Headlines

“ಸರ್ವೋಚ್ಚ ನಾಯಕ ಯಾರೇ ಆಗಲಿ ಜೀವಂತ ಬಿಡುವುದಿಲ್ಲ” : ಇರಾನ್​​​ಗೆ ಎಚ್ಚರಿಕೆ ನೀಡಿದ ಇಸ್ರೇಲ್

“ಸರ್ವೋಚ್ಚ ನಾಯಕ ಯಾರೇ ಆಗಲಿ ಜೀವಂತ ಬಿಡುವುದಿಲ್ಲ” : ಇರಾನ್​​​ಗೆ ಎಚ್ಚರಿಕೆ ನೀಡಿದ ಇಸ್ರೇಲ್


“ಸರ್ವೋಚ್ಚ ನಾಯಕ ಯಾರೇ ಆಗಲಿ ಜೀವಂತ ಬಿಡುವುದಿಲ್ಲ” : ಇರಾನ್‌ಗೆ ಎಚ್ಚರಿಕೆ ನೀಡಿದ ಇಸ್ರೇಲ್

ಟೆಹ್ರಾನ್, ಮಾ.8: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ಅಂತಿಮ ಹಂತಕ್ಕೆ ತಲುಪಿದೆ. ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ (ಸುಪ್ರೆಮ್ ಲೀಡರ್) ಯಾರೇ ಆಗಲಿ, ಅವರನ್ನು ಹುಡುಕಿ ಹುಡುಕಿ ಕೊಲ್ಲುವುದಾಗಿ ಇಸ್ರೇಲ್ ಅತ್ಯಂತ ಖಡಕ್ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲದೆ, ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರನ್ನೂ ಬಿಡುವುದಿಲ್ಲ ಇಸ್ರೇಲ್ ಗುಡುಗಿದೆ.

ಇರಾನ್‌ನಲ್ಲಿ ಸುಪ್ರೀಮ್ ಲೀಡರ್ ಹುದ್ದೆಗೆ ಯಾರೇ ಆಯ್ಕೆ ಮಾಡಿಕೊಳ್ಳಬೇಕು ಅವರನ್ನು ಇಸ್ರೇಲ್ ಸುಮ್ಮನೆ ಬಿಡುವುದಿಲ್ಲ. ಇಸ್ರೇಲ್ ರಕ್ಷಣಾ ಪಡೆಗಳು ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಿವೆ ಎಂಬ ಸಂದೇಶ ರವಾನೆಯಾಗಿದೆ. ಕೇವಲ ನಾಯಕನನ್ನಷ್ಟೇ ಅಲ್ಲ, ಇರಾನ್‌ನ ಅತ್ಯುನ್ನತ ಮಂಡಳಿಯಲ್ಲಿ ಅತ್ಯುನ್ನತ ಲೀಡರ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಸದಸ್ಯರನ್ನೂ ಇಸ್ರೇಲ್ ಹೊಡೆದು ಹಾಕಲಾಗಿದೆ.

ಇದನ್ನೂ ಓದಿ: ಟ್ರಂಪ್ ಮಗನ ಜೊತೆ ಉತ್ತರ ಕೊರಿಯಾ ಅಧ್ಯಕ್ಷನ ಮಗಳ ಮದುವೆ ಫಿಕ್ಸ್? ಫೋಟೋ ವೈರಲ್

ಇತ್ತೀಚಿನ ದಿನಗಳಲ್ಲಿ ಇರಾನ್ ಬೆಂಬಲಿತ ಸಂಘಟನೆಗಳ ದಾಳಿ ಮತ್ತು ಇರಾನ್ ಪರಮಾಣು ಕಾರ್ಯಕ್ರಮಗಳು ಇಸ್ರೇಲ್ ಈ ಕಠಿಣ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. “ಯಾರೇ ಲೀಡರ್ ಆಗಲಿ, ನಾವು ಅವರನ್ನು ಬಿಡುವುದಿಲ್ಲ. ಹುಡುಕಿ ಹುಡುಕಿ ಹೊಡೆಯುತ್ತೇವೆ” ಎಂಬ ಇಸ್ರೇಲ್ನ ಮಾತುಗಳು ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿವೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *