ಜನ್ಮಸಂಖ್ಯೆಗೆ ೭, ೮, ೯ರ ದಿನಭವಿಷ್ಯವನ್ನು ನೀಡಲಾಗುತ್ತದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 13ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸಂಶೋಧನೆ ಮತ್ತು ಆಳವಾದ ಚಿಂತನೆಗೆಸೂಕ್ತ ದಿನ. ನೀವು ಇತರರಿಗೆ ಈ ಹಿಂದೆ ಮಾಡಿದ ಸಹಾಯದಿಂದ ನಿಮಗೆ ಪ್ರತಿಫಲ ದೊರೆಯಲಿದೆ. ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ವರ್ಗಾವಣೆ ಅಥವಾ ಬಡ್ತಿಯ ಸೂಚನೆಗಳು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವವರಿಗೆ ದೂರ ಪ್ರಯಾಣದ ಯೋಗ ಇದೆ. ಧ್ಯಾನ ಮತ್ತು ಯೋಗಕ್ಕಾಗಿ ಸಮಯ ಮೀಸಲಿಡುವಿರಿ. ಸಾಲದ ಬಾಕಿ ವಸೂಲಿ ಮಾಡುವಲ್ಲಿ ನೀವು ಯಶಸ್ವಿಯಾಗಿದ್ದೀರಿ. ನಿಮ್ಮ ಗುಪ್ತ ಪ್ರತಿಭೆಯು ಇಂದು ಹೊರಜಗತ್ತಿಗೆ ತಿಳಿಯುವ ಸಾಧ್ಯತೆಯಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಕಾಲವಿದು. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ ಸಿಗಲಿದೆ. ಕೃಷಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ದೊಡ್ಡ ಒಪ್ಪಂದಗಳು ಕೈಗೂಡಲಿವೆ. ಮನೆಯಲ್ಲಿ ಶುಭ ಸಮಾರಂಭಗಳ ಬಗ್ಗೆ ಚರ್ಚೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ವಿಶೇಷವಾಗಿ ಮೂಳೆ ಸಂಬಂಧಿತ ಸಮಸ್ಯೆಗಳಿರುವವರು ಎಚ್ಚರದಿಂದಿರಿ. ಶತ್ರುಗಳು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರೂ, ನಿಮ್ಮ ದೃಢ ನಿರ್ಧಾರಗಳು ಅವರನ್ನು ವಿಫಲಗೊಳಿಸಲಿವೆ.
ಇದನ್ನೂ ಓದಿ: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಬಾಕಿ ಉಳಿದಿದ್ದ ಆಡಳಿತಾತ್ಮಕ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ದಾನ-ಧರ್ಮದ ಕಡೆಗೆ ನಿಮ್ಮ ಗಮನ ಹರಿಯಲಿದೆ, ಇದರಿಂದ ಮನಸ್ಸಿಗೆ ಅಪಾರ ತೃಪ್ತಿ ಸಿಗಲಿದೆ. ವೈದ್ಯರಿಗೆ ಮತ್ತು ಸಾಹಸ ಪ್ರವೃತ್ತಿಯ ಜನರಿಗೆ ಅತ್ಯುತ್ತಮ ದಿನವಾಗಿದೆ. ಉದ್ಯೋಗದಲ್ಲಿ ನಿಮ್ಮ ಮೇಲಧಿಕಾರಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ. ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ಜೀವನದ ಹೆಜ್ಜೆ ಇಡಲು ಪೂರಕವಾದ ವಾತಾವರಣ ಇರಲಿದೆ.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ