Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 21ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 21ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 21ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮಲ್ಲಿ ಏನೋ ಬದಲಾವಣೆ ಮಾಡಿಕೊಳ್ಳಬೇಕು ಅಂತೇನಾದರೂ ಅನಿಸಿದರೆ ನಿಮ್ಮ ದಿನಚರಿಯಲ್ಲಿ ಏನೇನು ಬದಲಾಗಬೇಕು ಅಂತ ತೀರ್ಮಾನ ಮಾಡಿಕೊಳ್ಳಿ. ಸಣ್ಣ- ಪುಟ್ಟ ಹೊಸ ಅಭ್ಯಾಸಗಳು ಸಹ ಅತಿ ದೊಡ್ಡ ಜಾದೂ ಮಾಡಿಬಿಡುತ್ತವೆ. ನಿಮ್ಮ ಮನಸ್ಸಿನಲ್ಲಿ ಇರುವಂಥ ನೋವನ್ನು ಮಾತಿನಲ್ಲಿ ತೋರಿಸಿಕೊಳ್ಳಬೇಡಿ. ಅದರಲ್ಲಿ ಸಮಸ್ಯೆಯೂ ಸಹ. ಬೇರೆಯವರ ನಿರ್ಧಾರದ ಕಾರಣಗಳಿಗೆ ನಿಮ್ಮ ಸಂತೋಷ ಹಾಳಾಗಬಾರದು. ಹಾಗೆ ಸಾಧ್ಯವಿಲ್ಲ ಎಂಬಂಥ ಕೆಲಸ- ಕಾರ್ಯಗಳನ್ನು ನೇರವಾಗಿ ಹೇಳಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಈ ದಿನ ನೀವು ಮಾಡುವ ಕೆಲಸದಲ್ಲಿ ಸಂಖ್ಯೆಗಿಂತ ಹೆಚ್ಚಾಗಿ ಗುಣಮಟ್ಟಕ್ಕೆ ಆದ್ಯತೆ ನೀಡಿ. ನೀವು ಇಡುವ ಚಿಕ್ಕ ಹೆಜ್ಜೆಗಳು ಸಹ ದೊಡ್ಡ ಮಟ್ಟದಲ್ಲಿ. ಬೀರುತ್ತವೆ. ಉದ್ಯೋಗಸ್ಥರು ತಮ್ಮೊಂದಿಗೆ ಕೆಲಸ ಮಾಡುವವರೊಂದಿಗೆ ಸರಿಯಾದ ಸಮನ್ವಯ ಸಾಧಿಸುವಲ್ಲಿ ಪರಿಣಾಮಕಾರಿ ಫಲಿತಾಂಶವು ಕಂಡುಬರುತ್ತದೆ. ನೀವು ನಿರೀಕ್ಷಿಸುತ್ತಿರುವುದು ಏನು ಎಂಬ ಬಗ್ಗೆ ಸ್ಪಷ್ಟವಾದ ಪದಗಳಲ್ಲಿ ವಿವರಿಸಿ. ಇನ್ನು ಕೌಟುಂಬಿಕವಾಗಿ ಸರಳವಾಗಿ ಪರಿಹರಿಸಬಹುದಾದ ಸಮಸ್ಯೆ ನೀವಾಗಿಯೇ ಕಗ್ಗಂಟು ಮಾಡಿಬಿಡುವ ಸಾಧ್ಯತೆಯಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನಿಮ್ಮ ಮಾನಸಿಕ ಶಾಂತಿಗೆ ಹೊರಗಿನ ಒತ್ತಡ- ಬೆಳವಣಿಗೆ ಕಾರಣ ಎಂಬ ಆಕ್ಷೇಪದಿಂದ ಹೊರಗೆ ಬರುವ ದಿನ ಇದಾಗಿದೆ. ಪ್ರತಿ ಸಣ್ಣ ವಿಚಾರವನ್ನು ದೊಡ್ಡ ಸಮಸ್ಯೆಯಾಗಿ ನೋಡುವ ಮನೋಭಾವದಿಂದ ಹೊರಗೆ ಬರಲಿದ್ದೇನೆ. ನಿಮ್ಮ ಹಲವು ಸಮಸ್ಯೆಗಳ ಮೂಲ ಇರುವುದು ಸಿಟ್ಟಿನಲ್ಲಿ. ಕೂತು- ಮಾತನಾಡಿ ಬಗೆಹರಿಸಿಕೊಳ್ಳಬೇಕಾದ ಸಮಯದಲಿ ಮಾತೇ ಆಡದಂತೆ ಸುಮ್ಮನಾಗಿಬಿಟ್ಟರೆ ಹೇಗೆ? ಕಾಲಿನ ನೋವು ಕಾಡಲಿದೆ. ಒಂದು ವೇಳೆ ಆ ಸಮಸ್ಯೆಯಿಂದ ಬಳಲುತ್ತಾ ಇದ್ದೀರಿ ಅಂತಾ ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಕಡೆಗೆ ಗಮನ ನೀಡಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *