ಈ ಅಟ್ಯಾಕ್ ನಡೆದಿದ್ದು, ಟೆಹರಾನ್‌ನ ಹಲವೆಡೆ ಭಾರಿ ಸದ್ದಿನೊಂದಿಗೆ ಸರಣಿ ಸ್ಫೋಟ ಸಂಭವಿಸಿದೆ. ಕ್ಷಿಪಣಿ ದಾಳಿ, ಸರಣಿ ಸ್ಫೋಟದಿಂದ ಇರಾನ್ ಜನತೆ ತತ್ತರಿಸಿದ್ದಾರೆ. ಇರಾನ್ ಸೇನೆ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಇರಾನ್ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್ ಸ್ಪಷ್ಟನೆ ನೀಡಿದೆ.

ಪೂರ್ವಯೋಜಿತ ದಾಳಿ

2025 ರ ಜೂನ್‌ನಲ್ಲಿ 12 ದಿನಗಳ ಕಾಲ ನಡೆದ ಇರಾನ್-ಇಸ್ರೇಲ್ ವಾಯುಯುದ್ಧದ ನಂತರ ಈ ದಾಳಿ ನಡೆಯಿತು. ಇರಾನ್ ತನ್ನ ಅಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮ ಮುಂದುವರಿಸಿದರೆ ಮತ್ತೆ ದಾಳಿ ನಡೆಸುವುದಾಗಿ ಅಮೆರಿಕ ಮತ್ತು ಇಸ್ರೇಲ್ ಮುಂಚೆಯೇ ಎಚ್ಚರಿಕೆ ನೀಡಲಾಗಿತ್ತು. ಇಂದು (ಶನಿವಾರ) ನಡೆದ ಇಸ್ರೇಲ್ ಕಾರ್ಯಾಚರಣೆ ಅಮೆರಿಕದ ಸಂಯೋಜಿತವಾಗಿತ್ತು ಎಂದು ಇಸ್ರೇಲಿ ರಕ್ಷಣಾ ಅಧಿಕಾರಿಯೊಬ್ಬರು ಆಗಮಿಸಿದ್ದರು. ಈ ಕಾರ್ಯಾಚರಣೆಯು ತಿಂಗಳುಗಳ ಕಾಲ ಯೋಜಿತವಾಗಿದ್ದು, ದಾಳಿ ದಿನಾಂಕವನ್ನು ವಾರದ ಹಿಂದೆ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ. ಈ ತಿಂಗಳಷ್ಟೇ ಅಮೆರಿಕ ಮತ್ತು ಇರಾನ್ ಹಲವು ವರ್ಷಗಳ ವಿವಾದವನ್ನು ರಾಜತಾಂತ್ರಿಕವಾಗಿ ಪರಿಹರಿಸಲು ಮಾತುಕತೆ ಪುನರಾರಂಭಿಸಿತ್ತು. ಆದರೆ ಈ ದಾಳಿಯ ಹಿನ್ನೆಲೆ ಮಾತುಕತೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ಸರ್ಕಾರದಿಂದ ಹೊಸ ಸಲಹೆ

ಇಸ್ರೇಲ್ ಪ್ರಕಟಣೆ

ಇರಾನ್ ಮೇಲಿನ ದಾಳಿ ಬೆನ್ನಲ್ಲೇ ಇಸ್ರೇಲ್ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿಲ್ಲ, ತುರ್ತುಸೇವೆ ಉಳಿದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನೂ ಇಸ್ರೇಲ್ ನಿರ್ಬಂಧಿಸಿದೆ. ಇನ್ನು ಇಸ್ರೇಲ್ ನಡೆಸಿದ ದಾಳಿ ವೇಳೆ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ತೆಹ್ರಾನ್‌ನಲ್ಲಿ ಇಲ್ಲ ಎಂದು ವರದಿಯಾಗಿದೆ. ಅಮೇರಿಕಾ ಅಧಿಕಾರಿಗಳು ಮತ್ತು ನ್ಯೂಯಾರ್ಕ್ ಟೈಮ್ಸ್ ರಾಯಟರ್ಸ್‌ಗೆ ನೀಡಿರುವ ಮಾಹಿತಿಯ ಪ್ರಕಾರ, ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 1:01 pm, ಶನಿ, 28 ಫೆಬ್ರವರಿ 26





Source link

Leave a Reply

Your email address will not be published. Required fields are marked *