Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯ ಹೆಣ್ಣಿಗೆ ಇಂದು ತವರಿನಿಂದ ಅನಿರೀಕ್ಷಿತವಾಗಿ ಕರೆ ಬರಲಿದೆ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯ ಹೆಣ್ಣಿಗೆ ಇಂದು ತವರಿನಿಂದ ಅನಿರೀಕ್ಷಿತವಾಗಿ ಕರೆ ಬರಲಿದೆ


ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಅಂದುಕೊಂಡ ಕೆಲವು ಪ್ರವಾಸದ ಕಾರ್ಯಕ್ರಮಗಳು ಕೊನೆಯ ಕ್ಷಣದಲ್ಲಿ ಬದಲಾಗಲಿದೆ. ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಕಡಿಮೆ ಆಗಲಿದೆ. ಸ್ವಂತ ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳುವಿರಿ. ವಸ್ತು ಪೂರೈಕೆ ವಿಚಾರಕ್ಕೆ ಆತುರದ ನಿರ್ಧಾರಗಳಿಂದ ಯಾರಿಗೂ ಮಾತಿನ ಭರವಸೆ ನೀಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಸಮಜಾಯಿಷಿ ನೀಡುತ್ತಾ ನಿಮ್ಮ ಕೆಲಸದ ವೇಗ ಕುಂಠಿತ ಕಾರ್ಯಕ್ರಮ. ವಾಹನ ಅಥವಾ ಮನೆ ರಿಪೇರಿಯಂತಹ ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಶತ್ರುಗಳ ಬಗ್ಗೆ ಜಾಗರೂಕರಾಗಿರಿ

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಕುಟುಂಬದಲ್ಲಿ ಸಣ್ಣಪುಟ್ಟ ಗೊಂದಲಗಳು ಉಂಟಾಗಬಹುದು, ವಿಶೇಷವಾಗಿ ಒಡಹುಟ್ಟಿದವರ ಜೊತೆ ಆಸ್ತಿ ಅಥವಾ ಹಣದ ವಿಚಾರಕ್ಕೆ ಮನಸ್ತಾಪವಾಗದಂತೆ ಎಚ್ಚರವಹಿಸಿ. ಹೆಣ್ಣುಮಕ್ಕಳಿಗೆ ಈ ದಿನ ತವರಿನಿಂದ ಅನಿರೀಕ್ಷಿತವಾಗಿ ಕರೆ ಬರಲಿದೆ. ಅದೇ ವೇಳೆ ದೂರದಿಂದಲೂ ಆಮಂತ್ರಣ ಅಥವಾ ಶುಭ ವಾರ್ತೆ ಬರಲಿದೆ. ಪ್ರೀತಿಪಾತ್ರರ ಜೊತೆಗಿನ ಸಂಬಂಧದಲ್ಲಿ ಇಂದು ‘ಪಾರದರ್ಶಕತೆ’ ಬಹಳ ಮುಖ್ಯ. ಯಾವುದನ್ನೂ ಮುಚ್ಚಿಡಬೇಡಿ, ಸತ್ಯವು ಎಷ್ಟು ಕಹಿಯಾಗಿದ್ದರೂ ಅದು ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಸೌಂದರ್ಯವರ್ಧಕ ಮಾರಾಟಗಾರರು ಅಥವಾ ಫ್ಯಾಷನ್ ರಂಗದಲ್ಲಿರುವವರಿಗೆ ದೊಡ್ಡ ಮಟ್ಟದ ವ್ಯವಹಾರ. ಆರ್ಥಿಕವಾಗಿ ಸ್ಥಿತಿ ಗಟ್ಟಿಯಾಗಿದ್ದರೂ, ಅತಿಯಾದ ಐಷಾರಾಮಿ ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಮನೆಯ ಹಿರಿಯ ಮಹಿಳೆಯರ ಸಲಹೆಯು ನಿಮಗೆ ಆಪ್ತಕಾಲದಲ್ಲಿ ನೆರವಾಗಲಿದೆ. ನೀವು ಇತರರ ಸೌಂದರ್ಯಕ್ಕಿಂತ ಗುಣಕ್ಕೆ ಆದ್ಯತೆ ನೀಡಿ ವ್ಯವಹರಿಸುವುದು ಒಳಿತು. ಚರ್ಮದ ಚರ್ಮದ ಅಥವಾ ಕಣ್ಣಿನ ಉರಿ ಕಾಣಿಸಿಕೊಳ್ಳಬಹುದು. ವಿವಾಹ ಆಕಾಂಕ್ಷಿಗಳಿಗೆ ಇಂದು ಮನಸ್ಸಿಗೆ ಒಪ್ಪುವಂತಹ ಸಂಬಂಧಗಳು ಬರುವ ಸಾಧ್ಯತೆ ಇದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *