
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮನ್ನು ನೀವು ಪಡೆಯುವ ದಿನ ಇದಾಗಿದೆ. ಜನರ ಗುಂಪಿನ ನಡುವೆ ಇರುವ ಒಂಟಿಯಾಗಿ ಮಾಡಲು ಇಷ್ಟಪಡುತ್ತೀರಿ. ಸಂಶೋಧನೆ ಕ್ಷೇತ್ರದಲ್ಲಿ ಇರುವವರಿಗೆ ಮತ್ತು ಬರಹಗಾರರಿಗೆ ಹೊಸ ಆಲೋಚನೆಗಳು ಹೊಳೆಯಲಿವೆ. ಧಾರ್ಮಿಕ ಕೆಲಸಗಳಿಗಾಗಿ ಸ್ವಲ್ಪ ಹಣ ವಿನಿಯೋಗಿಸುವಿರಿ. ಹಳೆಯ ಗೆಳೆಯನೊಬ್ಬನ ಸಹಾಯ ಕೇಳಿ ಬರಬಹುದು, ಆದರೆ ಶಕ್ತಿ ಮೀರಿ ಸಾಲ ನೀಡಬೇಡಿ. ರಾತ್ರಿ ನಿದ್ರಾಹೀನತೆ ಕಾಡಬಹುದು, ಮಲಗುವ ಮುನ್ನ ಪುಸ್ತಕ ಓದುವ ಅಭ್ಯಾಸ ಮಾಡಿಕೊಳ್ಳಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಉದ್ಯೋಗಸ್ಥರಿಗೆ ಕಠಿಣ ಶ್ರಮದ ದಿನ. ಯುಪಿಐ ಪಾವತಿ ವಿಧಾನವನ್ನು ಬಳಸಲಾಗುತ್ತಿದೆ ಅಂತಾದಲ್ಲಿ ಯಾವ ಸಂಖ್ಯೆಗೆ ಹಾಗೂ ಎಷ್ಟು ವರ್ಗಾವಣೆ ಮೊತ್ತವನ್ನು ಪರಿಶೀಲಿಸಿಕೊಳ್ಳಿ. ಕಾನೂನು ಸಂಬಂಧಿತ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳಿವೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕಾಗಿ ಮಾತುಕತೆ ನಡೆಸಲು ಇಂದು ಶುಭ ದಿನ. ಕೆಲಸಗಾರರ ಕೊರತೆ ಇಂದು ನಿಮ್ಮನ್ನು ಕಾಡಬಹುದು. ಆದರೂ ಸೋಲೊಪ್ಪದೆ ಕೆಲಸ ಮುಗಿಸಿ. ಬೆನ್ನು ಅಥವಾ ಕುತ್ತಿಗೆ ನೋವು ಕಾಡಬಹುದು.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮ್ಮ ಶಕ್ತಿಯ ಮಟ್ಟ ತುಂಬಾ ಹೆಚ್ಚಿರುತ್ತದೆ. ಆದರೆ ಆ ಶಕ್ತಿಯನ್ನು ಕೋಪಕ್ಕೆ ಬಳಸದೆ ಕೆಲಸಕ್ಕೆ ಬಳಸಿ. ಭೂ ವ್ಯವಹಾರ ಅಥವಾ ರಿಯಲ್ ಎಸ್ಟೇಟ್ನಲ್ಲಿ ತೊಡಗಿದವರಿಗೆ ಇಂದು ಲಾಭದಾಯಕ ಒಪ್ಪಂದಗಳು ಸಿಗಲಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉತ್ತಮ ಫಲಿತಾಂಶದ ಮುನ್ಸೂಚನೆ ಇದೆ. ವಾಹನ ಚಾಲನೆಯಲ್ಲಿ ಅತಿ ವೇಗ ಬೇಡ. ರೋಗ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಕೆಂಪು ಬಣ್ಣದ ಹಣ್ಣುಗಳ ಸೇವನೆ ಅಥವಾ ದಾನ ಮಾಡುವುದು ಶುಭದೆ.
ಲೇಖನ- ಎನ್.ಕೆ.ಸ್ವಾತಿ