Kalaburagi: ಓಪನ್​​ ಮೀಟಿಂಗ್​​ನಲ್ಲೇ ಹಣಕ್ಕೆ ತಹಶೀಲ್ದಾರ್​​ ಡಿಮ್ಯಾಂಡ್​​; ಆಡಿಯೋ ವೈರಲ್​​

Kalaburagi: ಓಪನ್​​ ಮೀಟಿಂಗ್​​ನಲ್ಲೇ ಹಣಕ್ಕೆ ತಹಶೀಲ್ದಾರ್​​ ಡಿಮ್ಯಾಂಡ್​​; ಆಡಿಯೋ ವೈರಲ್​​


ಕಲಬುರಗಿ, ಜನವರಿ 16: ಸಿಬ್ಬಂದಿ ಬಳಿ ತಹಶೀಲ್ದಾರ್ ಅವರೇ ಹಣಕ್ಕಾಗಿ ಬೇಡಿಕೆ ಇಟ್ಟು ಕಿರುಕುಳ ನೀಡಿರುವ ಆರೋಪ ಕಲಬುರಗಿಯಲ್ಲಿ ಕೇಳಿಬಂದಿದ್ದು, ಜೇವರ್ಗಿ ತಹಶೀಲ್ದಾರ್ ಮತ್ತು ಸಿಬ್ಬಂದಿ ನಡುವಿನ ಆಡಿಯೋ ವೈರಲ್ ಆಗಿದೆ. ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಓಪನ್ ಮೀಟಿಂಗ್ ನಲ್ಲೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆಂದು ಹೇಳಲಾಗಿದೆ, ಕಿರುಕುಳದಿಂದ ಬೇಸತ್ತ ಸಿಬ್ಬಂದಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರನ್ನೂ ನೀಡಿರುವ ಪ್ರಸಂಗ ನಡೆದಿದೆ.

ಸಿಬ್ಬಂದಿಗೆ ತಹಶೀಲ್ದಾರ್ ಆವಾಜ್


ನನ್ನ ಹೆಸರಿನಲ್ಲಿ ನೀವು ಹಣ ಮಾಡ್ತೀರಿ, ನನಗೂ ಹಣ ನೀಡಿ ಎಂದು ತಹಶೀಲ್ದಾರ್ ಮಲ್ಲಣ್ಣ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ ಎಂದು ದೂರಲಾಗಿದೆ. ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು RI ಜವಾಬ್ದಾರಿಯೇ ಬೇಡ, ನನ್ನನು ಕಚೇರಿಗೆ ಕೆಲಸಕ್ಕೆ ಹಾಕಿ, ನನಗೆ ಹಣ ನೀಡಲು ಆಗಲ್ಲ ಎಂದ ಸಿಬ್ಬಂದಿ ಅಲವತ್ತುಕೊಂಡಿದ್ದಾರೆ. ಸರ್ಕಾರಿ ಜಯಂತಿಗಳು, ಶಾಸಕರು ಹೇಳುವ ಕೆಲಸಗಳಿಗೆಲ್ಲ ನಾವು ಹಣ ಕೊಡಬೇಕು. ನಾವು ದುಡ್ಡನ್ನು ಎಲ್ಲಿಂದ ಕೊಡೋದು? ಎಂದು ತಹಶೀಲ್ದಾರ್ ಮಲ್ಲಣ್ಣಗೆ ಸಿಬ್ಬಂದಿ ಪ್ರಶ್ನೆ ಹಾಕಿದರೂ ಎಲ್ಲಾ ಇಲಾಖೆಯವರು ಹಣ ಕೊಡ್ತಾರೆ ನೀವು ಕೊಡಿ ಎಂದು ಮಲ್ಲಣ್ಣ ಹೇಳಿದ್ದಾರೆ. ಇಲ್ಲವಾದಲ್ಲಿ ನಿಮ್ಮ ವಿರುದ್ಧ ತನಿಖೆಗೆ ಸೂಚಿಸಲಾಗಿದೆ ಎಂದು ಬೆದರಿಕೆಯನ್ನೂ ಹಾಕಿರೋದಾಗಿ ಸಿಬ್ಬಂದಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಶೂಟ್ ಮಾಡಿಕೊಂಡು ಪತಿ ಆತ್ಮಹತ್ಯೆ; ನನ್ನ ಗಂಡ ಸೈಕೋ ಎಂದ ಪತ್ನಿ, ಆಗಿದ್ದೇನು?

ತಹಶೀಲ್ದಾರ್ ಸ್ಪಷ್ಟನೆ

ಇನ್ನು ತಮ್ಮ ಮೇಲೆ ಕೇಳಿಬಂದಿರುವ ಆರೋಪಗಳ ಕುರಿತು ಜೇವರ್ಗಿ ತಹಶೀಲ್ದಾರ ಮಲ್ಲಣ್ಣ ಯಲಗೋಡ್ ಹೇಳಿಕೆ ನೀಡಿದ್ದಾರೆ. 6 ತಿಂಗಳ ಹಿಂದೆ ಕನ್ನಡಭವನದಲ್ಲಿ ನಡೆದಿದ್ದ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಈ ನಾನು ಸಿಬ್ಬಂದಿ ಜೊತೆ ಚರ್ಚಿಸುತ್ತಿದ್ದೇನೆ, ಯಾವ ಸಿಬ್ಬಂದಿ ಬಳಿಯೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಶರಣು ಎಂಬ ವಿಎಯನ್ನು 6 ತಿಂಗಳ ಹಿಂದೆ ಅಮಾನತು ಮಾಡಿದ್ದು, ಆತನೇ ಇದನ್ನೆಲ್ಲ ಮಾಡಿ ಎಲ್ಲ ಕಡೆ ದೂರು ಕೊಟ್ಟಿದ್ದಾನೆ. ನಾನು ಹಣ ಕೇಳಿದ್ರೆ ಎಲ್ಲ ಸಿಬ್ಬಂದಿ ಸೇರಿ ದೂರು ಕೊಡಬಹುದಾಗಿತ್ತು. ಈ ಹಿಂದಿನ ತಹಶೀಲ್ದಾರ್ ಅವರಿಗೂ ಆತ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಅದೇ ರೀತಿ ನನಗೂ ಸಹ ಬ್ಲ್ಯಾಕ್‌ಮೇಲ್ ಮಾಡಲು ಬಂದಿದ್ದಾನೆ. ಆದರೆ ಆತನ ಬೆದರಿಕೆಗೆ ನಾನು ಹೆದರುವುದಿಲ್ಲ ಎಂದು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 3:11 pm, ಶುಕ್ರ, 16 ಜನವರಿ 26



Source link

Leave a Reply

Your email address will not be published. Required fields are marked *