‘ಜನ ನಾಯಗನ್’ ವಿಳಂಬಂದಿಂದ ‘ಟಾಕ್ಸಿಕ್’,‘ಕೆಡಿ’ಗೆ ದೊಡ್ಡ ಹೊಡೆತ?

‘ಜನ ನಾಯಗನ್’ ವಿಳಂಬಂದಿಂದ ‘ಟಾಕ್ಸಿಕ್’,‘ಕೆಡಿ’ಗೆ ದೊಡ್ಡ ಹೊಡೆತ?


‘ಜನ ನಾಯಕನ್’ ಚಿತ್ರಕ್ಕೆ (ಜನ ನಾಯಗನ್)ಕೋರ್ಟಿನಲ್ಲಿ ಸಾಕಷ್ಟು ಹಿನ್ನಡೆ ಆಗುತ್ತಲೇ ಇದೆ. ಜನವರಿ 9 ರಂದು ಚಿತ್ರ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರದ ವಿಷಯದಲ್ಲಿ ಆದ ತೊಂದರೆಯಿಂದ ಸಿನಿಮಾ ರಿಲೀಸ್ ವಿಳಂಬವಾಗುತ್ತಿದೆ. ಈ ಪ್ರಕರಣ ಇನ್ನೂ ಕೋರ್ಟ್ ನಲ್ಲೇ ಇದೆ. ‘ಜನ ನಾಯಕನ್’ ಚಿತ್ರದ ವಿಳಂಬವು ‘ಟಾಕ್ಸಿಕ್’ ಮತ್ತು ‘ಕೇಡಿ’ ಸಿನಿಮಾದ ಪ್ರಚಾರದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ‘ಕೇಡಿ’ ರಿಲೀಸ್‌ಗೂ ತೊಂದರೆ ತಂದೊಡ್ಡಬಹುದು ಎಂಬ ಆತಂಕ ಮೂಡಿದೆ.

ವಿಜಯ್ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಿ ‘ಜನ ನಾಯಕನ್’ ರಿಲೀಸ್ ಆಗುತ್ತಿದೆ. ಇದು ಬಾಲಯ್ಯ ಅವರ ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್. ಇದರಲ್ಲಿ ರಾಜಕೀಯ ವಿಷಯ ಕೂಡ ಇದೆ. ವಿಜಯ್ ಕೂಡ ರಾಜಕೀಯಕ್ಕೆ ಬರುತ್ತಿರುವುದರಿಂದ ರಾಜಕೀಯ ಶಕ್ತಿಗಳು ಸಿನಿಮಾ ರಿಲೀಸ್ ಆಗದಂತೆ ತಡೆಯುತ್ತಿವೆಯೇ ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ‘ಟಾಕ್ಸಿಕ್’ ಚಿತ್ರಕ್ಕೂ ತೊಂದರೆ ಎದುರಾಗುವ ಸೂಚನೆ ಸಿಕ್ಕಿದೆ.

‘ಜನ ನಾಯಕನ್’ ಸಿನಿಮಾ ನಿರ್ಮಾಣ ಮಾಡಿದ್ದು ಕನ್ನಡದ ಕೆವಿಎನ್ ಸಂಸ್ಥೆ. ಯಶ್ ನಟನೆಯ ‘ಟಾಕ್ಸಿಕ್’ ಹಾಗೂ ಧ್ರುವ ಸರ್ಜಾ ವರ ‘ಕೇಡಿ’ ಚಿತ್ರವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿದೆ. ಜನವರಿ 9ಕ್ಕೆ ‘ಜನ ನಾಯಕ್’, ‘ಮಾರ್ಚ್ 19’ಕ್ಕೆ ‘ಟಾಕ್ಸಿಕ್’ ಹಾಗೂ ಏಪ್ರಿಲ್ ಅಂತ್ಯಕ್ಕೆ ‘ಕೆಡಿ’ ರಿಲೀಸ್ ಮಾಡುವ ಪ್ಲ್ಯಾನ್ ಸಂಸ್ಥೆಯದ್ದಾಗಿತ್ತು.

ಇದನ್ನೂ ಓದಿ: ‘ಜನ ನಾಯಕ’ ಸಿನಿಮಾಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ: ನೂರಾರು ಕೋಟಿ ನಷ್ಟದ ಭೀತಿ

ಒಂದು ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಮತ್ತೊಂದು ಚಿತ್ರದ ಪ್ರಚಾರ ಕಾರ್ಯ ಆರಂಭಿಸುವ ಪ್ಲ್ಯಾನ್ ಅಲ್ಲಿ ಕೆವಿಎನ್ ಇತ್ತು. ಆದರೆ, ‘ಜನ ನಾಯಕನ್’ ಸಿನಿಮಾ ರಿಲೀಸ್ ಡೋಲಾಯಮಾನ ಸ್ಥಿತಿಯಲ್ಲಿದೆ. ಹೀಗಾಗಿ, ‘ಟಾಕ್ಸಿಕ್’ ಚಿತ್ರದ ಪ್ರಚಾರಕ್ಕೆ ಸಾಕಷ್ಟು ಉಂಟಾಗಬಹುದು ಎಂದು ಹೇಳಬಹುದು. ಆ ಬಳಿಕ ‘ಕೇಡಿ’ ಸಿನಿಮಾದ ಮೇಲೂ ಪರಿಣಾಮ ಬೀರಲಿದೆ. ‘ಜನ ನಾಯಕನ್’ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂಬುದು ಸದ್ಯದ ಪ್ರಶ್ನೆ. ಅದರ ಆಧಾರದ ಮೇಲೆ ಮುಂದಿನ ಪ್ಲ್ಯಾನ್ ನಿರ್ಧಾರಗಳು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *