Headlines

ದೇವರನ್ನು ನಂಬದ ಜಾವೇದ್ ಅಖ್ತರ್ ಈಗ ನಮಾಜ್ ಶುರು ಮಾಡಿದ್ರಾ? ಕೇಸ್ ಹಾಕುವುದಾಗಿ ಎಚ್ಚರಿಕೆ

ದೇವರನ್ನು ನಂಬದ ಜಾವೇದ್ ಅಖ್ತರ್ ಈಗ ನಮಾಜ್ ಶುರು ಮಾಡಿದ್ರಾ? ಕೇಸ್ ಹಾಕುವುದಾಗಿ ಎಚ್ಚರಿಕೆ


ಹಿರಿಯ ಚಿತ್ರಕಥೆಗಾರ, ಸಾಹಿತಿ ಜಾವೇದ್ ಅಖ್ತರ್ ಅವರು ನಾಸ್ತಿಕ (ನಾಸ್ತಿಕ) ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಂದರೆ, ಜಾವೇದ್ ಅಖ್ತರ್ ಅವರು ದೇವರ ಮೇಲೆ ನಂಬಿಕೆ ಇಲ್ಲ. ದೇವರ ಅಸ್ತಿತ್ವವನ್ನು ಅವರು ಒಪ್ಪುವುದಿಲ್ಲ. ಇದಕ್ಕೆ ಅವರು ಅನೇಕ ಬಾರಿ ಮಾತನಾಡಿದ್ದಾರೆ. ಆದರೆ ಈಗ ಅವರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿದೆ. ಟೋಪಿ ಧರಿಸಿ ನಮಸ್ ಕೂಡ ಮಾಡಲು ಆರಂಭಿಸಿದ್ದಾರೆ ಎಂದು ಅಂತೆ-ಕಂತೆ ಹಬ್ಬಿಸಲಾಗಿದೆ. ಅದರ ವಿರುದ್ಧ ಜಾವೇದ್ ಅಖ್ತರ್ (ಜಾವೇದ್ ಅಖ್ತರ್) ಗರಂ ಆಗಿದ್ದಾರೆ.

ಎಕ್ಸ್ (ಟ್ವಿಟರ್) ಖಾತೆಯಲ್ಲಿ ಜಾವೇದ್ ಅಖ್ತರ್ ಅವರು ಒಂದು ವಿಡಿಯೋ ಲಿಂಕ್ ಹಂಚಿಕೊಂಡಿದ್ದಾರೆ. ತಲೆಗೆ ಮುಸ್ಲಿಂ ಟೋಪಿ ಹಾಕಿರುವ ಚಿತ್ರವಿದೆ. ‘ಜಾವೇದ್ ಅಖ್ತರ್ ಅವರು ಪೂರ್ತಿಯಾಗಿ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಅಲ್ಲಾ ಇರುವುದನ್ನು ಒಪ್ಪು, ತಲೆ ಮೇಲೆ ಟೋಪಿ ಹಾಕಿಕೊಂಡು, ನಮಾಜ್ ಮಾಡಲು ಮಸೀದಿಗೆ ಹೋಗಿದ್ದಾರೆ. ಅವರೀಗ ಪಕ್ಕಾ ಮುಸಲ್ಮಾನ ಆಗಿದ್ದಾರೆ’ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಈ ವದಂತಿಯ ವಿರುದ್ಧ ಜಾವೇದ್ ಅಖ್ತರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಎಐ ಫೋಟೋ ಮತ್ತು ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ವಿಡಿಯೋ ಫಾರ್ವರ್ಡ್ ಮಾಡಿದವರಿಗೆ ಕಾನೂನಿನ ಮೂಲಕ ಪಾಠ ಕಲಿಸುವುದಾಗಿ ಜಾವೇದ್ ಅಖ್ತರ್ ಅವರು ಎಚ್ಚರಿಕೆ ನೀಡಿದ್ದಾರೆ.

‘ನಾನು ಟೋಪಿ ಧರಿಸಿರುವ ನಕಲಿ ಫೋಟೋವನ್ನು ವೈರಲ್ ಮಾಡುತ್ತಿದ್ದೇನೆ. ದೇವರನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗಿದೆ. ಇದೆಲ್ಲ ಸುಳ್ಳು. ಸೈಬರ್ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ. ಈ ಸುಳ್ಳು ಸುದ್ದಿಗೆ ಕಾರಣ ಆದ ವ್ಯಕ್ತಿಯನ್ನು ಹಿಡಿಯುತ್ತೇವೆ. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಿದೆ’ ಎಂದು ಜಾವೇದ್ ಅಖ್ತರ್ ಅವರು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮೊಬೈಲ್‌ ನಾಸ್ತಿಕರ ಆವಿಷ್ಕಾರ ಅದನ್ನು ಬಳಸಲಿಲ್ಲ, ವಿದ್ಯಾರ್ಥಿಗಳ ಫೋನ್‌ ಪುಡಿ ಪುಡಿ ಮಾಡಿದ ಮದರಸ ಗುರು

ಕೆಲವು ದಿನಗಳ ಹಿಂದೆ ‘ದೇವರು ಇದ್ದಾನಾ’ ಎಂಬ ವಿಷಯದ ಮೇಲೆ ಜಾವೇದ್ ಅಖ್ತರ್ ಅವರು ಚರ್ಚೆಯಲ್ಲಿ ಇದ್ದರು. ಆ ಚರ್ಚೆಯ ವಿಡಿಯೋಗಳು ವೈರಲ್ ಆಗಿವೆ. ಅದರ ಬೆನ್ನಲ್ಲೇ ಈ ರೀತಿಯ ಫೇಕ್ ನ್ಯೂಸ್ ಹಬ್ಬಿದ್ದು, ಜಾವೇದ್ ಅಖ್ತರ್ ಅವರು ಗುಡುಗಿದ್ದಾರೆ. ಐ ಮೂಲಕ ಜಾವೇದ್ ಅಖ್ತರ್ ಅವರ ಫೇಕ್ ಫೋಟೋವನ್ನು ಕ್ರಿಯೇಟ್ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *