ನಟ ಜಗ್ಗೇಶ್ (ಜಗ್ಗೇಶ್) ಅವರ ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಅದೇ ರೀತಿ ಕೆಟ್ಟದ್ದನ್ನು ಬಯಸುವವರನ್ನು ಅವರು ದೂರ ಇಡಲು ಪ್ರಯತ್ನಿಸುತ್ತಾರೆ. ಈಗ ಅಶ್ಲೀಲ ಕಮೆಂಟ್ ಹಾಕುವ ವ್ಯಕ್ತಿಗಳಿಗೆ ಜಗ್ಗೇಶ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅವರು ಈಗ ಫೇಸ್ ಬುಕ್ ಅಲ್ಲಿ ಉದ್ದನೆಯ ಪೋಸ್ಟ್ ಹಂಚಿಕೊಂಡಿದ್ದಾರೆ, ಕೆಟ್ಟ ಕಮೆಂಟ್ ಹಾಕುವವರನ್ನು ಹಲವು ಹಂತಗಳಲ್ಲಿ ತಿದ್ದುವ ಕೆಲಸ ಮಾಡಿದ್ದಾರೆ. ಅವರು ಬರೆದ ಪೋಸ್ಟ್ನ ಯಥಾವತ್ತು ವಿವರ ಕೆಳಗಿದೆ.
‘ನನ್ನ ಬದುಕಿನ ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತವರು ಜಯಮಾಲ. ಅದು 1994 (ಅಂದು ಹುಟ್ಟಿದ ಮತ್ತು ಹುಟ್ಟಿದವರು ಜಗ ಅರಿಯದ ಮಕ್ಕಳು ಇಂದು ನನ್ನ ಜೀವನ ಬಲ್ಲವರಂತೆ ಕಾಮೆಂಟ್ಸ್ ಹಾಕಿದ್ದಾರೆ). ಮಕ್ಕಳೆ ನಾನು ದೇಹ ಚನ್ನಾಗಿ ಇಟ್ಟು ತಲೆಗೆ ಡೈ ಹಾಕಿಕೊಂಡ ಮಾತ್ರಕ್ಕೆ ನಿಮ್ಮ ವಯಸ್ಸಿನವನು ಎಂಬಂತೆ ತಿಳಿಯದಿರಿ’ ಎಂದು ಬರೆದುಕೊಂಡಿದ್ದಾರೆ.
‘ನನ್ನ ಮಾಹಿತಿಗಾಗಿ ನಿಮ್ಮ ಅಜ್ಜ, ಅಜ್ಜಿ, ತಂದೆ-ತಾಯಿ ಕೇಳಿ. ಒಬ್ಬ ಹಳ್ಳಿ ಹುಡುಗ ಹೇಗೆ ನವರಸನಾಯಕ ಆದ ಎಂದು ಕಥೆ ಹೇಳುತ್ತದೆ. ಸಂಸಾರ, ಮಕ್ಕಳು, ಜಗತ್ತು ಭಾರದ ನೇಗಿಲು ಮೈಮೇಲೆ ಬಿದ್ದಾಗ ನಿಮ್ಮ ಕಾಮೆಂಟ್ಸ್ ಹಾಕುವ ಕೈ ಸವೆದು, ಜೀವನ ನರಕ ಇದ್ದಾರೆ. ಆಗ ಪಶ್ಚಾಪ ಕಾಡುತ್ತೆ ಸಮಯ ವ್ಯರ್ಥಕ್ಕೆ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
‘ನಾನು ಮಾತಾಡಿದ್ದು ಜಯಮಾಲ ಅವರ ಜೊತೆ ಸಿನಿಮಾಗಾಗಿ ದುಡಿದ ಸಹಸ್ರಾರು ಕಾರ್ಮಿಕರು ಮತ್ತು ಸಿನಿಮಾಗಾಗಿ ಜೀವನ ಸವೆಸಿದ ಜೀವಗಳ ಮುಂದೆ. ಜೊತೆಗೆ ನನ್ನ 45ವರ್ಷ ಚಿತ್ರರಂಗದಲ್ಲಿ ವೈಯಕ್ತಿಕವಾಗಿ ಕಂಡ ಮಹನೀಯರ ಮುಂದೆ ಮತ್ತು ಹೆಮ್ಮೆಯಿಂದ ರಾಜಣ್ಣ ನನ್ನ ಜೊತೆ 17 ವರ್ಷ ಇದ್ದ ಕಥೆ. ಇಂದಿನ ಮಕ್ಕಳಿಗೆ ಏನು ಗೊತ್ತು? ಅಂದಿನ ಅದ್ಭುತ ಸಂಬಂಧಗಳ ಬಗ್ಗೆ.
‘ಯಾರು ಏನು ಅಂದರು ನನ್ನ ಸಾಧನೆ ನನ್ನ ಶ್ರಮ ನನ್ನದೇ ಅದನ್ನು ಮುಟ್ಟಲು ಬಿಡಿ, ನೋಡಲು ಆಗದು. ಎರಡನೆಯದು ಶಿವಣ್ಣ ಬಂದಾಗ ನನ್ನ ಊಟ ಮುಗಿದು ಕೈ ತೊಳೆದು ಅವರ ಕಂಡಾಗ ಅಣ್ಣನಂತೆ ಗೌರವಿಸುವ ನಾನು ಎದ್ದು ನಿಂತು ಗೌರವ ನೀಡಿದೆ. ಬದಲಾಗಿ ಊಟ ಬಿಟ್ಟು ನಿಲ್ಲಲಿಲ್ಲ! ಅವರು ನನ್ನ “ದೇವರ ಮಗ” ಜೊತೆಗೆ ನನ್ನ ಕಷ್ಟಕಾಲದಲ್ಲಿ ಅವರ ಜೊತೆ ನಟಿಸಲು ರಣರಂಗ ಚಿತ್ರದಲ್ಲಿ ನಟನಿಗೆ ಬದಲಾಗಿ ನನಗೆ ಬೇಕು ಅವಕಾಶ ಕೊಡಿಸಿದ ಬಂಧು’ ಎಂದು ಶಿವಣ್ಣ ಹೊಗಳಿದ್ದಾರೆ.
‘ನಮಗೆ ಆದವರನ್ನು ದೇವರಂತೆ ಕಾಣಬೇಕು ಎಂಬ ನೀತಿಪಾಠವನ್ನು ನಮ್ಮ ತಂದೆತಾಯಿ ಕಲಿಸಿದ್ದಾರೆ ವಿನಃ, ಕಂಡಕಂಡವರಿಗೆ ಮೊಬೈಲ್ ಹಿಡಿದು ಕೆಟ್ಟ ಕಾಮೆಂಟ್ಸ್ ಹಾಕಿ ವಿಕೃತ ಆನಂದ ಪಡಿ ಎಂದು ಹೇಳಿಕೊಟ್ಟಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ಒಬ್ಬರ ಬಗ್ಗೆ ಮಾತಾಡಬೇಕಾದರೆ ಅವರು ತಿಳಿದವರೋ, ಹಿತರೋ,ಬಂಧುಗಳೋ ಆಗಿರಬೇಕು ಆಗ ನಿಮ್ಮ ಅಣಕದ ಮಾತಿಗೆ ಅರ್ಥವಾಗುತ್ತದೆ’ ನಾವು ಜಗ್ಗೇಶ್.
ನಾನು ಕಲಾವಿದ ನನ್ನ ಸಿನಿಮಾ ಜೀವನ ಬಿಟ್ಟರೆ ಇನ್ಯಾವ ವೈಯಕ್ತಿಕ ವಿಷಯ ಯಾರಿಗೆ ಗೊತ್ತಿಲ್ಲ. ನಾನು ಏಕಾಂಗಿ,ಕಾಯಕಪ್ರಿಯ, ದೇವರ ಕಾರ್ಯದಲ್ಲಿ ಮಗ್ನ, ಅನವಶ್ಯಕ ಯಾವ ವಿಷಯಕ್ಕೂ ಬರದ ನನ್ನ ಗುಣದ ಬಗ್ಗೆ ನನ್ನ ಮನೆಯವರಿಗೆ ಸರಿಯಾದ ಅರಿವಿಲ್ಲ ಅಂತಹದರಲ್ಲಿ ಸಂಬಂಧವಿಲ್ಲದವರು, ಬಾಳಿ ಬದುಕ ಬೇಕಾದವರು, ನನ್ನ ಮಕ್ಕಳಿಗಿಂತ ಕಿರಿಯರು ಜಾಲತಾಣದಲ್ಲಿ ಕೆಟ್ಟ ಮಾತು ಪ್ರಯೋಗ ಮಾಡೋದು ಯಾವ ಪುರುಷಾರ್ಥಕ್ಕೆ ಅರಿವಾಗಲಿಲ್ಲ’ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದರು.
‘ಹಿರಿಯರ ಮಾತು ಸತ್ಯವಾಗುತ್ತೆ. ತನ್ನ ಕೇಡು ತನ್ನ ತಿಂದು ಅರಗು ಬಂಗಾರತಿನ್ನುತ್ತೆ. ಅರ್ಥಾತ್ ನೀವು ಇನ್ನೊಬರಿಗೆ ಅಣಕ ಕೇಡು ಕೆಟ್ಟ ಮಾತುಗಳನ್ನು ಬಳಸಿದರೆ ಬರೆದಿಟ್ಟುಕೊಳ್ಳಿ ನಿಮ್ಮ ಅದೃಷ್ಟ ಕರಗಿ ಕಷ್ಟದ ಸರಮಾಲೆ ಆವರಿಸಿ ನಿಮ್ಮ ಬೆಳವಣಿಗೆ ಸುಟ್ಟುಹಾಕುತ್ತೆ. ಯಾರನ್ನು ನೋಯಿಸದಿರಿ ಕಾಲಭೈರವ ನಿಮ್ಮನ್ನು ಗಮನಿಸುತ್ತಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಸಂಘಕ್ಕೆ ಭೇಟಿ ಕೊಡಿ’; ಪ್ರಕಾಶ್ ರಾಜ್ ಗೆ ಜಗ್ಗೇಶ್ ಆಹ್ವಾನ
‘ನಿಮ್ಮ ಕೆಟ್ಟತನ ನಿಮ್ಮ ಅವನತಿಗೆ ಕಾರಣ. ಬದಲಾಗಿ ಬಂಗಾರದಂತ ಗುಣ ನಡತೆ ಜೀವನ ಕಟ್ಟಿಕೊಳ್ಳಿ ಇಲ್ಲದಿದ್ದರೆ ನಿಮ್ಮವರೆ ನಿಮ್ಮನ್ನ ದೂರ ತಳ್ಳುತ್ತಾರೆ. ಒಬ್ಬ ಹಿರಿಯನಾಗಿ ಬಾಳುವವರಿಗೆ ಒಂದು ಸಂದೇಶ ಎಂದು ಭಾವಿಸಿ. ನನ್ನ ಚಿಂತೆ ಬಿಡಿ ಯಾರ ಸಹಾಯವಿಲ್ಲದೆ ನನ್ನ ಗುಣ ನಡತೆ ಕಂಡು ಚಿತ್ರರಂಗದಲ್ಲಿ ನನ್ನ 45 ವರ್ಷ ಬೆಳಸಿದರು, ಮತ್ತು ರಾಜಕೀಯದಲ್ಲೂ ಹಳ್ಳಿಯಿಂದ ದಿಲ್ಲಿಯವರೆಗೆ ಆಶೀರ್ವಾದ ಮಾಡಿದ್ದಾರೆ. ನಮ್ಮ ತಂದೆತಾಯಿ ವಂಶಕ್ಕೆ ಒಳ್ಳೆ ಮಗನಾಗಿ ಗಂಡನಾಗಿ ತಂದೆಯಾಗಿ ತಾತನಾಗಿ ಸಾರ್ಥಕ ಜೀವನ ಸವೆಸಿರುವೆ. ಈ ಆದರ್ಶ ಛಲ ಚಿಂತನೆ ನಿಮಗೂ ಫಲಿಸಲಿ ದೇವರಲ್ಲಿ ಪ್ರಾರ್ಥಿಸುವೆ’ ಎಂದು ಜಗ್ಗೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.