
ಭಾರತ ಮೂಲದ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (ಪ್ರಿಯಾಂಕಾ ಚೋಪ್ರಾ) ಇತ್ತೀಚೆಗೆ ಅಮೃತಸರ ಗೋಲ್ಡನ್ ಟೆಂಪಲ್‌ನಲ್ಲಿ ಭಕ್ತರು ತಿಂದುಂಡ ತಟ್ಟೆ, ಲೋಟ ತೊಳೆದಿದ್ದು ದೊಡ್ಡ ಸುದ್ದಿಯಾಯ್ತು. ಇದೀಗ ಆ ಸುದ್ದಿಯನ್ನು ಕನ್ನಡದ ಜನಪ್ರಿಯ ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರಶ್ನೆ ಎತ್ತಿದ್ದಾರೆ. ತಟ್ಟೆ ಲೋಟ ತೊಳೆದ ಪ್ರಿಯಾಂಕಾ ಚೋಪ್ರಾಗೆ ಭೇಷ್ ಎಂದ ರಾಯರ ಮಠದಲ್ಲಿ ಜನ ಕಸ ಗುಡಿಸಿದ ಅವರು ಅಣಕಿಸಿದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎರಡು ಅಪಘಾತದ ವಿಷಯವನ್ನು ಸಹ ಹಂಚಿಕೊಂಡಿದ್ದಾರೆ.
ರಾಯರ ಭಕ್ತರಾಗಿರುವ ಜಗ್ಗೇಶ್ ಅವರು ರಾಯರ ಮಠದಲ್ಲಿ ಕಸ ಗುಡಿಸುತ್ತಿರುವ ವಿಡಿಯೋಕ್ಕೆ ಸಾಕಷ್ಟು ಟೀಕೆ ಹಿಂದೆ ಇತ್ತು, ಆದರೆ ಈಗ ಪ್ರಿಯಾಂಕಾ ಚೋಪ್ರಾ ತಟ್ಟೆ ತೊಳೆದಿದ್ದನ್ನು ಹೊಗಳುತ್ತಿದ್ದಾರೆ ಎಂದು ಜಗ್ಗೇಶ್ ಅವರು, ತಮಗೆ ಆದ ಎರಡು ಅಪಘಾತಗಳ ಮಾಹಿತಿಯನ್ನು ಹಂಚಿಕೊಂಡಿರುವ ಜೊತೆಗೆ ತಾವೇ ರಾಯರ ಮಠದಲ್ಲಿ ಕಸ ಗುಡಿಸಿದೆ ಎಂದು ಸಹ ಹೇಳಿದ್ದಾರೆ.
ಜ್ಯೋತಿಷ್ಯದಲ್ಲಿ ನಂಬಿಕೆ ಇರಿಸುವ ಜಗ್ಗೇಶ್ ಅವರು ಗ್ರಹಗಳಿಗೆ ತಮಗೆ ಅಪಘಾತ ಸಂಭವಿಸಿದೆ ಎಂದು ಅರಿತು ದೋಷ ನಿವೃತ್ತಿಗೆ ಆಲಯ ಗುಡಿಸುವ ಸೇವೆ ಮಾಡಬೇಕೆಂದು, ಇದೇ ಶ್ರೇಷ್ಠ ಪರಿಹಾರ ಎಂದು ರಾಯರ ಮಠದಲ್ಲಿ ಕಸಗುಡಿಸುವ ಸೇವೆ ಮಾಡಿದಂತೆ. ಇದರಿಂದ ದೋಷಕ್ಕೆ ಪರಿಹಾರವಾಯ್ತು, ಅಪಘಾತ ಆದರೂ ತಮಗೆ ಏನೂ ಆಗಲಿಲ್ಲ ಎಂದು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಭಕ್ತರು ತಿಂದುಂಡ ತಟ್ಟೆ-ಲೋಟ ತೊಳೆದ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
ತಮ್ಮ ಕಾರಿಗೆ ಮುಂದೆ ಮತ್ತು ಹಿಂದೆಯಿಂದಲೂ ಕೆಲವು ಕಾರುಗಳು ಹತ್ತಿಕ್ಕಿ ಆದವೆಂದು ಆದರೆ ತಮಗಾಗಲಿ, ಕಾರಿನಲ್ಲಿದ್ದ ತಮ್ಮ ಸಿಬ್ಬಂದಿಗಾಗಲಿ ದೆಹಲಿಯಲ್ಲಿ ಯಾವುದೇ ಅಪಾಯ ಆಗಲಿಲ್ಲ ಜಗ್ಗೇಶ್. ಚಾಲಕನ ಅಚಾತುರ್ಯದಿಂದ ತಮ್ಮ ಕಾರು ಮರಕ್ಕೆ ಢಿಕ್ಕಿಯಾಗಿ ಅಪಘಾತವಾಯಿತು, ಹಾಗೂ ಕಾರಿನ ರಿಪೇರಿಗೆ ಲಕ್ಷ ರೂಪಾಯಿಗಳು ಖರ್ಚಾದವು ಎಂದು ಆದರೆ ತಮಗೆ ಏನೂ ಆಗಲಿಲ್ಲ ಎಂದು ಜಗ್ಗೇಶ್ ಅವರು ಹಂಚಿಕೊಂಡಿದ್ದಾರೆ.
ಯಾರೇ ಆಗಲಿ ದೇವರ ನಂಬಿಕೆ ಇದ್ದವರ ಸೇವೆಯ ಕಾರಣ ಅರಿಯಬೇಕೆ ಹೊರತು, ಅವರ ಕಾರ್ಯ(ವಿಶೇಷವಾಗಿ ಸೆಲಿಬ್ರಿಟಿಗಳ ವೈಯಕ್ತಿಕ ವಿಷಯ) ಕದ್ದು ಚಿತ್ರೀಕರಿಸಿ ಜಾಲತಾಣಕ್ಕೆ ಹಾಕುವ ಕೆಟ್ಟ ಸಂದೇಶ ನೋಡಿ ವಿಕೃತ ಆನಂದ ಚರ್ಚೆ ಮಾಡಬಾರದು. ಅಣಕ, ಅಪಹಾಸ್ಯ, ದೇವರ ಸೇವೆ ಮಾಡುವ ಮನುಷ್ಯನಿಗೆ ಅವನ ದೋಷ ಅಣಕ ಮಾಡಿದವನಿಗೆ ಸುತ್ತಿಕೊಂಡು ಅವನ ಯಶಸ್ಸು ಕುಂತಿದೆ ಎಂದು ಜಗ್ಗೇಶ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ