Headlines

ಜೈಲಿನ ವಿಡಿಯೋ ಲೀಕ್ ಪ್ರಕರಣ: ವಿಜಯಲಕ್ಷ್ಮೀ ಹೆಸರು ಹೇಳಿದ ಧನ್ವೀರ್

ಜೈಲಿನ ವಿಡಿಯೋ ಲೀಕ್ ಪ್ರಕರಣ: ವಿಜಯಲಕ್ಷ್ಮೀ ಹೆಸರು ಹೇಳಿದ ಧನ್ವೀರ್


ಜೈಲಿನಲ್ಲಿ ಮದ್ಯದ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಕೈದಿಗಳಿಗೆ ಜೈಲಿನ ರಾಜಾತಿಥ್ಯ ಮುಂದುವರಿದಿದೆ ಎಂಬುದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಇತ್ತು. ಈ ವಿಡಿಯೋನ ಲೀಕ್ ಮಾಡಿದ ಆರೋಪವನ್ನು ನಟ ಹಾಗೂ ದರ್ಶನ್ ಆಪ್ತ ಧನ್ವೀರ್ ಮೇಲೆ ಹೊರಿಸಲಾಗಿದೆ. ಈ ಪ್ರಕರಣದ ವಿಚಾರಣೆ ವೇಳೆ ಧನ್ವೀರ್ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮೀ ಹೆಸರನ್ನು ಹೇಳಿದ್ದಾರೆ. ಈಗ ಈ ಪ್ರಕರಣದಲ್ಲಿ ವಿಜಯಲಕ್ಷ್ಮೀ ಅವರು ತನಿಖೆ ಎದುರಿಸುವ ಸಾಧ್ಯತೆಯಿದೆ.

ಈ ಮೊದಲು ಧನ್ವೀರ್ ಅವರು ವಿಚಾರಣೆ ಎದುರಿಸಿದ್ದರು. ಈ ವೇಳೆ ಅವರು ಯಾವುದೇ ವಿಷಯ ಬಾಯ್ಬಿಟ್ಟಿರಲಿಲ್ಲ. ಇದಾದ ಬಳಿಕ ಮತ್ತೆ ಅವರಿಗೆ ನೋಟಿಸ್ ನೀಡಲಾಯಿತು. ಎರಡನೇ ಬಾರಿಗೆ ಧನ್ವೀರ್ ಅವರು ಪೊಲೀಸರ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ ಹಲವು ವಿಷಯಗಳನ್ನು ರಿವೀಲ್ ಮಾಡಲಾಗಿದೆ. ವಿಡಿಯೋ ಕಳುಹಿಸಿದ್ದು ಯಾರು ಕೂಡ ಅವರು ಎಂದು.

ಧನ್ವೀರ್‌ಗೆ ಈ ವಿಡಿಯೋ ಸಿಕ್ಕಿದ್ದು ವಕೀಲರಿಂದ. ನಂತರ ಈ ವಿಡಿಯೋನ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕಳುಹಿಸಿದ್ದಾರೆ. ಇದನ್ನು ವಿಚಾರಣೆ ವೇಳೆ ಹೇಳಿದ್ದಾರೆ. ‘ನಾನು ವೀಡಿಯೋ ವೈರಲ್ ಮಾಡಿಲ್ಲ. ಈ ವಿಡಿಯೋ ಹೇಗೆ ವೈರಲ್ ಆಗಿದೆ ಅನ್ನೋದು ಗೊತ್ತಿಲ್ಲ. ನಾನು ವಿಜಯಲಕ್ಷ್ಮೀ ಅವರಿಗೆ ವಿಡಿಯೋನ ಫಾರ್ವರ್ಡ್ ಮಾಡಿದ್ದೆ’ ಎಂದು ಧನ್ವೀರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ಆಪ್ತ ಧನ್ವೀರ್ ಮೇಲೆ ಅನುಮಾನ; ಕರೆದು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು

ವಿಜಯಲಕ್ಷ್ಮೀ ಹೆಸರು ಹೇಳಿರುವುದಾಗಿ ತನಿಖಾಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಜಯಲಕ್ಷೀ ಅವರ ವಿಚಾರಣೆಗೆ ಕರೆಸೋ ಬಗ್ಗೆ ಚರ್ಚೆ ನಡೆದಿದೆ. ಒಂದೊಮ್ಮೆ ಧನ್ವೀರ್ ಅವರ ವಿಚಾರಣೆಗೆ ಸರಿಯಾಗಿ ಸ್ಪಂದಿಸದೇ ಇದ್ದರೆ ವಿಜಯಲಕ್ಷ್ಮೀ ಅವರ ವಿಚಾರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದರಿಂದ ಅವರಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಇದೆ.

ಮೆಟಾಗೆ ಪತ್ರ

ವೀಡಿಯೋ ಅಪ್ಲೋಡ್ ಮಾಡಿದ್ದು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ METAG ಈಗಾಗಲೆ ಪರಪ್ಪನ ಅಗ್ರಹಾರ ಅರ್ಜಿಯ ಇಮೇಲ್ ಮೂಲಕ ಮಾಹಿತಿ ಕೇಳಲಾಗಿದೆ. ವೇಳೆ ಕೈದಿಗಳು ಹೇಳಿದ್ದೇ ಬೇರೆ. ‘2023ರಲ್ಲಿ ಮಾಡಿದ ವಿಡಿಯೋ ಇದು. ಈ ವಿಡಿಯೋ ಮಾಡಿದ ಮೊಬೈಲ್ ಸೀಜ್ ಆಗಿದೆ’ ಎಂದು ವಿಚಾರಣೆ ವೇಳೆ ಕೈದಿ ಹೇಳಿಕೆ ಲಭ್ಯವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *