Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 28ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 28ರ ದಿನಭವಿಷ್ಯ


ಸಂಬಂಧಗಳನ್ನು ನಿರ್ವಹಿಸುವುದು ಇದೆಯಲ್ಲ ಅದು ಬಹಳ ತಲೆನೋವು. ತಪ್ಪು ಯಾರ ಕಡೆಯಿಂದಲೇ ಆದರೂ ಕ್ಷಮೆಯನ್ನು ಮಾತ್ರ ನಾವೇ ಕೇಳಬೇಕು. ಸಂಬಂಧ, ಪ್ರೀತಿ- ಪ್ರೇಮ, ದಂಪತಿ ಮಧ್ಯೆ ಕಾಡುವ ಜಗಳ- ಕಲಹಗಳಿಗೆ ಬ್ರೇಕ್ ಹಾಕುವುದಕ್ಕೆ ರೋಸ್ ಕ್ವಾರ್ಟ್ಜ್ ಸ್ಟೋನ್ ಒಂದೊಳ್ಳೆ ಪರಿಹಾರ. ಜನ್ಮಸಂಖ್ಯೆ 7, 8, 9 ಜನರಿಗೆ ಈ ಸಲಹೆ ಖಂಡಿತಾ ಸಹಾಯವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಮಗೆ ಸಿಗಬೇಕು ಅಂತಿದ್ದರೆ ಹೇಗಿದ್ದರೂ ಸಿಕ್ಕೇ ಸಿಗುತ್ತದೆ ಎಂಬ ಥಿಯರಿ ಏನೋ ಸರಿ. ಆದರೆ ಆ ಕಾರಣದಿಂದ ನಿಮ್ಮ ಅಭಿಪ್ರಾಯವನ್ನು ಹೇಳುವಂತೆ ಕೇಳಿದರೂ ಬಾಯಿ ಬಿಟ್ಟು ಏನನ್ನೂ ಹೇಳದಿರುವುದು ಎಷ್ಟು ಸರಿ? ಈ ದಿನ ನಿಮಗೆ ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ಬಾಯಿ ಬಿಟ್ಟು ಹೇಳುವುದರೊಂದಿಗೆ ಬೇಕಾದುದನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನೀವು ಬೇರೆ ಮತ್ತು ನಿಮ್ಮ ಆಲೋಚನೆಗಳು, ಲೆಕ್ಕಾಚಾರಗಳು ಬೇರೆ. ಉಳಿದವರಿಗಿಂತ ನೀವು ಬೇರೆ ಯಾವುದೋ ಲೆಕ್ಕ ಹಾಕಿದ್ದೀರಿ ಅಂತಾ ಸಂಶಯ ಪಡುವುದಕ್ಕೆ ಹೋಗಬೇಡಿ. ಅಂದುಕೊಂಡಿದ್ದು, ಅಂದುಕೊಂಡ ರೀತಿಯಲ್ಲಿಯೇ ತನ್ನಿ. ನಾಲ್ಕಾರು ಜನಕ್ಕೆ ನಿಮ್ಮಿಂದ ಈ ದಿನ ಸಹಾಯ ಆಗುವ ಯೋಗ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಆರೋಗ್ಯದ ಬಗ್ಗೆ ಇನ್ನೊಂಚೂರು ಗಮನ ಕೊಡಬೇಕು ಎಂದು ಬಲವಾಗಿ ಅನಿಸಲಿದೆ. ನಿಮ್ಮ ಉಳಿತಾಯದ ಹಣವನ್ನು ತೆಗೆದು ಸ್ವಲ್ಪ ಅಪಾಯ ಇರುವ ವ್ಯವಹಾರದಲ್ಲಿ ಹೂಡಿಕೆ ಮಾಡುವ ಬಗ್ಗೆ ಆಲೋಚನೆಯನ್ನು ಮಾಡಬೇಕಾಗಿದೆ. ಆದರೆ ಈ ದಿನ ಯಾವ ಕಾರಣಕ್ಕೂ ಕುಟುಂಬದ ಸದಸ್ಯರ ಮೇಲೆ ನಿಮ್ಮ ಸಿಟ್ಟು ತೋರಿಸಬೇಡಿ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *