
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನನ್ನ ಕೆಲಸ ಎಷ್ಟೋ ಅಷ್ಟರ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂಬ ಸ್ಥಿತಿಯಲ್ಲಿ ನೀವು ಇರುತ್ತೀರಿ. ಅರ್ಥಾತ್ ಎಷ್ಟು ಹಣ ಬರುತ್ತದೋ ಅದಕ್ಕೆ ತಕ್ಕಂತೆ ಕೆಲಸ ಗಟ್ಟಿ ಮಾಡಿಕೊಂಡೆ, ಬದ್ಧರಾಗಿ ನಿಲ್ಲಲಿಲ್ಲ. ದೇವಸ್ಥಾನಕ್ಕೆ ಅಥವಾ ನಿಮ್ಮ ಧಾರ್ಮಿಕ ನಂಬಿಕೆಗೆ ಅನುಸಾರವಾಗಿ ಸ್ವಲ್ಪ ಸಮಯ ಪ್ರಶಾಂತತೆ, ನೆಮ್ಮದಿ ನೀಡುವ ಸ್ಥಳಕ್ಕೆ ತೆರಳುವುದರಿಂದ ಸಮಾಧಾನದಿಂದ ಇರಲು ಸಾಧ್ಯವಿಲ್ಲ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ ದೀರ್ಘಾವಧಿಗೆ ಆರ್ಡರ್ ದೊರೆಯಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಯಾರಿಗೋ ಬಯ್ಯುವುದಕ್ಕೆ ಹೋಗಿ ಇನ್ಯಾರ ಜೊತೆಗೋ ಮನಸ್ತಾಪ ಮಾಡಿಕೊಳ್ಳಿ. ಸಿಟ್ಟು- ಕೋಪ- ಆಕ್ಷೇಪವನ್ನು ಹೊರಹಾಕಲು ಸರಿಯಾದ ಮಾರ್ಗವನ್ನು ಹುಡುಕುವುದು ಬಹಳ ಮುಖ್ಯ. ವ್ಯಾಪಾರ- ವ್ಯವಹಾರಗಳಲ್ಲಿ ಇರುವವರು ಮುಖ ಹರಿದುಕೊಳ್ಳುವಂತೆ ನಿರ್ದಾಕ್ಷಿಣ್ಯವಾಗಿ ಮಾತನಾಡುವುದಕ್ಕೆ ಹೋಗಬೇಡಿ. ಹೀಗೆ ಮಾಡುವುದರಿಂದ ದೀರ್ಘ ಅವಧಿಗೆ ನಿಮಗೆ ಆಗಬಹುದಾದ ಲಾಭವನ್ನು ಕಳೆದುಕೊಳ್ಳುವಂತೆ ಆಗಲಿದೆ. ನೀವು ಹುಡುಕುತ್ತಿರುವ ಮುಖ್ಯ ದಾಖಲೆಗಳು ಸಿಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ನಿಮ್ಮ ಆಲೋಚನೆಗೆ ಹೊಂದುವಂಥ, ನಿಮ್ಮ ಉದ್ದೇಶಕ್ಕೆ ತಕ್ಕಂತೆ ಕೆಲಸ ಮಾಡುವ ಜನರು ಇಲ್ಲವಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಒಂದು ವಿಷಯವನ್ನು ಹತ್ತು ಸಲ ಹೇಳಿದ ನಂತರವೂ ಅದೇ ತಪ್ಪು ಪುನರಾವರ್ತನೆ ಆಗುತ್ತಾ ಇದೆ ಎಂಬುದು ನಿಮ್ಮ ಸಿಟ್ಟಿನ ಮೂಲ ಆಗಲಿದೆ. ಸ್ನೇಹಿತರು ಕೂಡ ನಿಮ್ಮ ಜೊತೆಗೆ ಮಾತನಾಡುವಾಗ ಅನ್ಯಮನಸ್ಕರಾಗಿ ಇರಲಿದ್ದಾರೆ. ಮೊದಲಿನ ಆಸಕ್ತಿ- ಉತ್ಸಾಹದಿಂದ ನಿಮ್ಮನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಪದೇ ಪದೇ ಅನಿಸಲಿದೆ. ನೀವು ಬಂದೇ ಬರುತ್ತದೆ ಎಂದುಕೊಂಡಿದ್ದ ಹಣವೊಂದು ಬಾರದೆ ಗೊಂದಲಕ್ಕೆ ಕಾರಣ ಆಗಲಿದೆ.
ಲೇಖನ- ಸ್ವಾತಿ ಎನ್.ಕೆ.