‘ಜನ ನಾಯಗನ್’ ಎದುರು ‘ಪರಾಶಕ್ತಿ’ ಬಿಡುಗಡೆ ರಾಜಕೀಯ ಪ್ರೇರಿತವೇ? ಸಿಕ್ತು ಸ್ಪಷ್ಟನೆ

‘ಜನ ನಾಯಗನ್’ ಎದುರು ‘ಪರಾಶಕ್ತಿ’ ಬಿಡುಗಡೆ ರಾಜಕೀಯ ಪ್ರೇರಿತವೇ? ಸಿಕ್ತು ಸ್ಪಷ್ಟನೆ


ದಳಪತಿ ವಿಜಯ್ (ತಲಪತಿ ವಿಜಯ್) ಈಗ ಕೇವಲ ಸ್ಟಾರ್ ನಟ, ತಮಿಳುನಾಡು ರಾಜಕೀಯಕ್ಕೆ ಪದಾರ್ಪಣೆ ಮಾಡಿರುವ ರಾಜಕಾರಣಿ. ‘ಜನ ನಾಯಕನ್’ ವಿಜಯ್ ಕಡೆಯ ಸಿನಿಮಾ ಎನ್ನಲಾಗುತ್ತಿದೆ. ತಮಿಳುನಾಡಿನಲ್ಲಿ ಚುನಾವಣೆಗಳು ಪ್ರಾರಂಭವಾದಾಗಿನಿಂದ ಸಿನಿಮಾ ಮತ್ತು ರಾಜಕೀಯ ಪರಸ್ಪರ ಅವಲಂಬಿಸುವೆ. ಈಗ ‘ಜನ ನಾಯಕನ್’ ಸಿನಿಮಾ ಮೂಲಕ ವಿಜಯ್ ಸಹ ತಮ್ಮ ರಾಜಕೀಯ ಅಜೆಂಡಾ ಪ್ರಚಾರ ಮಾಡಲು ಮುಂದಾಗಿದ್ದಾರೆ. ‘ಜನ ನಾಯಕನ್’ ಬಿಡುಗಡೆ ಆಗುತ್ತಿರುವ ದಿನವೇ ತಮಿಳಿನ ‘ಪರಾಶಕ್ತಿ’ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ, ವಿಜಯ್ ಅವರ ರಾಜಕೀಯ ಎದುರಾಳಿಗಳು ವಿಜಯ್ ಅವರ ‘ಸಿನಿಮಾ ರಾಜಕೀಯಕ್ಕೆ’ ಸಿನಿಮಾದ ಮೂಲಕ ಅಡ್ಡಗಾಲು ಹಾಕಲು ಮುಂದಾಗಿದ್ದಾರೆ, ‘ಪರಾಶಕ್ತಿ’ ಸಿನಿಮಾವನ್ನು ಅದೇ ದಿನ ಮಾಡುತ್ತಿದ್ದಾರೆ. ಇದು ನಿಜವೇ? ಈ ಪ್ರಶ್ನೆಗೆ ‘ಪರಾಶಕ್ತಿ’ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ಉತ್ತರ ಹೇಳಿದ್ದಾರೆ.

‘ಪರಾಶಕ್ತಿ’ ಸಿನಿಮಾ ನಿರ್ಮಾಣ ಮಾಡಿರುವ ಆಕಾಶ್ ಭಾಸ್ಕರನ್, ಆಡಳಿತಾರೂಢ ಡಿಎಂಕೆ ನಾಯಕರಿಗೆ ಬಲು ಆಪ್ತರು ಮತ್ತು ಹತ್ತಿರದ ಸಂಬಂಧಿ ಸಹ. ದಳಪತಿ ವಿಜಯ್ ಅವರ ಪ್ರಮುಖ ರಾಜಕೀಯ ಎದುರಾಳಿ ಡಿಎಂಕೆ ಆಗಿದ್ದಾರೆ. ಇದೇ ಕಾರಣಕ್ಕೆ ತಮ್ಮ ಎದುರಾಳಿಯಾದ ವಿಜಯ್ ಅವರ ಸಿನಿಮಾಕ್ಕೆ ತಮ್ಮ ಸಿನಿಮಾವನ್ನು ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡುತ್ತಿದ್ದಾರೆ ಆಕಾಶ್ ಭಾಸ್ಕರನ್ ಎಂಬ ಚರ್ಚೆ ತಮಿಳುನಾಡಿನಲ್ಲಿ ಹರಿದಾಡುತ್ತಿದೆ. ಇದಕ್ಕೆ ‘ಪರಾಶಕ್ತಿ’ ಸಿನಿಮಾದ ನಾಯಕ ಶಿವಕಾರ್ತಿಕೇಯನ್ ಉತ್ತರ ಹೇಳಿದ್ದಾರೆ.

‘ನಾವು ಮೊದಲು 2025ರ ದೀಪಾವಳಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಮಾಡಲು ಯೋಜಿಸಿದೆವು, ಆದರೆ ‘ಜನ ನಾಯಕನ್’ ಸಿನಿಮಾ ದೀಪಾವಳಿಗೆ ಬಿಡುಗಡೆ ಆಗುತ್ತಿದೆ ಎಂಬ ವಿಷಯ ಗೊತ್ತಾಗಿದೆ, ನಾವು ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡೋಣ ಎಂದು ಸುಮ್ಮನಾದೆವು, ನಮ್ಮ ಸಿನಿಮಾಗಳನ್ನು ಸಹ ಅದಕ್ಕೆ ತಕ್ಕಂತೆ ಹೊಂದಿಸಿದ್ದೇವೆ. ಆದರೆ ಬಳಿಕ ‘ಜನ ನಾಗನ್’ ಸಿನಿಮಾ ಬಿಡುಗಡೆಯನ್ನು ಸಂಕ್ರಾಂತಿಗೆ ಮುಂದೂಡಿತು’.

ಇದನ್ನೂ ಓದಿ:ಎಲ್ಲರಿಗೂ ಸ್ವಂತ ಮನೆ, ಕಾರು, ಬೈಕು: ದಳಪತಿ ವಿಜಯ್ ಭರವಸೆ

‘ಜನ ನಾಯಕನ್’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ ಎಂದು ಗೊತ್ತಾದಾಗ ಮೊದಲು ನಾನು ನಿರ್ಮಾಪಕ ಆಕಾಶ್ ಅವರ ಬಳಿ, ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಆದರೆ ಅದು ಸಾಧ್ಯವಿರಲಿಲ್ಲ. ಸಿನಿಮಾ ಮೇಲೆ ಹೂಡಿಕೆ ಮಾಡಿರುವವರಿಗೆ ಬಿಡುಗಡೆ ಮಾಡಿರುವ ಬಗ್ಗೆ ಹೇಳಲಾಗಿದೆ. ಅದಕ್ಕೆ ತಕ್ಕಂತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಜೊತೆಗೆ ಈಗ ನಾವು ಬಿಡುಗಡೆ ಮಾಡಲಿಲ್ಲವೆಂದಾದರೆ ಮತ್ತೆ ವರೆಗೆ ಬಿಡುಗಡೆ ಮಾಡಲು ಆಗದಿದ್ದರೂ ಏಪ್ರಿಲ್ ಧೈರ್ಯ ಮಾಡಿ ಬಿಡುಗಡೆ ಮಾಡಲು ಮುಂದಾದವು’ ಶಿವಕಾರ್ತಿಕೇಯನ್.

‘ನಾನು ವಿಜಯ್ ಅವರ ಮ್ಯಾನೇಜರ್ ಜಗದೀಶ್ ಬಳಿಯೂ ಮಾತನಾಡಿದೆ. ಎರಡೂ ಸಿನಿಮಾಗಳು ಬರುತ್ತಿವೆ, ಈ ಬಗ್ಗೆ ವಿಜಯ್ ಅವರ ಬಳಿ ಮಾತನಾಡಿ ಎಂದು ಮನವಿ ಮಾಡಿದೆ. ಅದಕ್ಕೆ ವಿಜಯ್ ಅವರು ಸಂಕ್ರಾಂತಿ ಸಮಯ ಆದ್ದರಿಂದ ಎರಡೂ ಸಾಕಷ್ಟು ಥಿಯೇಟರ್ ಸಿನಿಮಾ ಸಿಗುತ್ತದೆ. ಯೋಚನೆ ಬೇಡ ಆರಾಮವಾಗಿ ಬಿಡುಗಡೆ ಮಾಡುವಂತೆ ವಿಜಯ್ ಅವರಿದ್ದಾಗಿ ಜಗದೀಶ್ ಹೇಳಿದರು. ಶಿವಕಾರ್ತಿಕೇಯನ್. ಜೊತೆಗೆ, ‘ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಕನ್’ ಎಂದು ಎಲ್ಲರೂ ಎಂಜಾಯ್ ಮಾಡೋಣ ಎಂದು ಸಹ ಶಿವಕಾರ್ತಿಕೇಯನ್ ಹೇಳಿದ್ದಾರೆ. ‘ಜನ ನಾಯಕನ್’ ಸಿನಿಮಾ ಜನವರಿ 9ಕ್ಕೆ ಬಿಡುಗಡೆ ಆದರೆ, ‘ಪರಾಶಕ್ತಿ’ ಸಿನಿಮಾ ಜನವರಿ 10ಕ್ಕೆ ತೆರೆಗೆ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *