
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಬಾಯಿ ಬಿಟ್ಟು ನಿಮ್ಮ ಮನಸ್ಸಿನಲ್ಲಿ ಇರುವುದನ್ನು ಹೇಳಿದರೆ ನಿಮ್ಮ ನಿರೀಕ್ಷೆ ಏನು ಎಂಬುದು ಇತರರಿಗೆ ತಿಳಿಯುವುದಾದರೂ ಹೇಗೆ? ಎಲ್ಲಾ ಅರ್ಥ ಆಗಬೇಕಲ್ಲವಾ ಎಂದು ಅಂದುಕೊಳ್ಳುವ ಬದಲು ನಿಮ್ಮ ಅಪೇಕ್ಷೆ ಏನು ಅನ್ನುವುದನ್ನು ಹೇಳಿಬಿಡಿ. ವಿವಾಹಿತರಿಗೆ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವ ಯೋಗವಿದೆ. ಕಾರು ಖರೀದಿ, ಮನೆ ನಿರ್ಮಾಣ, ಸೈಟು ಖರೀದಿ ಇಂಥ ವಿಷಯಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಒಂದೊಳ್ಳೆ ಸಮಯ ದೊರೆಯಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಕುಟುಂಬದಲ್ಲಿ ಸಾಮರಸ್ಯ ಇರುತ್ತದೆ. ನಿಮ್ಮ ನಿರೀಕ್ಷೆಗೆ ತಕ್ಕಂತೆಯೇ ಇತರ ಸದಸ್ಯರು ಸಕಾರಾತ್ಮಕವಾಗಿ ಇರಲಿದ್ದಾರೆ. ವ್ಯಾಪಾರ- ವ್ಯವಹಾರದಲ್ಲಿನ ಹೂಡಿಕೆ ವಿಚಾರಗಳಿಗೆ ಯೋಜನೆ, ಬಜೆಟ್ ಮಾಡಿಕೊಳ್ಳಲು. ಯಾರ ಉದ್ಯೋಗದಲ್ಲಿ ದೀರ್ಘ ಕಾಲದ ಅಂತರ ಬಂತು, ಈಗ ಕೆಲಸಕ್ಕೆ ಪ್ರಯತ್ನ ಮಾಡುತ್ತಾ ಇದ್ದೀರಿ ಅಂತಾ ಪ್ರತಿಷ್ಠಿತ ಸಂಸ್ಥೆಯಿಂದ ಆಫರ್ ಬರುವ ಸೂಚನೆ ಇದೆ. ಅದರಲ್ಲಿಯೂ ನಿಮಗೆ ಅನುಕೂಲ ಆಗುವಂಥ ಪಾಳಿಯಲ್ಲಿಯೇ ಅಥವಾ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ದೊರೆಯುವಂಥ ಕೆಲಸ ಅದಾಗಿರುವ ಸಾಧ್ಯತೆ ಹೆಚ್ಚಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಉದ್ಯೋಗ ಅಥವಾ ವ್ಯಾಸಂಗದ ಸಲುವಾಗಿ ವಿದೇಶದಲ್ಲಿ ವಾಸ ಆಗಿದ್ದೇನೆ ಅಂತಾ ಖರ್ಚು-ವೆಚ್ಚವನ್ನು ನಿಭಾಯಿಸುವುದು ಕಷ್ಟದಲ್ಲಿ. ಇಷ್ಟು ಸಮಯ ನಿಮಗೆ ಸಹಾಯ ಮಾಡುವ ಕೆಲವು ಪರಿಸ್ಥಿತಿ ಇನ್ನು ಮುಂದೆ ಹಾಗಿಲ್ಲ ಎಂಬುದು ಗಮನಕ್ಕೆ ಬರಲಿದೆ. ಸ್ಥಳ ಬದಲಾವಣೆ ಅಥವಾ ನಿಮ್ಮ ನಿರ್ಧಾರದಲ್ಲಿಯೇ ಬದಲಾವಣೆ ಮಾಡಿಕೊಂಡು ಬಿಡುವ ಸಾಧ್ಯತೆ ಇದೆ. ಯಾವುದಾದರೂ ವಿಷಯ ಪೋಷಕರಿಂದ ಮುಚ್ಚಿಟ್ಟಿದ್ದರೆ ಅದನ್ನು ಹೇಳಿಕೊಂಡು ಬಿಡುವುದು ಒಳ್ಳೆಯದು.
ಲೇಖನ- ಸ್ವಾತಿ ಎನ್.ಕೆ.