‘ಜೆಸಿ’ ಸಿನಿಮಾ ವಿಮರ್ಶೆ: ಮಾಸ್ ಮಸಾಲ ಜೊತೆ ಕಲಸುಮೇಲೋಗರ

‘ಜೆಸಿ’ ಸಿನಿಮಾ ವಿಮರ್ಶೆ: ಮಾಸ್ ಮಸಾಲ ಜೊತೆ ಕಲಸುಮೇಲೋಗರ


ಕೊಲೆ, ರಕ್ತಪಾತಗಳ ಸಿನಿಮಾಗಳು ಸಾಕಷ್ಟು ಬಂದು ಹೋಗಿವೆ. ಇದಕ್ಕೆ ದೊಡ್ಡದಾದ ಅಭಿಮಾನಿ ಬಳಗವೇ ಇದೆ. ಸೂರ್ಯ ಪ್ರಖ್ಯಾತ್ ನಟನೆಯ ‘ಜೆಸಿ: ದಿ ಯೂನಿವರ್ಸಿಟಿ’ ಸಿನಿಮಾ ಕೂಡ ಇದೆ ಶೈಲಿಯಲ್ಲಿ ಮೂಡಿ ಬಂದಿದೆ ಎಂಬುದು ಟ್ರೇಲರ್ ನೋಡಿದವರಿಗೆ ಗೊತ್ತಾಗುತ್ತದೆ. ಈ ಸಿನಿಮಾಗೆ ಡಾಲಿ ಧನಂಜಯ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ವಿಮರ್ಶೆ ಇಲ್ಲಿದೆ.

ಮ್ಯಾಡಿ (ಸೂರ್ಯ ಪ್ರಖ್ಯಾತ್) ಕಾಲೇಜು ಓದುವ ವಿದ್ಯಾರ್ಥಿ. ತಾನಾಯ್ತು, ತನ್ನ ಕಾಲೇಜಾಯ್ತು ಎಂದು ಹಾಯಾಗಿ ಇರುತ್ತಾನೆ. ಬೆಂಗಳೂರಿನ ಭೂಗತ ಜಗತ್ತು ಹೀಗಿದೆ ಕನಸಲ್ಲೂ ಆತ ಕಂಡವನಲ್ಲ. ಆದರೂ ಜೈಲು ಸೇರಬೇಕಾದ ಪರಿಸ್ಥಿತಿ ಬರುತ್ತದೆ. ಅಲ್ಲಿ ನರಕಯಾತನ ಅನುಭವಿಸುತ್ತಾನೆ. ಇದಕ್ಕೆ ಕಾರಣ ಏನು? ಮುಂದೆ ಜೀವನ ಹೇಗೆ ಸಾಗುತ್ತದೆ ಎಂಬುದು ಚಿತ್ರದ ಕಥೆ. ‘ಜೆಸಿ’ ಸಿನಿಮಾ ಆರಂಭವಾದ ಕೆಲವೇ ನಿಮಿಷಗಳಲ್ಲಿ ನಡೆದಿದ್ದು, ಮುಂದೆ ನಡೆಯಬೇಕಾಗಿದ್ದನ್ನು ತೋರಿಸಿಕೊಟ್ಟಿದ್ದಾರೆ. ಪ್ರಮುಖ ವಿಲನ್ ಎಂದೆನಿಸಿಕೊಂಡವನ ಕೊಲೆ ಎಂಬುದು ಬೆಂಗಳೂರಿನ ಭೂಗತಲೋಕದಲ್ಲಿ ಕಾಡ್ಗಿಚ್ಚಿನಂತೆ ಹಬ್ಬುವಾಗ ಕಥೆ ಪ್ರಸ್ತುತ ದಿನಕ್ಕೆ ತೆರೆದುಕೊಳ್ಳುತ್ತದೆ.

‘ನಡುವೆ ಅಂತರವಿರಲಿ’ ಹೆಸರಿನ ಸಿನಿಮಾದಲ್ಲಿ ರೊಮ್ಯಾಂಟಿಕ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಸೂರ್ಯ ಪ್ರಖ್ಯಾತ್, ಜೆಸಿ ಸಿನಿಮಾದಲ್ಲಿ ಚೂರಿಗಳ ಜೊತೆ, ಗನ್ ಗಳ ಜೊತೆ ಆಡಿದ್ದಾರೆ. ರಕ್ತದಲ್ಲೇ ಸ್ನಾನ ಮಾಡಲಾಗಿದೆ. ಕೆನ್ನೆಗೆ ಬಿದ್ದ ಏಟನ್ನು ಗಂಭೀರವಾಗಿ ತೆಗೆದುಕೊಂಡ, ಕನಸಿನಲ್ಲೂ ಕಾಣದ ದಾರಿ ತುಳಿಯುತ್ತಾನೆ ಕಥಾ ನಾಯಕ. ಅಲ್ಲಿಂದ ಆತನ ಓಟ ಶುರು. ಲವರ್ ಬಾಯ್ ಆಗಿ, ಅಪ್ಪನ ಮುದ್ದಿನ ಮಗನಾಗಿದ್ದ ಕಥಾ ನಾಯಕ, ಎದುರುಗಿದ್ದವರನ್ನು ಮನಸೋ ಇಚ್ಛೆ ಕೊಚ್ಚೋ ರಾಕ್ಷಸನಾಗುತ್ತಾನೆ. ಅವರ ನಟನೆ ಗಮನ ಸೆಳೆಯುತ್ತದೆ. ಸಿನಿಮಾವನ್ನು ಅವರು ಆವರಿಸಿಕೊಂಡಿದ್ದಾರೆ.

ಪ್ರಖ್ಯಾತ್ ಪ್ರೇಯಸಿ ಪಾತ್ರದಲ್ಲಿ ಭಾವನಾ ರೆಡ್ಡಿ ಕಾಣಿಸಿಕೊಂಡಿದ್ದು, ಮುದ್ದಾಗಿ ಕಾಣಿಸುತ್ತಾರೆ. ನಟನೆಯ ವಿಷಯದಲ್ಲಿ ಅವರು ಮತ್ತಷ್ಟು ಪಳಗಬೇಕಾಗಿದೆ. ಥ್ರಿಲ್ಲರ್ ಮಂಜು ಪಾತ್ರಕ್ಕೆ ಮತ್ತಷ್ಟು ತೂಕವಿತ್ತು. ರಂಗಾಯಣ ರಘು ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿಲನ್‌ಗಳ ದಂಡೇ ಇದ್ದು, ಕವಳ, ರಾಕಾ ಪಾತ್ರಗಳು ಹೈಲೈಟ್ ಆಗಿವೆ. ಟ್ವಿನ್ಸ್ ಪಾತ್ರ ಕೂಡ ಮೆಚ್ಚುಗೆ ಪಡೆಯುತ್ತದೆ.

ಕೆಟ್ಟ ಕೆಲಸ ಮಾಡಿ ಜೈಲು ಸೇರಿದರೆ ನಮ್ಮನ್ನು ಕಾಡುವ ಪಶ್ಚಾತ್ತಾಪ ಇದ್ದ ಕ್ರೂರ ಇರುವ ನಿರ್ದೇಶಕರು ಮನದಟ್ಟು ಮಾಡೋ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಆಗಾಗ ಅಕ್ರಮಗಳ ಬಗ್ಗೆ ವರದಿ ಆಗುತ್ತಲೇ ಇರುತ್ತದೆ. ಈ ರೀತಿಯ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ನಿರ್ದೇಶಕ ಚೇತನ್ ಜಯರಾಮ್ ಬರೆದಿದ್ದಾರೆ. AZ, ಟ್ವಿನ್ಸ್, ಕವಳ, ರಾಕಾ ರೀತಿಯ ಪಾತ್ರದ ಹೆಸರುಗಳು ಗಮನ ಸೆಳೆಯುತ್ತವೆ. ಇದೊಂದು ಪಕ್ಕಾ ರಾ ಚಿತ್ರ. ಇಲ್ಲಿ ಸಾಕಷ್ಟು ರಕ್ತ ಹರಿಯುತ್ತದೆ. ಕೊಲೆಗಳಾಗುತ್ತವೆ. ಈ ಕಾರಣದಿಂದಲೇ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲಾಗುತ್ತದೆ. ಹೀಗಾಗಿ, ಆ ಬಗ್ಗೆ ಯಾರೂ ತಕರಾರು ತೆಗೆಯಲಿಲ್ಲ.

ಹಾಗಾದರೆ ಇದು ಪರ್ಫೆಕ್ಟ್ ಚಿತ್ರನಾ? ಇಲ್ಲ. ಅವಧಿ 2.43 ಗಂಟೆ ಇದೆ ಚಿತ್ರದ. ಭೂತಕಾಲ, ಭವಿಷ್ಯತ್ ಕಾಲ, ಪ್ರಸ್ತುತಗಳ ನಡುವೆ ಮೊದಲಾರ್ಧದ ಕಥೆ ಪ್ರೇಕ್ಷಕನನ್ನು ನೋಡುತ್ತಾ ಸಾಗುತ್ತದೆ. ಇಂಟರ್ವಲ್ ಬ್ಲಾಕ್ ಚಿತ್ರ ಮತ್ತೊಂದು ಹಂತಕ್ಕೆ ಹೋಗುತ್ತದೆ. ಆದರೆ, ದ್ವಿತೀಯಾರ್ಧದ ಬಳಿಕ ಎಳೆದಾಟ ಶುರು. ತೆರೆಮೇಲೆ ಕತ್ತಿಗಳನ್ನು ಝಳಪಿಸಿದಂತೆ, ಕೆಲವು ದೃಶ್ಯಗಳನ್ನು ಅವರು ಲಾಂಗ್ ಪ್ರಯೋಗ ಮಾಡಬೇಕಿತ್ತು. ಅನಗತ್ಯ ದೃಶ್ಯಗಳನ್ನು ತೆಗೆದಿದ್ದರೆ ಸಿನಿಮಾ ಮತ್ತಷ್ಟು ಸುಂದರವಾಗುತ್ತಿತ್ತು. ಅಪ್ಪ-ಮಗನ ಸೆಂಟಿಮೆಂಟ್ ತೋರಿಸಲು ಸಾಕಷ್ಟು ಶ್ರಮ ಹಾಕಿ ಅದನ್ನು ವ್ಯರ್ಥ ಮಾಡಿದೆ. ಸಿನಿಮಾದಲ್ಲಿ ನಾಲ್ಕೈದು ಹಾಡುಗಳು ಬರುತ್ತವೆಯಾದರೂ ಸಂಗೀತ ಕಿವಿಯಲ್ಲಿ, ಸಾಹಿತ್ಯ ಮನಸ್ಸಿನಲ್ಲಿ ಉಳಿದುಕೊಳ್ಳುವುದಿಲ್ಲ. ಮಾಸ್ತಿ ಡೈಲಾಗ್ ಚಿತ್ರಕ್ಕೆ ಕೆಲವು ಕಡೆ ಪ್ಲಸ್ ಆದರೆ, ಇನ್ನೂ ಕೆಲವು ಕಡೆ ಮೈನಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *