‘ಜನ ನಾಯಗನ್’ vs ಸಿಬಿಎಫ್​​ಸಿ: ವಿಜಯ್​​ಗೆ ಬೆಂಬಲಿಸಿದ ಕಾಂಗ್ರೆಸ್: ಡಿಎಂಕೆ?

‘ಜನ ನಾಯಗನ್’ vs ಸಿಬಿಎಫ್​​ಸಿ: ವಿಜಯ್​​ಗೆ ಬೆಂಬಲಿಸಿದ ಕಾಂಗ್ರೆಸ್: ಡಿಎಂಕೆ?


ರಾಜಕೀಯಕ್ಕೆ ಪ್ರವೇಶಿಸಿರುವ ದಳಪತಿ ವಿಜಯ್ (ತಾಳಪತಿ ವಿಜಯ್), ಸಿನಿಮಾಗಳಿಂದ ದೂರಾಗಿರುವುದಾಗಿ ಹೇಳಿದ್ದು, ‘ಜನ ನಾಯಕನ್’ ತಮ್ಮ ಕೊನೆಯ ಸಿನಿಮಾ ಎಂದಿದ್ದರು. ಸಿನಿಮಾ ನಾಳೆ (ಜನವರಿ 09) ಬಿಡುಗಡೆ ಆಗಬೇಕಿತ್ತು. ಆದರೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಿಲ್ಲ. ಇದೀಗ ಪ್ರಕರಣ ನ್ಯಾಯಾಲಯದಲ್ಲಿದೆ. ಸಿನಿಮಾಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನಿರಾಕರಿಸಿರುವುದು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ನಡೆ ಎನ್ನಲಾಗುತ್ತಿದೆ. ಇದೀಗ ಕಾಂಗ್ರೆಸ್ ಪಕ್ಷವು ಈ ವಿಷಯದಲ್ಲಿ ವಿಜಯ್ ಗೆ ಬೆಂಬಲ ಘೋಷಣೆ ಮಾಡಿದೆ.

‘ಜನ ನಾಯಕನ್’ ಸಿನಿಮಾಕ್ಕೆ ಪ್ರಮಾಣ ಪತ್ರ ನಿರಾಕರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಕಾಂಗ್ರೆಸ್ ಮುಖಂಡ ಪ್ರವೀಣ್ ಚಕ್ರವರ್ತಿ, ಸಂಸದೆ ಎಸ್ ಜೋತಿಮಣಿ ಅವರು ‘ವಿಜಯ್ ಸಿನಿಮಾಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿರುವುದು ಕೆಟ್ಟ ರಾಜಕೀಯ ನಡೆ’ ಎಂದು ಟೀಕಿಸಿದ್ದಾರೆ.

ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಪ್ರವೀಣ್ ಚಕ್ರವರ್ತಿ, ರಾಹುಲ್ ಗಾಂಧಿ ಒಂಬತ್ತು ವರ್ಷಗಳ ಹಿಂದೆ ತಮಿಳು ಸಿನಿಮಾ ಬಗ್ಗೆ ಮೋದಿ ಅವರು ಟ್ವೀಟ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ, ‘ಆಗಲೇ ರಾಹುಲ್ ಗಾಂಧಿ ಅವರು ಅವರಿಗೆ ಮೋದಿ ಹೇಳಿದ್ದರು, ತಮಿಳುನಾಡು ಸಂಸ್ಕೃತಿ ಮತ್ತು ತಮಿಳು ಸಿನಿಮಾಗಳನ್ನು ತುಳಿಯುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ. ಆದರೆ ‘ಜನ ನಾಯಕನ್’ ಸಿನಿಮಾಕ್ಕೆ ಪ್ರಮಾಣಪತ್ರ ನಿರಾಕರಿಸುವ ಮೂಲಕ ಮತ್ತೊಮ್ಮೆ ಮೋದಿ, ತಮಿಳು ಜನರನ್ನು ಅವಮಾನಿಸಿದ್ದಾರೆ’.

ಇದನ್ನೂ ಓದಿ:’ಜನ ನಾಯಕನ್’ ಬಳಿಕ ಈಗ ‘ಪರಾಶಕ್ತಿ’ಗೂ ಸಿಬಿಎಫ್‌ಸಿ ಸಂಕಟ

ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಸಹ ಇದೇ ವಿಷಯವಾಗಿ ಟ್ವೀಟ್ ಮಾಡಿದ್ದು, ‘ಇದು ತಮಿಳು ಚಿತ್ರರಂಗದ ಮೇಲೆ ದಾಳಿ ನಡೆಸುತ್ತಿದೆ. ಯಾರ್ಯಾರು ವಾಕ್ ಸ್ವಾತಂತ್ರ್ಯದ ಮೇಲೆ ನಂಬಿಕೆ ಇರಿಸಿದ್ದಾರೆಯೋ ಅವರೆಲ್ಲರೂ ಸಿಬಿಎಫ್ ಸಿಯ ಈ ನಡೆಯನ್ನು ಖಂಡಿಸಬೇಕು. ನೂರಾರು ಜನರ ಶ್ರಮದಿಂದ, ಕೋಟ್ಯಂತರ ರೂಪಾಯಿಗಳ ಹಣ ಖರ್ಚು ಮಾಡಿ ಸಿನಿಮಾ ಮಾಡಲಾಗಿರುತ್ತದೆ. ಆದರೆ ಹೀಗೆ ಸಿನಿಮಾಕ್ಕೆ ಸಮಸ್ಯೆ ನೀಡುವುದು ಕ್ರಿಯಾತ್ಮಕ ಸ್ವಾತಂತ್ರ್ಯದ ಹರಣ ಮಾಡಿದಂತೆ. ಅದರಲ್ಲೂ ರಾಜಕೀಯ ಕಾರಣಕ್ಕೆ ಸಿನಿಮಾಕ್ಕೆ ಕಿರುಕುಳ ನೀಡುವುದು ಅಪಾಯಕಾರಿ’.

ಅಂದಹಾಗೆ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷ. ಆದರೆ ವಿಜಯ್, ರಾಜಕೀಯ ಪ್ರವೇಶಿಸಿದಾಗಿನಿಂದಲೂ ಆಡಳಿತಾರೂಢ ಡಿಎಂಕೆ ಪಕ್ಷದ ವಿರುದ್ಧ ಹೋರಾಡುತ್ತಿದ್ದಾರೆ. ಇದೀಗ ಡಿಎಂಕೆಯ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್, ಡಿಎಂಕೆಯ ವಿರೋಧಿ ನಾಯಕ ಎನಿಸಿಕೊಂಡಿರುವ ವಿಜಯಕ್ಕೆ ಬೆಂಬಲ ಸೂಚಿಸಿರುವುದು ರಾಜಕೀಯ ವಿಶ್ಲೇಷಕರ ಕುತೂಹಲಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:21 pm, ಗುರುವಾರ, 8 ಜನವರಿ 26



Source link

Leave a Reply

Your email address will not be published. Required fields are marked *