Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 23ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 23ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 23ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಎಲ್ಲ ರೀತಿಯ ಶ್ರಮ ಪಟ್ಟು, ಇನ್ನು ಆಗಲಾರದು ಎಂದುಕೊಂಡಿದ್ದ ಕೆಲವು ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳಿಗೆ ಪವಾಡದ ರೀತಿಯಲ್ಲಿ ಮುಗಿಯಲಿದೆ. ನಿಮ್ಮ ಗೆಳೆಯ- ಗೆಳತಿಯರು ನೀಡುವ ಸಲಹೆಗಳನ್ನು ತೆಗೆದುಕೊಳ್ಳಲಾಗಿದೆ. ತಾತ್ಕಾಲಿಕ ಎಂಬಂತೆ ಸ್ವಲ್ಪ ಹಣಕಾಸಿನ ಅಗತ್ಯವಿದೆ. ಸಂಗಾತಿ ಕಡೆಯಿಂದ ಈ ವಿಚಾರದಲ್ಲಿ ಸಹಾಯ ಒದಗಿ ಬರಲಿದೆ. ಸದ್ದಿಲ್ಲದೆ ಆರಂಭ ಮಾಡಿದ ವ್ಯಾಪಾರ- ವ್ಯವಹಾರಗಳು ಕೈ ಹಿಡಿಯುತ್ತಿರುವುದಕ್ಕೆ ಸೂಚನೆ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಸಂತೆ ಹೊತ್ತಿಗೆ ಮೂರು ಮೊಳ ಎಂಬ ರೀತಿಯಲ್ಲಿ ಯಾವ ಕೆಲಸವನ್ನು ಸಹ ಮಾಡುವುದಕ್ಕೆ ಹೋಗಬೇಡಿ. ತುರ್ತಾಗಿ ಮುಗಿಸುವ ಭರದಲ್ಲಿ ಗುಣಮಟ್ಟದ ಜೊತೆ ರಾಜೀ ಮಾಡಿಕೊಂಡು, ದೀರ್ಘಾವಧಿಯಲ್ಲಿ ಕೆಲಸ ಮಾಡಲು ಪಶ್ಚಾತಾಪ ಪಡುವಂತೆ ಆಗುತ್ತದೆ. ಸೋದರ- ಸೋದರಿಯರ ಜತೆಗಿನ ಭಿನ್ನಾಭಿಪ್ರಾಯ ಇರುವಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ತಂದೆ- ತಾಯಿಗೆ ಬೇಸರ ಆಗುವಂತೆ ನಡೆದುಕೊಳ್ಳಬೇಡಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರ ಮೇಲೆ ದೂರುಗಳು ಮೇಲಧಿಕಾರಿಗಳಿಗೆ ಹೋಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಒಂದು ಬಗೆಯ ತೃಪ್ತಿ- ಸಮಾಧಾನ ಮನದಲ್ಲಿ ಮೂಡಲಿದೆ. ಉದ್ಯೋಗ, ವೃತ್ತಿ- ವ್ಯವಹಾರದಲ್ಲಿ ಮುಂದೆ ಏನಾಗಿಬಿಡುತ್ತೋ ಎಂದು ಆತಂಕ ಉಂಟಾಗಿದೆ. ನೀವು ಕೆಲಸ ಮಾಡುವ ಸಂಸ್ಥೆಗೆ ದೊಡ್ಡ ಮೊತ್ತದ ಆರ್ಡರ್ ಬರಬಹುದು, ಅಥವಾ ಇನ್ನೊಂದು ದೊಡ್ಡ ಸಂಸ್ಥೆಯೊಂದಿಗೆ ವ್ಯವಹಾರ ಮುಂದುವರಿಸಲು ನಿರ್ಧರಿಸಬಹುದು. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ನಿಮಗೆ ಅನುಕೂಲ ಆಗಲಿದೆ. ನಿಮ್ಮ ಮಾನಸಿಕ ಸ್ಥೈರ್ಯ ಕುಗ್ಗಿಸುವುದಕ್ಕೆ ಪ್ರಯತ್ನಿಸುವವರಿಗೆ ಕಠಿಣವಾದ ಮಾತುಗಳಿಂದ ಎಚ್ಚರಿಕೆ ನೀಡಲಾಯಿತು.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *