Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 28ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 28ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 28ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಅಣಬೆ ಬೆಳೆಯುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಬಹಳ ಸಮಯದಿಂದ ನಿಂತು ಹೋಗಿರುವ ಸರ್ಕಾರಿ ಮಟ್ಟದಲ್ಲಿ ಕೆಲಸಗಳು ವೇಗವಾಗಿ ಪಡೆದುಕೊಳ್ಳಲಿವೆ. ಮಕ್ಕಳ ಶಿಕ್ಷಣ- ಉದ್ಯೋಗದಲ್ಲಿ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಉದ್ದೇಶ ಇರುವುದಕ್ಕೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಮನೆಯ ಮಟ್ಟಿಗೆ ಕೆಲವು ಕಾರ್ಯಕ್ರಮಗಳನ್ನು ನಿರ್ವಹಿಸುವಂಥ ನಿರ್ಧಾರ ತೆಗೆದುಕೊಂಡಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಹಣದ ವಿಚಾರದಲ್ಲಿ ಕೆಲವು ವ್ಯಕ್ತಿಗಳ ಜೊತೆಗೆ ಅಭಿಪ್ರಾಯ ಭೇದ- ಮನಸ್ತಾಪ ಕಾಣಿಸಿಕೊಳ್ಳಬಹುದು. ನೀವು ಹೇಳುವುದೊಂದು ಅರ್ಥವಾಗುವ ರೀತಿ ಮತ್ತೊಂದು ಎಂಬ ಸನ್ನಿವೇಶ ಸೃಷ್ಟಿಯಾಗುತ್ತದೆ. ಮುಖ್ಯ ವಿಚಾರಗಳು ಇದ್ದಲ್ಲಿ ಫೋನ್ ನಲ್ಲಿ ಮಾತನಾಡುವ ಬದಲಿಗೆ ನೇರಾನೇರ ಭೇಟಿ ಆಗುವುದು ಉತ್ತಮ. ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ನೀಡುವುದಾಗಿ ಯಾರೇ ಪ್ರಸ್ತಾವ ಮುಂದಿಟ್ಟರೂ ನೇರವಾಗಿ ‘ಬೇಡ” ಎಂದು ಬಿಡುವುದು ಒಳ್ಳೆಯ ನಿರ್ಧಾರ ಎಂದೆನಿಸಿಕೊಳ್ಳುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ದಾನ- ಧರ್ಮಕ್ಕಾಗಿ ಹಣದ ವಿನಿಯೋಗ ಆಗಲಿದೆ. ಸ್ವಾದಿಷ್ಟವಾದ ಊಟ- ತಿಂಡಿಗಳನ್ನು ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಇಷ್ಟು ಸಮಯ ನಿಮ್ಮ ಬಗ್ಗೆ ತಿರಸ್ಕಾರದಿಂದ ನೋಡುತ್ತಿದ್ದವರು, ದ್ವೇಷ ಸಾಧನೆ ಮಾಡುವವರು ತಾವಾಗಿಯೇ ನಿಮ್ಮ ಬಳಿ ಬಂದು, ಸಹಾಯ ಕೇಳಲಿದ್ದಾರೆ. ದೂರ ಪ್ರಯಾಣ ಅನಿವಾರ್ಯ ಎಂಬಂತೆ ಆಗಲಿದೆ. ಒಬ್ಬರೇ ವ್ಯಕ್ತಿಯ ಸಲುವಾಗಿ ನಿಮ್ಮ ಹೆಚ್ಚು ಸಮಯ ನೀಡಬೇಕಾದ ಪರಿಸ್ಥಿತಿ ಸೃಷ್ಟಿ ಆಗಲಿದೆ. ತೀರಾ ಅನಿವಾರ್ಯ ಎಂದಾದಾಗ ಮಾತ್ರ ಗ್ಯಾಜೆಟ್- ಮೊಬೈಲ್ ಫೋನ್ ಇಂಥವುಗಳ ಖರೀದಿ ಮಾಡಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *