Headlines

Weekly Horoscope 2026: ನಿಮ್ಮ ರಾಶಿಗನುಗುಣವಾಗಿ ಜನವರಿ ತಿಂಗಳ ಎರಡನೇ ವಾರದ ಭವಿಷ್ಯ ತಿಳಿಯಿರಿ

Weekly Horoscope 2026: ನಿಮ್ಮ ರಾಶಿಗನುಗುಣವಾಗಿ ಜನವರಿ ತಿಂಗಳ ಎರಡನೇ ವಾರದ ಭವಿಷ್ಯ ತಿಳಿಯಿರಿ


ಜನವರಿ ತಿಂಗಳ ಎರಡನೇ ವಾರ ವಿಶೇಷವಾಗಿ ಅಲೌಕಿಕ ಸಂಪತ್ತು ಪಡೆಯಬೇಕೆನ್ನುವ, ಆಸೆ ಕುತೂಹಲ. ಪರರ ಸಂಪತ್ತಿಗೂ ಬಯಕೆ ಅಧಿಕ ವಸ್ತು. ದಾನ, ಧರ್ಮದಿಂದ ಎಲ್ಲವನ್ನೂ ಸರಿಮಾಡಿಕೊಳ್ಳುವ ಮಾರ್ಗ ಸಿಗಲಿದೆ. ಶುಭವಾಗಲಿ ಎಲ್ಲರಿಗೂ

ಮೇಷ ರಾಶಿ:

ಈ ವಾರ ಸಮಯ ಅಚಾನಕ್ ತಿರುವು ತರುತ್ತದೆ. ಆತುರ ತಪ್ಪಿಸಿ ನಿರೀಕ್ಷೆ ಇಡಿ. ತಡವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಲಾಭ ಕೊಡುತ್ತವೆ. ಧೈರ್ಯಕ್ಕಿಂತ ಸಂಯಮ ಮುಖ್ಯ.

ವೃಷಭ ರಾಶಿ:

ಈ ವಾರದಲ್ಲಿ ನಿಧಾನವಾದ ಕಾಲಪ್ರವಾಹ ನಿಮ್ಮ ಪಾಲಿಗೆ ಅನುಕೂಲ. ತಾಳ್ಮೆಯಿಂದ ಮಾಡಿದ ಕೆಲಸ ಶಾಶ್ವತವಾಗಿ ಫಲಿಸಿತು. ಹಣಕಾಸಿನಲ್ಲಿ ಸ್ಥಿರತೆ. ಅಗತ್ಯವಿರುವ ಬೇಡ.

ಮಿಥುನ ರಾಶಿ:

ಎರಡನೇ ವಾರ ಮಾತು, ಮಾಹಿತಿ, ಸಂದೇಶಗಳ ಮೂಲಕ ಅವಕಾಶಗಳು ಬರುತ್ತವೆ. ಸರಿಯಾದ ಕ್ಷಣದಲ್ಲಿ ಮಾತನಾಡಿದರೆ ಲಾಭ. ಅಸಮಯದ ಮಾತು ಗೊಂದಲ ಉಂಟುಮಾಡುತ್ತದೆ.

ಕರ್ಕಾಟಕ ರಾಶಿ:

ಈ ರಾಶಿಗೆ ಎರಡನೇ ವಾರ ಭಾವನಾತ್ಮಕತೆಯಿಂದ ಪ್ರಭಾವ ಜಾಸ್ತಿ. ಮನಸ್ಸು ಒಪ್ಪಿದ ಸಮಯದಲ್ಲೇ ಕಾರ್ಯಸಾಧನೆ. ಒತ್ತಾಯದ ಕೆಲಸ ವಿಫಲವಾಗಿದೆ. ಕುಟುಂಬದ ವಿಚಾರಗಳು ಮನಸ್ಸನ್ನು ಆವರಿಸುತ್ತವೆ.

ಸಿಂಹ ರಾಶಿ:

ಈ ವಾರ ನಾಯಕತ್ವ ವಿಜೃಂಭಿಸುವ ಸಮಯ. ಮುನ್ನಡೆಸಿದರೆ ಫಲ. ಪ್ರಮಾಣ. ಆದರೆ ಅಹಂಕಾರ ಹೆಚ್ಚಾದರೆ ಹಿನ್ನಡೆ. ಗೌರವ, ಅಧಿಕಾರ ಸಂಬಂಧಿತ ವಿಚಾರಗಳು ಮುನ್ನೆಲೆ.

ಕನ್ಯಾ ರಾಶಿ:

ಬುಧನ ಅಧಿಪತ್ಯದ ಈ ರಾಶಿಯ ಸೂಕ್ಷ್ಮತೆಯನ್ನು ಪರೀಕ್ಷಿಸುವ ಕಾಲ. ಸಣ್ಣ ತಪ್ಪಿಗೂ ಹೆಚ್ಚು ಪರಿಣಾಮ. ಸಮಯಪಾಲನೆ, ಕ್ರಮಬದ್ಧತೆ ಜಯ ತರುತ್ತದೆ. ಕೆಲಸದ ಒತ್ತಡ ಹೆಚ್ಚಾದರೂ ಫಲ ಸಿಗುತ್ತದೆ.

ತುಲಾ ರಾಶಿ:

ನಿಮಗೆ ಈ ವಾರ ಸಮತೋಲನದ ಅವಶ್ಯಕತೆ ಹೆಚ್ಚು. ಎರಡು ವಿಷಯಗಳ ನಡುವೆ ತೀರ್ಮಾನ ಅಗತ್ಯ. ತೂಕ ಹಾಕಿ ನಿರ್ಧಾರ ತೆಗೆದುಕೊಂಡರೆ ಲಾಭ. ಸಂಬಂಧಗಳಲ್ಲಿ ಸಂಯಮ ಬೇಕು.

ವೃಶ್ಚಿಕ ರಾಶಿ:

ಜನವರಿಯ ಎರಡನೇ ವಾರ ಗುಪ್ತವಾಗಿರುವ ಕಾಲದ ಪ್ರಭಾವವನ್ನು ಎದುರಿಸುವಿರಿ. ಮೌನವಾಗಿ ಪ್ರಯತ್ನ ಮಾಡಲು ಬೆಂಬಲ. ರಹಸ್ಯ ಯೋಜನೆಗಳು ಫಲ ಕೊಡುತ್ತವೆ. ಬಹಿರಂಗ ಮಾತುಗಳಿಂದ ದೂರವಿರುವುದು ಒಳಿತು.

ಧನು ರಾಶಿ:

ಈ ವಾರ ವಿಸ್ತಾರವಾಗಿ ಹರಡಿದ ನಿಮ್ಮ ಸಮಯವನ್ನು ಏನು ಮಾಡಬೇಕು ಎಂಬ ಜಿಜ್ಞಾಸೆ. ಮುಂದಿನ ದಿನಗಳ ಯೋಜನೆಗಳು ಮಹತ್ವದವು. ಈಗ ಮಾಡಿದ ಪ್ರಯತ್ನಗಳ ಫಲ ತಡವಾಗಿ ಬರುತ್ತದೆ. ಆತುರಕ್ಕಿಂತ ದೃಷ್ಟಿಕೋನ ಮುಖ್ಯ.

ಮಕರ ರಾಶಿ:

ನೀವು ಈ ವಾರದಲ್ಲಿ ಶ್ರಮ, ಶಿಸ್ತಿನ ಬಗ್ಗೆ ಗಮನ ಹರಿಸುವ ಕಾಲ. ಸಮಯಕ್ಕೆ ಮಾಡಿದ ಕಠಿಣ ಪರಿಶ್ರಮ ಗೌರವ ತರುತ್ತದೆ. ಸುಲಭ ದಾರಿ ಹಾನಿಕರ. ಜವಾಬ್ದಾರಿಗಳು ಹೆಚ್ಚಾದರೂ ಸ್ಥಿರತೆ ಸಿಗುತ್ತದೆ.

ಕುಂಭ ರಾಶಿ:

ಶನಿಯ ಅಧಿಪತ್ಯದ ಈ ರಾಶಿಯವರಿಗೆ ಅನಿರೀಕ್ಷಿತ ಬದಲಾವಣೆಯ ಸಮಯ ಎದುರಾಗುವುದು. ನಿರೀಕ್ಷಿಸಿದ ಅವಕಾಶಗಳು ಬರುತ್ತವೆ. ಯೋಚನೆ ಬಿಡಿ. ಬದಲಾವಣೆ ಸ್ವೀಕರಿಸಿದರೆ ಲಾಭ ಸಾಧ್ಯ.

ಮೀನ ರಾಶಿ:

ಆಂತರಿಕ ಜ್ಞಾನವು ಕಾರ್ಯನಿರ್ವಹಿಸುತ್ತದೆ, ಅದನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕು. ಮನಸ್ಸಿನ ಸೂಚನೆ ಅನುಸರಿಸಿದರೆ ಯಶಸ್ಸು. ಹೊರಗಿನ ಸಲಹೆಗಿಂತ ಸ್ವಂತ ಅನುಭವ ಮುಖ್ಯವಾಗುತ್ತದೆ.

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *