ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್ ಮಾಡಲಾಗಿದೆ. ವರ್ಷಗಳಿಂದ ಖಮೇನಿ ರಹಸ್ಯವಾಗಿ ಹಿಂಬಾಲಿಸಿದ್ದ ಇಸ್ರೇಲ್ ನಿಖರ ಗುರಿಯಿಟ್ಟಿದೆ. ರೋಚಕ ಕಾರ್ಯಾಚರಣೆ ಬಹಿರಂಗವಾಗಿದೆ.

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ದಾಳಿ ಮಾಡುತ್ತಿದೆ. ಪ್ರಮುಖವಾಗಿ ಇಸ್ರೇಲ್ ದಾಳಿ ನಿರಂತರವಾಗಿ ನಡೆಯುತ್ತಿದೆ. ಇಸ್ರೇಲ್‌ಗೆ ಬೆಂಬಲವಾಗಿ ಅಮೆರಿಕ ನಿಂತಿದೆ. ಯುದ್ಧ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಇಸ್ರೇಲ್ ಸೇನೆ, ಇರಾನ್ ಸರ್ವೋಚ್ಚ ನಾಯಕ ಅಯತೋಲ್ಲಾ ಖಮೇನಿಯನ್ನು ಹತ್ಯೆ ಮಾಡಿದೆ. ಈ ಹತ್ಯೆ ಹಿಂದಿನ ರೋಚಕ ಕಾರ್ಯಾಚರಣೆ ಬಯಲಾಗಿದೆ.

ಇಸ್ರೇಲ್ ಗುಪ್ತಚರ ವಿಭಾಗ ಮೊಸಾದ್, ಅಮೆರಿಕದ ಸಿಐಎ ಜಂಟಿಯಾಗಿ ಕಳೆದ ಒಂದು ವರ್ಷದಿಂದ ಕಾರ್ಯಾಚರಣೆ ನಡೆಸಿತ್ತು. ಇರಾನ್ ಪರಮಾಣು ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಅಲರ್ಟ್ ಆಗಿತ್ತು. ಖಮೇನಿ ಹತ್ಯೆ ಅಚನಕ್ಕಾಗಿ ಸೃಷ್ಟಿಯಾದ ಯುದ್ಧದಿಂದ ನಡೆದಿಲ್ಲ. ಟಾರ್ಗೆಟ್ ಮಾಡಿ ಹೊಡೆಯಾಗಿದೆ. ಯುದ್ಧ ಆರಂಭಗೊಂಡ ಕಾರಣ ಖಮೇನಿಯನ್ನು ಹತ್ಯೆ ಮಾಡಿಲ್ಲ, ಖಮೇನಿ ಹತ್ಯೆಗೆ ಕೆಲ ವರ್ಷಗಳ ಮೊದಲೇ ಪ್ಲಾನ್ ರೆಡಿ ಮಾಡಲಾಗಿತ್ತು.

ಖಮೇನಿ ಹತ್ಯೆಗೆ ಮೋಸಾದ್ ಹಾಗೂ ಸಿಐಎ ಇರಾನ್‌ನ ಟೆಹರಾನ್‌ನ ಪ್ರಮುಖ ಟ್ರಾಫಿಕ್ ಕ್ಯಾಮೆರಾ ಅವುಗಳ ನೆಟ್‌ವರ್ಕ್ ಹ್ಯಾಕ್ ಮಾಡಲಾಗಿತ್ತು. ಈ ಮೂಲಕ ಖಮೇನಿ ವಾಹನ, ಖಮೇನಿ ಬೆಂಗಾವಲು ಪಡೆ ಸೇರಿದಂತೆ ಎಲ್ಲಾ ಚಲನವಲನಗಳನ್ನು ಇಸ್ರೇಲ್ ಸಂಗ್ರಹಿಸಿತ್ತು. ಮೊಬೈಲ್ ನೆಟ್‌ವರ್ಕ್ ಹ್ಯಾಕ್ ಮಾಡಲಾಗಿತ್ತು. ಟೆಹ್ರಾನ್‌ನಲ್ಲಿ ಹುಲ್ಲು ಕಡ್ಡಿ ಅಲುಗಾಡಿದರೂ ಖಮೇನಿಗಿಂತ ಹೆಚ್ಚಾಗಿ ಮೊಸಾದ್ ಹಾಗೂ ಸಿಐಎಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.

ಖಮೇನಿ ಯಾರನ್ನು ಭೇಟಿಯಾಗುತ್ತಾರೆ, ಯಾರ ಜೊತೆ ಸಭೆ ನಡೆಸುತ್ತಾರೆ, ಎಲ್ಲಿ ತಂಗುತ್ತಾರೆ ಅನ್ನೋ ಎಲ್ಲಾ ಮಾಹಿತಿಯನ್ನು ಇಸ್ರೇಲ್ ಸಂಗ್ರಹಿಸಿತ್ತು. ಕಳೆದ ಕೆಲ ತಿಂಗಳ ಹಿಂದೆ ಅಮೇರಿಕ ಏಕಾಏಕಿ ಇರಾನ್ ಮೇಲೆ ದಾಳಿ ನಡೆಸಿತ್ತು. ಈ ತುರ್ತು ಪರಿಸ್ಥಿತಿ, ದಾಳಿ ವೇಳೆ ಖಮೇನಿ ಸುರಕ್ಷಿತವಾಗಿ ಇರುವ ಸ್ಥಗಳ ಕುರಿತು ಇಸ್ರೇಲ್ ಮಾಹಿತಿ ಕಲೆ ಹಾಕಿತ್ತು.

ಒಂದು ದೇಶ ಪರಮಾಣು ಬಾಂಬ್ ಅಭಿವೃದ್ಧಿ ಮಾಡುವುದು, ಶೇಖರಿಸಿಡಲು ಕೆಲ ಮಾರ್ಗಸೂಚಿಗಳಿವೆ. ಕೆಲ ಒಪ್ಪಂದಗಳಿವೆ. ಇದನ್ನು ಪಾಲನೆ ಮಾಡದೇ ಹಲವು ರಾಷ್ಟ್ರಗಳು ಪರಮಾಣು ಬಾಂಬ್ ಇಟ್ಟುಕೊಂಡಿದೆ. ಭಾರತ, ಪಾಕಿಸ್ತಾನ ಸೇರದಿಂತೆ ಹಲವು ರಾಷ್ಟ್ರಗಳು ನ್ಯೂಕ್ಲಿಯರ್ ಬಾಂಬ್ ಅಭಿವೃದ್ಧಿ ಮಾಡಿದೆ. ಆದರೆ ಇರಾನ್ ಪರಮಾಣು ಬಾಂಬ್ ಅಭಿವೃದ್ಧಿ ಮಾಡುತ್ತಿದ್ದಂತೆ ಖಮೇನಿ ಮಹತ್ವದ ಘೋಷಣೆ ಮಾಡಿದ್ದರು. ಇದು ಡೆತ್ ಟು ಇಸ್ರೇಲ್, ಡೆತ್ ಟು ಅಮೆರಿಕಾ ಎಂದಿದ್ದರು. ಈ ಘೋಷಣೆ ಹೊರಬೀಳುತ್ತಿದ್ದಂತೆ ಇಸ್ರೇಲ್‌ನ ಮೋಸಾದ್ ಖಮೇನಿ ಹತ್ಯೆಗೆ ತಯಾರಿ ಆರಂಭಿಸಿತ್ತು.

ಡೆತ್ ಟು ಇಸ್ರೇಲ್‌ನಿಂದ ಖಮೇನಿ ಡೆತ್

Source link