Headlines

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 29ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 29ರ ದಿನಭವಿಷ್ಯ


ಜನ್ಮಸಂಖ್ಯೆಯ ಆಧಾರದಲ್ಲಿ ದಿನಭವಿಷ್ಯ ಜೊತೆಗೆ ಇನ್ನೊಂದು ಬೋನಸ್. ಮನಸ್ಸಿನಲ್ಲಿ ಅಂದುಕೊಂಡ ಕೆಲಸ ಪೂರ್ತಿ ಮಾಡುವ ತನಕ ಅದೇ ಉತ್ಸಾಹ ಉಳಿಸುತ್ತಾ ಇಲ್ಲ. ದಿಢೀರ್ ಉತ್ಸಾಹ ಹಾಗೂ ಅಷ್ಟೇ ವೇಗದಲ್ಲಿ ಆ ಉತ್ಸಾಹ ಕರಗಿ ಹೋಗುತ್ತಾ ಇದೆಯವರಿಗೆ ಮೂನ್ ಸ್ಟೋನ್ ಬಹಳ ಸಹಕಾರಿ. ನಿಮ್ಮದು ವೃಷಭ, ಕರ್ಕಾಟಕ ರಾಶಿಯಾದರೆ ಇನ್ನೂ ಒಳೆಯದು. ವೃಶ್ಚಿಕ ರಾಶಿಯಾದರೆ ಮೂನ್ ಸ್ಟೋನ್ ಬೇಡ. ಆದರೆ ವೃಶ್ಚಿಕ ರಾಶಿಯವರು ಕಾರ್ನೇಲಿಯನ್ ಧರಿಸಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸರಳವಾದ ಸಂಗತಿ, ವಿಷಯಗಳೇ ಸಿಕ್ಕು ಸಿಕ್ಕಾಗಿ ತಲೆ ಕೆಡಿಸಿಕೊಳ್ಳುವಂತೆ ಮಾಡಲಿದೆ. ನೀವು ಹೇಳಿದ್ದನ್ನೆಲ್ಲ ಕೇಳಿದ ಮೇಲೋ ಯಾರೋ ಮಾಡಿಕೊಂಡ ಸಮಸ್ಯೆಗೆ ತಲೆ ಕೊಡುವಂತೆ ಆಗುತ್ತೆ. ಸಂಕೋಚಕ್ಕೆ ಬಿದ್ದು, ಧ್ವನಿ ಎತ್ತರಿಸಿ ಕೇಳದೆ ಹೋಗಿಬಿಟ್ಟರೆ ನೀವು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲುವಂತೆ ಆಗುತ್ತಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಮೊದಲಿನ ಉತ್ಸಾಹದಿಂದ ನಿಮ್ಮ ಮಾತಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂಬ ಕಾರಣಕ್ಕೆ ಸಂಗಾತಿಯ ಮೇಲೋ ಗೆಳೆಯ- ಗೆಳತಿ, ಪ್ರಿಯಕರ ಮೇಲೋ ಸಿಟ್ಟಾಗುವಂಥ ಸಂದರ್ಭ ಎದುರಾಗಲಿದೆ. ಯಾವುದಕ್ಕೂ ತಾಳ್ಮೆಯಿಂದ ವರ್ತಿಸಿ. ತಾತ್ಕಾಲಿಕ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಸ್ವಭಾವ ಈ ದಿನ ಮಾತ್ರ ಖಂಡಿತಾ ಬೇಡ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಅದೂ ಇರಲಿ, ಇದೂ ಇರಲಿ ಎಂದು ವಸ್ತುಗಳ ಮೇಲೆ ವಿಪರೀತ ಆಸೆ ಪಡುವುದಕ್ಕೆ ಹೋಗಬೇಡಿ. ಆದಾಯ ಚೆನ್ನಾಗಿ ಬರಲಿದೆ, ಲಾಭ ನಿಮ್ಮ ಕೈಯಲ್ಲಿ ಉಳಿಯಲಿದೆ ಎಂದೆನಿಸಿದ ಕೂಡಲೇ ಬ್ಯಾಂಕ್ ನಲ್ಲಿ ಇರಲಿ ಎಂಬ ಧೋರಣೆ ಇರುವುದು ತುಂಬ ಒಳ್ಳೆಯದು.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *