
‘ಜನ ನಾಯಕನ್’ ಸಿನಿಮಾ (ಜನ ನಾಯಗನ್) ಬಗ್ಗೆ ಸೃಷ್ಟಿ ಆದ ವಿವಾದಗಳು ಒಂದೆರಡಲ್ಲ. ಪ್ರತಿ ಹಂತದಲ್ಲೂ ಚಿತ್ರಕ್ಕೆ ಹಿನ್ನಡೆಗಳು ಆಗುತ್ತಲೇ ಇದ್ದವು. ಈಗ ಸಿನಿಮಾಗೆ ದೊಡ್ಡ ಹೊಡೆತ ಸಿಕ್ಕಿದೆ. ಪ್ರಮುಖ ದೃಶ್ಯಗಳೇ ಲೀಕ್ ಆಗಿವೆ ಚಿತ್ರದ. ಈ ಮೂಲಕ ನೂರಾರು ಕೋಟಿ ರೂಪಾಯಿ ಸುರಿದು ಸಿನಿಮಾ ಮಾಡಿದ ನಿರ್ಮಾಪಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ವಿಷಯವನ್ನು ಅನೇಕ ಸ್ಟಾರ್‌ಗಳು ಖಂಡನೆ ಮಾಡಿದ್ದಾರೆ. ಆದರೆ, ವಿಜಯ್ ಮಾತ್ರ ಈ ವಿಷಯದಲ್ಲಿ ಮೌನ ತಾಳಿದ್ದಾರೆ.
‘ಜನ ನಾಯಕನ್’ ಸಿನಿಮಾ ಲೀಕ್ ಬಗ್ಗೆ ತೆಲುಗಿನ ನಟ ಚಿರಂಜೀವಿ, ನಟಿ ಖುಷ್ಬೂ ಸುಂದರ್ ಹೀಗೆ ಅನೇಕರು ನಟಿಸಿದ್ದಾರೆ. ಕೆವಿಎನ್ ಹೋರಾಟದಲ್ಲಿ ನಾವಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅನೇಕರು ಒತ್ತಾಯಿಸಿದ್ದಾರೆ. ಕೆವಿಎನ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದೆ. ಆದರೆ, ವಿಜಯ್ ಈ ವಿಷಯದಲ್ಲಿ ಮಾತನಾಡುತ್ತಿಲ್ಲ.
ದಳಪತಿ ವಿಜಯ್ ಅವರು ‘ಜನ ನಾಯಕನ್’ ಚಿತ್ರದ ನಾಯಕ. ಸಿನಿಮಾ ಲೀಕ್ ವಿಷಯ ಅವರಿಗೆ ದೊಡ್ಡ ಚಿಂತೆ ತಂದಿದೆ. ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕಿದೆ. ಇದರ ಜೊತೆಗೆ ಚುನಾವಣಾ ಪ್ರಚಾರ ಮಾಡುವ ಕೆಲಸವನ್ನು ಅವರು ಮುಂದುವರಿಸಬೇಕಾಗಿದೆ. ಅವರ ಕೊನೆಯ ಪಕ್ಷ ಒಂದು ಟ್ವೀಟ್ ಆದರೂ ಮಾಡಬಹುದಿತ್ತು ಎಂದು ಫ್ಯಾನ್ಸ್ ಬಯಸಿದ್ದರು. ಅವರು ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಬೇಕು ಎಂದಿದ್ದರು. ಆದರೆ, ಯಾವುದನ್ನೂ ಅವರು ಮಾಡಿಲ್ಲ.
ಇದನ್ನೂ ಓದಿ: ‘ಜನ ನಾಯಕನ್’ ಸಿನಿಮಾ ಲೀಕ್, ದಿಟ್ಟ ಹೆಜ್ಜೆಗೆ ಮುಂದಾದ ಕೆವಿಎನ್?
ವಿಜಯ್ ಅವರು ಏಪ್ರಿಲ್ 10 ರಂದು ಚೆನ್ನೈಗೆ ಬಂದಿದ್ದಾರೆ. ಶಿವಗಂಗಾ ಜಿಲ್ಲೆಯ ಕರೈಕುಡಿಯಲ್ಲಿ ಚುನಾವಣಾ ಪ್ರಚಾರ ಮಾಡಿ ಅವರು ಮರಳಿದ್ದಾರೆ. ಆಗ ಅವರಿಗೆ ‘ಜನ ನಾಯಕನ್ ಸಿನಿಮಾ ಸೊರಿಕೆ ಬಗ್ಗೆ ಮಾತನಾಡಿ’ ಎಂದು ಕೇಳಿದರು. ಆದರೆ, ಇದಕ್ಕೆ ವಿಜಯ್ ಉತ್ತರಿಸುವ ಮನಸ್ಸು ಮಾಡಿಲ್ಲ. ಬದಲಿಗೆ ಅವರು ನೇರವಾಗಿ ನಡೆದುಕೊಂಡರು. ಅವರು ಈ ಬಗ್ಗೆ ಉತ್ತರಿಸಬೇಕಿತ್ತು ಎಂದು ಫ್ಯಾನ್ಸ್ ಹೇಳಿದ್ದಾರೆ.
‘ಜನ ನಾಯಕನ್’ ಸಿನಿಮಾಗೆ ಇನ್ನೂ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿಲ್ಲ. ಈ ಚಿತ್ರ ಮುಂದಕ್ಕೆ ಹೋಗಲು ಪ್ರಮುಖ ಕಾರಣ.ಚುನಾವಣೆ ಮುಗಿದ ಬಳಿಕ ಸಿನಿಮಾ ರಿಲೀಸ್ ಆಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.