Headlines

Ravindra Jadeja: ಸ್ವಲ್ಪ ಬೇಸರವಾಗಿತ್ತು… ಏನು ಮಾಡೋದು, ಇದೆಲ್ಲಾ ಸಹಜ..!

Ravindra Jadeja: ಸ್ವಲ್ಪ ಬೇಸರವಾಗಿತ್ತು… ಏನು ಮಾಡೋದು, ಇದೆಲ್ಲಾ ಸಹಜ..!


ರವೀಂದ್ರ ಜಡೇಜಾ: ಸ್ವಲ್ಪ ಬೇಸರವಾಗಿತ್ತು... ಏನು ಮಾಡೋದು, ಇದೆಲ್ಲಾ ಸಹಜ..!

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಆಲ್-ರೌಂಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ, 2026ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದಿದ್ದಾರೆ. ಒಂದೂವರೆ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾದ ಜಡೇಜಾ, ಈಗ ತಮ್ಮ ವೃತ್ತಿಜೀವನ ಆರಂಭಿಸಿದ ತಂಡಕ್ಕೆ ಮರಳಿರುವುದು ವಿಶೇಷ.

ಸಿಎಸ್‌ಕೆ ಜೊತೆಗಿನ ಸುದೀರ್ಘ ಸಂಬಂಧ:

ಜಡೇಜಾ ಅವರು ಸಿಎಸ್‌ಕೆ ತಂಡದೊಂದಿಗೆ 13-14 ಸೀಸನ್‌ಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು ತಂಡದ ಪ್ರಮುಖ ಮ್ಯಾಚ್ ವಿನ್ನರ್ ಆಗಿದ್ದರು. ಎಂ.ಎಸ್. ಧೋನಿ ಅವರ ನೆರಳಿನಲ್ಲಿ ಬೆಳೆದ ಅವರು, ತಂಡಕ್ಕೆ ಹಲವು ಬಾರಿ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಷ್ಟು ಸುದೀರ್ಘ ಕಾಲದ ಬಾಂಧವ್ಯವನ್ನು ಕಡಿದುಕೊಳ್ಳುವುದು ಸುಲಭವಾಗಿರಲಿಲ್ಲ ಎಂದು ಜಡೇಜಾ ಅವರೇ ಒಪ್ಪಿಕೊಂಡಿದ್ದಾರೆ.

ಜಡೇಜಾ ಭಾವುಕ ಮಾತುಗಳು:

ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಮೂಲಕವೇ ರಾಜಸ್ಥಾನ್ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದ ರವೀಂದ್ರ ಜಡೇಜಾ ಪಂದ್ಯದ ಬಳಿಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಈ ಬದಲಾವಣೆಯ ಕುರಿತು ಮಾತನಾಡಿದ ಜಡೇಜಾ, “13-14 ಸೀಸನ್‌ಗಳ ಕಾಲ ಎಸ್‌ಎಸ್‌ಕೆ ಪರ ಆಡಿದ ನಂತರ ತಂಡವನ್ನು ಬಿಡುವುದು ಸ್ವಲ್ಪ ಕಷ್ಟ ಮತ್ತು ಬೇಸರವಾಗಿತ್ತು. ಆದರೆ ಏನು ಮಾಡೋದು, ಜೀವನದಲ್ಲಿ ಬದಲಾವಣೆಗಳು ಸಹಜ.

ವಿಶೇಷವೆಂದರೆ, ನಾನು ಯಾವ ತಂಡದೊಂದಿಗೆ ನನ್ನ ಮೊದಲ ಐಪಿಎಲ್ ಟ್ರೋಫಿಡ್ ಗೆದ್ದೆನೋ (2008ರಲ್ಲಿ), ಈಗ ಮತ್ತೆ ಅದೇ ತಂಡಕ್ಕೆ ಮರಳಿದೆ ನನಗೆ ಹೆಮ್ಮೆ ಮತ್ತು ಸಂತಸ ತಂದಿದೆ,” ಎಂದು ರವೀಂದ್ರ ಜಡೇಜಾ ಭಾವುಕರಾಗಿ ಹೇಳಿದ್ದಾರೆ.

ಹಳೆಯ ನೆನಪುಗಳ ಮೆಲುಕು:

2008 ರ ಉದ್ಘಾಟನಾ ಶೇರಾ ಐಪಿಎಲ್ ಆವೃತ್ತಿಯಲ್ಲಿ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಚಾಂಪಿಯನ್ ಆಗುತ್ತಿದೆ. ಅಂದು ಯುವ ಆಟಗಾರನಾಗಿದ್ದ ಜಡೇಜಾ ಅವರನ್ನು ವಾರ್ನ್ ‘ರಾಕ್‌ಸ್ಟಾರ್’ ಎಂದು ಕರೆಯುತ್ತಿದ್ದರು. ಈಗ 18 ವರ್ಷಗಳ ನಂತರ ಅದೇ ತಂಡಕ್ಕೆ ಮರಳಿರುವುದು ವಿಶೇಷ.

ಇದನ್ನೂ ಓದಿ: ವಿಡಿಯೋ: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ

ಇತ್ತ ರವೀಂದ್ರ ಜಡೇಜಾ ಅವರ ನಿರ್ಗಮನವು ಸಿಎಸ್‌ಕೆ ಅಭಿಮಾನಿಗಳಿಗೆ ಬೇಸರ ತಂದರೂ, ಅತ್ತ ರಾಜಸ್ಥಾನ ರಾಯಲ್ಸ್ ಅಭಿಮಾನಿಗಳು ತಮ್ಮ ‘ರಾಕ್‌ಸ್ಟಾರ್’ ಪುನರಾಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಅನುಭವ ಮತ್ತು ಕೌಶಲ್ಯದೊಂದಿಗೆ ಮರಳಿರುವ ಜಡೇಜಾ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮತ್ತೊಮ್ಮೆ ಟ್ರೋಫಿ ಗೆದ್ದು ಕೊಡಲಿದ್ದಾರಾ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.

 

 



Source link

Leave a Reply

Your email address will not be published. Required fields are marked *