ಮೆಟ್ಟಿಲೇರಿಯೇ ತಿಮ್ಮಪ್ಪನ ದರ್ಶನ ಮಾಡುವುದೇಕೆ ಜಾನ್ಹವಿ: ಅದ್ಭುತ ಕಾರಣ ಕೊಟ್ಟ ನಟಿ

ಮೆಟ್ಟಿಲೇರಿಯೇ ತಿಮ್ಮಪ್ಪನ ದರ್ಶನ ಮಾಡುವುದೇಕೆ ಜಾನ್ಹವಿ: ಅದ್ಭುತ ಕಾರಣ ಕೊಟ್ಟ ನಟಿ


ಮೆಟ್ಟಿಲೇರಿಯೇ ತಿಮ್ಮಪ್ಪನ ದರ್ಶನ ಮಾಡುವುದೇಕೆ ಜಾನ್ಹವಿ: ಅದ್ಭುತ ಕಾರಣ ಕೊಟ್ಟ ನಟಿ

ಜಾನ್ಹವಿ ಕಪೂರ್ (ಜಾನ್ವಿ ಕಪೂರ್), ಬಾಲಿವುಡ್ ನ ಬಲು ಜನಪ್ರಿಯ ಮತ್ತು ಬೇಡಿಕೆಯ ಯುವನಟಿ. ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಹ ಬೇಡಿಕೆ ಸೃಷ್ಟಿಸಲಾಗಿದೆ. ಜಾನ್ಹವಿ ಕಪೂರ್, ಬಾಲಿವುಡ್ ನ ಗ್ಲಾಮರಸ್ ನಟಿಯರಲ್ಲಿ ಒಬ್ಬರು. ಸಿನಿಮಾಗಳಲ್ಲಿ ಮಾಡರ್ನ್ ಯುವತಿಯಾಗಿ ಕಾಣಿಸಿಕೊಳ್ಳುವ ಜಾನ್ಹವಿ, ಅಪ್ಪಟ ದೈವ ಭಕ್ತೆ. ಅದರಲ್ಲೂ ತಿರುಪತಿ ತಿಮ್ಮಪ್ಪನ ಪರಮ ಭಕ್ತೆ. ಹಲವು ಬಾರಿ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೀಗೆ ಭೇಟಿ ನೀಡಿದ ಪ್ರತಿಬಾರಿ ಅವರು ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿಯೇ ದರ್ಶನ ಪಡೆಯುತ್ತಾರೆ. ತಾವು ಹೀಗೆ ಏಕೆ ಮಾಡುವುದು ಎಂದು ಸಹ ಜಾನ್ಹವಿ ಕಪೂರ್ ವಿವರಿಸಿದ್ದಾರೆ. ಜಾನ್ಹವಿ ಕೊಟ್ಟಿರುವ ಉತ್ತರ ತಿಮ್ಮಪ್ಪನ ಭಕ್ತರು ಎಲ್ಲರ ಹೃದಯ ಗೆಲ್ಲುವಂತಿದೆ.

ದೇಶದ ಹಲವಾರು ದೇವಾಲಯಗಳಲ್ಲಿ ವಿಐಪಿ ಸಂಸ್ಕೃತಿ ಇದೆ. ಸಾಮಾನ್ಯ ಭಕ್ತರು ಗಂಟೆ ಗಟ್ಟಲೆ ಸಾಲಿನಲ್ಲಿ ನಿಂತು ಹೋಗಿ ದೇವರ ದರ್ಶನ ಮಾಡಬೇಕು ಆದರೆ ಹಣ ಅಥವಾ ಪ್ರಭಾವಿಗಳು ಹಣ ನೀಡಿದರೆ ಅವರಿಗೆ ವಿಶೇಷ ದರ್ಶನ ಸಿಗುತ್ತದೆ. ತಿರುಪತಿಯಲ್ಲೂ ಈ ವಿಶೇಷ ದರ್ಶನ ಸೌಲಭ್ಯವಿದೆ. ಅದರಲ್ಲೂ ವಿವಿಐಪಿಗಳು ಕೆಲ ಸಮಯವೂ ಕಾಯಿದೆ ಅವರಿಗೆ ನೇರ ದರ್ಶನ ವ್ಯವಸ್ಥೆ. ನಟಿ ಜಾನ್ಹವಿ ಹೇಳಿರುವಂತೆ ಅವರೂ ಸಹ ಅದೇ ವಿಐಪಿ ದರ್ಶನದ ಮೂಲಕವೇ ದರ್ಶನ ಮಾಡುತ್ತಾರೆ.

ಆದರೆ, ‘ಸಾವಿರಾರು ಮಂದಿ ಗಂಟೆಗಟ್ಟಲೆ ದೇವರ ದರ್ಶನಕ್ಕಾಗಿ ಕಾದು ದರ್ಶನ ಪಡೆಯುತ್ತಾರೆ, ಆದರೆ ನಾನು ಸುಲಭವಾಗಿ ಹಣ ಕೊಟ್ಟು ವಿಶೇಷ ದರ್ಶನ ಪಡೆಯುತ್ತೇನೆ. ಆದರೆ ಇದು ಸರಿಯಲ್ಲ, ಹಾಗೆಂದು ನಾನು ಕೆಲವು ಕಾರಣಗಳಿಗೆ (ಸೆಲೆಬ್ರಿಟಿ ಆಗಿಲ್ಲ) ಸಾಮಾನ್ಯ ಜನರ ಜೊತೆಗೆ ದರ್ಶನ ಮಾಡುವಂತೆಯೂ ಇಲ್ಲ. ನಾನು ಪ್ರತಿ ಬಾರಿ ಮೆಟ್ಟಿಲುಗಳನ್ನು ಹತ್ತಿ, ಕಷ್ಟಪಟ್ಟು, ಶ್ರಮಪಟ್ಟು ದರ್ಶನಕ್ಕೆ ಹೋಗುತ್ತೇನೆ’ ಎಂದು ಜಾನ್ಹವಿ.

ಇದನ್ನೂ ಓದಿ:ಹುಟ್ಟುಹಬ್ಬದಂದು ತಿರುಪತಿ ಬೆಟ್ಟ ಹತ್ತಿ ದರ್ಶನ ಪಡೆದ ನಟಿ ಜಾನ್ಹವಿ ಕಪೂರ್

ಕಾರಿನಲ್ಲಿ ಬೆಟ್ಟಕ್ಕೆ ಹೋಗಿ, ಅಲ್ಲಿ ಹಣ ಕೊಟ್ಟು ವಿಐಪಿ, ವಿವಿಐಪಿ ದರ್ಶನ ಮಾಡುವುದು ಜಾನ್ಹವಿಗೆ ಬಹಳ ಸುಲಭ. ಆದರೆ ತಾನು ವಿಐಪಿ ಆಗಿ ಅಲ್ಲ ಬದಲಾಗಿ ಭಕ್ತಳಾಗಿ ದರ್ಶನಕ್ಕೆ ಹೋಗಬೇಕು ಎಂಬ ಕಾರಣಕ್ಕೆ ಜಾನ್ಹವಿ ಕಪೂರ್ ಅವರು ತಿರುಪತಿ ಬೆಟ್ಟದ 3500 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನಕ್ಕೆ ಹೋಗುತ್ತಾರೆ.

ಜಾನ್ಹವಿ ಕಪೂರ್ ಬಹಳ ವರ್ಷಗಳಿಂದಲೂ ತಿರುಪತಿ ತಿಮ್ಮಪ್ಪನ ಭಕ್ತೆ. ಅವರ ತಾಯಿ ಶ್ರೀದೇವಿ ಸಹ ತಿಮ್ಮಪ್ಪನ ಭಕ್ತೆ ಆಗಿದ್ದರು. ಹಿಂದೊಮ್ಮೆ ಅವರೇ ಹೇಳಿಕೊಂಡಿದ್ದಂತೆ, ಅವರಿಗೆ ತಿರುಪತಿಯಲ್ಲಿಯೇ ಮನೆ ಮಾಡಿಕೊಂಡು ತನ್ನ ಪತಿ, ಮಕ್ಕಳೊಟ್ಟಿಗೆ ನೆಲೆಸುವ ಆಸೆಯೂ ಇದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *