Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 25ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 25ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 25ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಕ್ಕು ಹಗುರಾಗುವುದಕ್ಕೆ ಬೇಕಾದ ವಾತಾವರಣದಲ್ಲಿ ಈ ದಿನ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ಸ್ನೇಹಿತರು- ಸಂಬಂಧಿಗಳು ಜತೆಗೂಡಿ ರೆಸಾರ್ಟ್, ಕಿರು ಪ್ರವಾಸ ಇಂಥವುಗಳಿಗೆ ಹೋಗುವ ಯೋಗ ಇದೆ. ಯಾವ ವ್ಯಕ್ತಿಯಿಂದ ನಿಮಗೇನೂ ಅನುಕೂಲ ಆಗುವುದಿಲ್ಲ ಎಂದು ಬಿಟ್ಟಿರುತ್ತೀರೋ ಅಂಥವರಿಂದಲೇ ವೃತ್ತಿ- ವ್ಯವಹಾರ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಮಹತ್ತರವಾದ ಸಹಾಯ ಆಗಲಿದೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚು ಆಗಲಿದೆ. ಬ್ರ್ಯಾಂಡೆಡ್ ಉತ್ಪನ್ನಗಳನ್ನೇ ಖರೀದಿಸಲಾಗಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಮನಸ್ಸಿನಲ್ಲಿ ಒಂದು ಬಗೆ ತಲ್ಲಣ ಇರಲಿದೆ. ಹಣಕಾಸಿನ ವಿಚಾರಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದಕ್ಕೆ ಸಾಧ್ಯ ಆಗುತ್ತದೋ ಇಲ್ಲವೋ ಎಂಬ ಕಾರಣಕ್ಕೆ ನಿಮ್ಮ ಸ್ಥಿತಿಗೆ ಕಾರಣ ಆಗಲಿದೆ. ಇದ್ದದ್ದನ್ನು ಇದ್ದಂತೆಯೇ ನೇರವಾಗಿ ಹೇಳುವುದಕ್ಕೆ ಸಂಕೋಚಪಟ್ಟರೆ ಇಂಥ ಪರಿಸ್ಥಿತಿ ನಿರ್ಮಾಣವಾಯಿತು ಎಂದು ನಾಲ್ಕಾರು ಬಾರಿ ಅಂದುಕೊಳ್ಳುತ್ತೀರಿ. ನಿಮ್ಮ ಜೊತೆಗೆ ಕೆಲಸ ಮಾಡುವವರು ಹೆಚ್ಚುವರಿಯಾಗಿ ಆದಾಯ ಬರುವಂತೆ ಕೆಲವು ಸಲಹೆಗಳನ್ನು ನೀಡಲಿದ್ದಾರೆ. ಭಾರವಾದ ವಸ್ತುಗಳನ್ನು ಸಾಗಿಸುವಾಗ ಜಾಗ್ರತೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಕೇಳಿದಷ್ಟು ಹಣವನ್ನು ನೀಡಿದ ಮೇಲೂ ಅಂದಕೊಂಡಂಥ ಗುಣಮಟ್ಟ ಬರುತ್ತಿಲ್ಲ ಎಂಬುದು ನಿಮ್ಮ ಆಕ್ಷೇಪದ ಮೂಲ ಆಗಲಿದೆ. ಸಣ್ಣ- ಪುಟ್ಟ ಕೆಲಸ ಅಥವಾ ಜವಾಬ್ದಾರಿ ಎಂದು ನೋಡದೆ ನೀವೇ ಮುಂದೆ ನಿಂತು ಮಾಡಿದಂತಹ ಕಾರ್ಯಗಳಿಗೆ ಹಲವು ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿಬರಲಿವೆ. ನಿಮಗಾಗಿ ಖರೀದಿಸಿದ ಕೆಲವು ಐಟಂಗಳನ್ನು ಇತರರಿಗೆ ನೀಡುವ ಸನ್ನಿವೇಶ ಸೃಷ್ಟಿಯಾಗಲಿದೆ. ರಂಗಭೂಮಿ- ಸಿನಿಮಾ- ಧಾರಾವಾಹಿ- ಯಕ್ಷಗಾನ ಕ್ಷೇತ್ರದಲ್ಲಿ ಯಶಸ್ಸಿದೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *